ಸಮಾಜದಲ್ಲಿ ದಾನ ಅತ್ಯಂತ ಪುಣ್ಯದ ಕಾರ್ಯ. ಸಂಪಾದಿಸಿದ ಹಣದಲ್ಲಿ ಕೆಲ ಭಾಗವನ್ನು ಸಮಾಜಕ್ಕೆ ದಾನದ ರೂಪದಲ್ಲಿ ವಿನಿಯೋಗಿಸಿದಲ್ಲಿ ಸಂತೃಪ್ತಿ, ನೆಮ್ಮದಿ ದೊರೆಯಲಿದ್ದು, ಸಮಾಜ ದಾನಿಗಳನ್ನು ಸದಾಕಾಲ ಸ್ಮರಿಸಲಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ಕೆ.ಪಾಲಾಕ್ಷ ತಿಳಿಸಿದರು.
ಕನ್ನಡಪ್ರಭ ವಾರ್ತೆ ಶಿಕಾರಿಪುರ
ಸಮಾಜದಲ್ಲಿ ದಾನ ಅತ್ಯಂತ ಪುಣ್ಯದ ಕಾರ್ಯ. ಸಂಪಾದಿಸಿದ ಹಣದಲ್ಲಿ ಕೆಲ ಭಾಗವನ್ನು ಸಮಾಜಕ್ಕೆ ದಾನದ ರೂಪದಲ್ಲಿ ವಿನಿಯೋಗಿಸಿದಲ್ಲಿ ಸಂತೃಪ್ತಿ, ನೆಮ್ಮದಿ ದೊರೆಯಲಿದ್ದು, ಸಮಾಜ ದಾನಿಗಳನ್ನು ಸದಾಕಾಲ ಸ್ಮರಿಸಲಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ಕೆ.ಪಾಲಾಕ್ಷ ತಿಳಿಸಿದರು.ಪಟ್ಟಣದ ಭವಾನಿರಾವ್ ಕೇರಿಯಲ್ಲಿನ ಮೈತ್ರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಕ್ಲಬ್ ಶಿಕಾರಿಪುರ ಕದಂಬ ವತಿಯಿಂದ ನಡೆದ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮನುಷ್ಯ ಸಮಾಜ ಜೀವಿ, ಸಮಾಜದಲ್ಲಿ ಎಲ್ಲರ ಮದ್ಯೆ ಬದುಕುವ ವ್ಯಕ್ತಿ. ಸರ್ವರಿಂದ ಸರ್ವರಿಗಾಗಿ ಜೀವಿಸುವುದನ್ನು ಕಲಿಯಬೇಕು ಎಂದ ಅವರು, ಕೇವಲ ಕುಟುಂಬಕ್ಕೆ ಮಾತ್ರ ಸೀಮಿತವಾಗದೆ, ವಿಶಾಲ ದೃಷ್ಟಿಕೋನದಿಂದ ಸಮುದಾಯಕ್ಕೆ ಕೊಡುಗೆ ನೀಡುವ ಗುಣ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.ಸಮಾಜದಲ್ಲಿನ ಪ್ರತಿಯೊಬ್ಬ ವ್ಯಕ್ತಿ ವೈಯುಕ್ತಿಕ ಹಾಗೂ ಕುಟುಂಬಕ್ಕೆ ಅಗತ್ಯವಿರುವ ಹಣ ಸಂಪಾದಿಸುವುದು ಸಹಜ. ಆಹಾರ ನಿದ್ರೆ ತ್ಯಜಿಸಿ ಹೆಚ್ಚು ಹೆಚ್ಚು ಸಂಪಾದನೆಯಿಂದ ಆರೋಗ್ಯ, ಸೌಂದರ್ಯ ಪಡೆಯಲು ಸಾಧ್ಯವಿಲ್ಲ. ಈ ದಿಸೆಯಲ್ಲಿ ದುಡಿಮೆಯ ಕೆಲ ಭಾಗವನ್ನು ಸಮಾಜಕ್ಕೆ ದಾನ ಮಾಡುವುದರ ಮೂಲಕ ಆತ್ಮ ತೃಪ್ತಿ ಹೊಂದಲು ಸಾಧ್ಯ ಎಂದ ಅವರು, ಪ್ರತಿಯೊಬ್ಬರೂ ಸಂಘ ಸಂಸ್ಥೆಗೆ ಸೇರ್ಪಡೆಗೊಂಡು ಸಾರ್ವಜನಿಕ ಜೀವನದಲ್ಲಿ ಯುವ ಸಮೂಹ, ಶಾಲಾ ಕಾಲೇಜು, ರಕ್ತದಾನ, ರಸ್ತೆ ಅಭಿವೃದ್ಧಿ ಮತ್ತಿತರ ಉದ್ದೇಶದಿಂದ ಕಾರ್ಯ ನಿರ್ವಹಿಸಿದಾಗ ವೈಯುಕ್ತಿಕ ನೆಮ್ಮದಿ ಜತೆಗೆ ಸಮುದಾಯ ಅಭಿವೃದ್ಧಿ ಹೊಂದಲಿದೆ ಎಂದರು.
