ಕನ್ನಡಪ್ರಭ ವಾರ್ತೆ ವಿಜಯಪುರ
ನಾಟಕಗಳು ಸಮಾಜದ ವಾಸ್ತವಿಕ ಕೈಗನ್ನಡಿಯಂತಿವೆ. ಗ್ರಾಮೀಣ ಪ್ರದೇಶಗಳಲ್ಲಿ ನಾಟಕಗಳು ಇಂದಿಗೂ ಮಹತ್ವ ಪಡೆದುಕೊಂಡಿವೆ. ರಂಗಭೂಮಿ ಕಲಾವಿದರು ಹಾಗೂ ಗುಣಮಟ್ಟದ ನಾಟಕಗಳ ಅಗತ್ಯವಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು.ತಾಲೂಕಿನ ಹಿಟ್ಟಿನಹಳ್ಳಿ ಗ್ರಾಮದ ದ್ಯಾಮವ್ವ ಹಾಗೂ ಮಾರುತೇಶ್ವರ ಜಾತ್ರೆ ನಿಮಿತ್ತ ಭಾನುವಾರ ರಾತ್ರಿ ಹೆತ್ತವರ ಕನಸು ಎಂಬ ಸಾಮಾಜಿಕ ನಾಟಕ ಉದ್ಘಾಟಿಸಿ ಮಾತನಾಡಿದರು. ರಂಗಾಯಣ, ನಿನಾಸಂ, ಜಮುರಾ, ಸಾಣೆಹಳ್ಳಿ ಮುಂತಾದ ಸಂಸ್ಥೆಗಳು ಅತ್ಯಂತ ಶ್ರೇಷ್ಠ ಮಟ್ಟದ ನಾಟಕಗಳ ಪ್ರದರ್ಶನ ನೀಡುತ್ತಿವೆ. ಜಾತ್ರೆ, ಉತ್ಸವ, ಉರುಸು, ಸಮ್ಮೇಳನ, ಹಬ್ಬಗಳ ಸಂದರ್ಭಗಳಲ್ಲಿ ನಾಟಕಗಳ ಪ್ರದರ್ಶನ ನಿರಂತರವಾಗಿರುತ್ತವೆ ಎಂದರು.ಬಿಜೆಪಿ ಮಂಡಳ ಅಧ್ಯಕ್ಷ ಸಿದ್ದನಗೌಡ ಬಿರಾದಾರ ಮಾತನಾಡಿ, ಹಿಟ್ಟಿನಹಳ್ಳಿ ಗ್ರಾಮ ನಾಟಕ ಮಾಡುವಲ್ಲಿ ಶತಮಾನಗಳ ಇತಿಹಾಸ ಹೊಂದಿದೆ. ಅನೇಕ ಗ್ರಾಮದ ಜನರು ಹಿಟ್ಟಿನಹಳ್ಳಿ ಗ್ರಾಮಕ್ಕೆ ನಾಟಕ ನೋಡಲು ಬರುವ ಜನರಿಗೆ ಪ್ರಸಾದ ವ್ಯವಸ್ಥೆ ಮಾಡಿವೆ ಎಂದರು. ಪಿಕೆಪಿಎಸ್ ಬ್ಯಾಂಕಿನ ಮಾಜಿ ವ್ಯವಸ್ಥಾಪಕ ಚಂದ್ರಶೇಖರ ಮಲಘಾಣ ಮಾತನಾಡಿ, ಐತಿಹಾಸಿಕ, ಪೌರಾಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ನಾಟಕಗಳನ್ನು ಮಾಡಿದ ಶ್ರೇಯಸ್ಸು ಹಿಟ್ಟಿನಹಳ್ಳಿ ಗ್ರಾಮದ ರಂಗಭೂಮಿ ಕಲಾವಿದರಿಗೆ ಸಲ್ಲುತ್ತದೆ ಎಂದರು.
ಶರಣು ಸಾಲಿ ಅಧ್ಯಕ್ಷತೆ ವಹಿಸಿದ್ದರು. ಮುರಗಯ್ಯ ಮಠಪತಿ, ಎಪಿಎಂಸಿ ಮಾಜಿ ಅಧ್ಯಕ್ಷ ಸಾಹೇಬಗೌಡ ಬಿರಾದಾರ, ಪಿಕೆಪಿಎಸ್ ಮಾಜಿ ಅಧ್ಯಕ್ಷ ಬಸನಗೌಡ ಬಿರಾದಾರ ಬೆನಕಟ್ಟಿ, ಪ್ರಕಾಶ ಚಿಕ್ಕಲಕಿ, ಸಂಗನಗೌಡ ಬಿರಾದಾರ, ಗೌಡಪ್ಪ ಬೆನಕಟ್ಟಿ, ಶಂಕರಗೌಡ ಬಿರಾದಾರ, ಶಿವಾನಂದ ಕೂಬರಡ್ಡಿ, ನಂದು ಗಡಗಿ, ನವೀನ ಸಿದರಡ್ಡಿ, ಯಲ್ಲಪ್ಪ ಘಂಟಿ, ಲಕ್ಷ್ಮಣ ಬಗಲಿ, ಸಂಗಮೇಶ ಕವಡಿಮಟ್ಟಿ, ಮಾನಪ್ಪ ಬಾವಿಕಟ್ಟಿ, ವಿಠ್ಠಲ ಗಲಗಲಿ, ಮಲ್ಲಿಕಾರ್ಜುನ ನಾಗಶೆಟ್ಟಿ, ಮಲ್ಲಪ್ಪ ಗೆಣ್ಣೂರ, ರಮೇಶ ನಾಡಗೌಡ, ದ್ಯಾಮು ಪಡನಾಡ, ಮಹಾಂತೇಶ ಪಡನಾಡ, ಸಂತೋಷ ಜಾಡರ, ಮಲ್ಲಿಕಾರ್ಜುನ ಸುಬೇದಾರ, ಸುರೇಶ ಕೊಕಟನೂರ, ಗುರುರಾಜ ಸಾಲಿ ಇತರರು ಇದ್ದರು.