ಸಾರಾಂಶ
ಅನಂತ್ ಇಂಟರ್‌ನ್ಯಾಷನಲ್ ಶಾಲೆಯ ಮಕ್ಕಳು ಗಾಂಧೀಜಿಯವರ ಪುಣ್ಯಸ್ಮರಣೆಯ ಪ್ರಯುಕ್ತ ಕಸ್ತೂರ ಬಾ ಆಶ್ರಮದಲ್ಲಿ ಇರುವ ಗಾಂಧೀಜಿಯವರ ಸಮಾಧಿಗೆ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷ ಆರ್ ಅನಂತ ಕುಮಾರ್, ತಾಲೂಕಿನ ದಂಡಾಧಿಕಾರಿ ಸಂತೋಷ್ ಆಶ್ರಮದ ಉಪಪ್ರತಿನಿಧಿಯಾದ ಮೇರಿ ಹಾಗೂ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು. ಶಾಲೆಯ ಸಂಸ್ಥಾಪಕ ಅಧ್ಯಕ್ಷ ಆರ್. ಅನಂತಕುಮಾರ್ ಮಾತನಾಡಿದರು.
ಅರಸೀಕೆರೆ: ನಗರದ ಅನಂತ್ ಇಂಟರ್‌ನ್ಯಾಷನಲ್ ಶಾಲೆಯ ಮಕ್ಕಳು ಗಾಂಧೀಜಿಯವರ ಪುಣ್ಯಸ್ಮರಣೆಯ ಪ್ರಯುಕ್ತ ಕಸ್ತೂರ ಬಾ ಆಶ್ರಮದಲ್ಲಿ ಇರುವ ಗಾಂಧೀಜಿಯವರ ಸಮಾಧಿಗೆ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷ ಆರ್ ಅನಂತ ಕುಮಾರ್, ತಾಲೂಕಿನ ದಂಡಾಧಿಕಾರಿ ಸಂತೋಷ್ ಆಶ್ರಮದ ಉಪಪ್ರತಿನಿಧಿಯಾದ ಮೇರಿ ಹಾಗೂ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು. ಶಾಲೆಯ ಸಂಸ್ಥಾಪಕ ಅಧ್ಯಕ್ಷ ಆರ್. ಅನಂತಕುಮಾರ್ ಮಾತನಾಡಿದರು.ಇದೇ ಸಂದರ್ಭದಲ್ಲಿ ತಾಲ್ಲೂಕಿನ ದಂಡಾಧಿಕಾರಿ ಸಂತೋಷ್ ಮಾತನಾಡಿ, ಗಾಂಧೀಜಿಯವರನ್ನು ರಾಷ್ಟ್ರಪಿತ, ಮಹಾತ್ಮ ಎಂದು ಕರೆಯಲು ಅವರ ಸಾಧನೆಯೇ ಸಾಕ್ಷಿ. ಇಡೀ ಭಾರತವನ್ನೇ ಸಂಘಟಿಸುವುದು ಸುಲಭದ ಮಾತಲ್ಲ, ಅದು ಗಾಂಧೀಜಿಯವರಿಂದ ಸಾಧ್ಯವಾಯಿತು. ಸಾಧಕರ ಹಾದಿಯನ್ನು ಪರಿಚಯಿಸಿಕೊಂಡು ಆ ಮೂಲಕ ನಮ್ಮನ್ನು ನಾವು ತಿದ್ದಿಕೊಳ್ಳುವ ಕಡೆ ಗಮನ ಹರಿಸಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.