ಸಾರಾಂಶ
ಪಟ್ಟಣದ ಬೆಲ್ಲದ ಪೇಟೆಯ ರಂಗ ಕಲಾವಿದ ಡಾ.ಮುನಿಯಪ್ಪ (82) ಅನಾರೋಗ್ಯದಿಂದ ಶುಕ್ರವಾರ ನಿಧನರಾದರು.
ಕನ್ನಡಪ್ರಭ ವಾರ್ತೆ ಗುಬ್ಬಿ
ಪಟ್ಟಣದ ಬೆಲ್ಲದ ಪೇಟೆಯ ರಂಗ ಕಲಾವಿದ ಡಾ.ಮುನಿಯಪ್ಪ (82) ಅನಾರೋಗ್ಯದಿಂದ ಶುಕ್ರವಾರ ನಿಧನರಾದರು. ವೃತ್ತಿಯಲ್ಲಿ ವೈದ್ಯರಾಗಿದ್ದ ಮುನಿಯಪ್ಪ ಕನ್ನಡ ರಾಜ್ಯೋತ್ಸವದಲ್ಲಿ ಮಹಾರಾಜರ ವೇಷ ಭೂಷಣಗಳನ್ನು ಧರಿಸಿ ತಮ್ಮ ಕಲಾ ಪ್ರದರ್ಶನ ನೀಡುತ್ತಿದ್ದರು. ಜೊತೆಗೆ ನಾಗ ಕಾಳ ಭೈರವ, ಎರಡು ನಕ್ಷತ್ರ, ಭಕ್ತ ಪ್ರಹ್ಲಾದ, ಅನುರಾಗ ಅರಳಿತು ಚಲನಚಿತ್ರಗಳಲ್ಲಿ ಡಾ.ರಾಜ್ ಕುಮಾರ್ ಸೇರಿದಂತೆ ಅನೇಕರ ಹಿರಿಯ ನಟರ ಜೊತೆಗೆ ಬೆಳ್ಳಿ ಪರದೆ ಹಂಚಿಕೊಂಡಿದ್ದರು. ನಾಟಕಗಳಲ್ಲಿ ದುರ್ಯೋಧನ, ರಾವಣನ ಪಾತ್ರ ಮಾಡುತ್ತಿದ್ದ ಮುನಿಯಪ್ಪ ನಾಟಕದಿಂದ ಬಂದ ಹಣವನ್ನು ಬಡ ಕಲಾವಿದರಿಗೆ ನೀಡುವ ಮೂಲಕ ಮಾನವಿಯತೆ ಮೆರೆದಿದ್ದರು. ಡಾ. ಮುನಿಯಪ್ಪ ನಿಧನಕ್ಕೆ ಶಾಸಕ.ಎಸ್ .ಆರ್ ಶ್ರೀನಿವಾಸ್, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಅಣ್ಣಪ್ಪ ಸ್ವಾಮಿ ಸದಸ್ಯ ಶಿವಕುಮಾರ್ ಹಾಗೂ ಬೆಟ್ಟಸ್ವಾಮಿ ಕಂಬನಿ ಮಿಡಿದು ಶುಕ್ರವಾರ ದೊಡ್ಡಬಳ್ಳಾಪುರದ ಶಿವಪುರ ಗ್ರಾಮದಲ್ಲಿ ನಡೆದ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ್ದರು.