ಕದಂಬ ರೋಟರಿ ಅಧ್ಯಕ್ಷ ಶಿವಮೂರ್ತಿ, ರಕ್ತದಾನ ಶಿಬಿರ, ಸ್ವಚ್ಛತಾ ಕಾರ್ಯ, ಶಾಲಾ-ಕಾಲೇಜುಗಳಲ್ಲಿ ಸ್ಪರ್ಧೆ ಏರ್ಪಡಿಸಿ ಬಹುಮಾನ, ಗಿಡಗಳನ್ನು ನೀಡುವುದರ ಜತೆಗೆ ಅದನ್ನು ಪೋಷಣೆ ಮಾಡುವುದು ಹಾಗೂ ಆಯ್ದ ಡಿಗ್ರಿ ಕಾಲೇಜಿನ ವಿದ್ಯಾರ್ಥಿಗಳನ್ನು ಉಡುಪಿಯಲ್ಲಿ ನಡೆದ ಯುವ ಜಾಗೃತಿ ಕಾರ್ಯಕ್ರಮಕ್ಕೆ ಕಳುಹಿಸಿ ನಾಯಕತ್ವದ ಕಾರ್ಯಕ್ರಮ ಮಾಡಿರುವುದಾಗಿ ತಿಳಿಸಿದರು.ಕಾರ್ಯಕ್ರಮದ ವರದಿಯನ್ನು ಸದಸ್ಯ ವೀರೇಂದ್ರ ಮಂಡಿಸಿ, ಜುಲೈನಿಂದ ನವೆಂಬರ್‌ವರೆಗೆ ರೋಟರಿ ಕೈಗೊಂಡ ಹಲವು ಕಾರ್ಯಕ್ರಮಗಳ ಜತೆಗೆ ರೋಟರಿ ಕುಟುಂಬದ ಪ್ರವಾಸ ಹಾಗೂ ಸಮೂಹ ಊಟದ ಕಾರ್ಯಕ್ರಮದ ಕುರಿತು ವಿವರಿಸಿದರು,
ಅತ್ಯುತ್ತಮ ಸಾಧನೆ ಮೂಲಕ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಸುರೇಶ್, ಜಾನಪದ ಕಲಾವಿದ ಪರಶುರಾಮ್ ಚೌಟಗಿ, ಅಂತಾರಾಷ್ಟ್ರೀಯ ಪಂಜ ಕುಸ್ತಿ ವಿಜೇತ ಅಂಬಾರಗೊಪ್ಪದ ಗೌರಮ್ಮ, ಭರತನಾಟ್ಯ ಕಲಾವಿದೆ ಮೈತ್ರಿ ಶಾಲೆಯ ಪ್ರಣತಿ ವಿ. ಅವರನ್ನು ಸನ್ಮಾನಿಸಲಾಯಿತು.ರೇಖಾ ಪಾಲಾಕ್ಷ. ಕೆ,ಅಸಿಸ್ಟೆಂಟ್ ಗವರ್ನರ್ ಕೆ,ಪಿ ಶೆಟ್ಟಿ, ಝೋನಲ್ ಲೆಫ್ಟಿನೆಂಟ್ ಶಂಕರ್, ಚಾರ್ಟಡ್ ಪ್ರೆಸಿಡೆಂಟ್ ರಘು ಎಂ.ಆರ್, ಎಂ.ಬಿ ಶಿವಕುಮಾರ್, ಸಿದ್ದಲಿಂಗ ನ್ಯಾಮತಿ, ಜಡಿಯಪ್ಪ ಪಸಾರದ, ರಾಘವೇಂದ್ರ ಬಿ.ಎಲ್.ಸಹಿತ, ಗಣ್ಯರು ಹಾಜರಿದ್ದರು,
ಕುಮಾರಿ ಆರ್ಯವಂಶಿಕ ಪ್ರಾರ್ಥಿಸಿ, ಶಿವಮೂರ್ತಿ ಸ್ವಾಗತಿಸಿ, ಮಧುಸೂದನ್ ನಿರೂಪಿಸಿ, ಡಾ.ವೀರೇಂದ್ರ ವಂದಿಸಿದರು.