ಸಾರಾಂಶ
ಜೆಸಿಐ ಕಾರ್ಕಳ, ರೋಟರಿ ಕ್ಲಬ್ ಕಾರ್ಕಳ, ಜಲ್ವಾ-ಇ-ನೂರ್ ಮದ್ರಸ ಪುಲ್ಕೇರಿ ಸಹಯೋಗದಲ್ಲಿ ಸಮದ್ ಖಾನ್ ಮತ್ತು ಶಗುಪ್ತಾ ಖಾನ್ ದಂಪತಿಯ ಪುತ್ರಿ ಅಲ್ಶಾ ಖಾನ್ ಹುಟ್ಟುಹಬ್ಬದ ಪ್ರಯುಕ್ತ ಇಲ್ಲಿನ ವಿಜೇತ ವಿಶೇಷ ಶಾಲೆಗೆ ನೀಡಲಾದ ಉಚಿತವಾಗಿ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆಯನ್ನು ಕಾರ್ಕಳ ಗ್ರಾಮಾಂತರ ಠಾಣೆಯ ಪೊಲೀಸ್ ಉಪನಿರೀಕ್ಷಕ ಪ್ರಸನ್ನ ಕುಮಾರ್ ಉದ್ಘಾಟಿಸಿ ಶುಭ ಹಾರೈಸಿದರು.
ಕನ್ನಡಪ್ರಭ ವಾರ್ತೆ ಕಾರ್ಕಳ
ಜೆಸಿಐ ಕಾರ್ಕಳ, ರೋಟರಿ ಕ್ಲಬ್ ಕಾರ್ಕಳ, ಜಲ್ವಾ-ಇ-ನೂರ್ ಮದ್ರಸ ಪುಲ್ಕೇರಿ ಸಹಯೋಗದಲ್ಲಿ ಸಮದ್ ಖಾನ್ ಮತ್ತು ಶಗುಪ್ತಾ ಖಾನ್ ದಂಪತಿಯ ಪುತ್ರಿ ಅಲ್ಶಾ ಖಾನ್ ಹುಟ್ಟುಹಬ್ಬದ ಪ್ರಯುಕ್ತ ಇಲ್ಲಿನ ವಿಜೇತ ವಿಶೇಷ ಶಾಲೆಗೆ ನೀಡಲಾದ ಉಚಿತವಾಗಿ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆಯನ್ನು ಕಾರ್ಕಳ ಗ್ರಾಮಾಂತರ ಠಾಣೆಯ ಪೊಲೀಸ್ ಉಪನಿರೀಕ್ಷಕ ಪ್ರಸನ್ನ ಕುಮಾರ್ ಉದ್ಘಾಟಿಸಿ ಶುಭ ಹಾರೈಸಿದರು.ಈ ಸಂದರ್ಭ ಜೆಸಿಐ ಅಧ್ಯಕ್ಷೆ ಶ್ವೇತಾ ಜೈನ್, ರೋಟರಿ ಕ್ಲಬ್ ಅಧ್ಯಕ್ಷ ಇಕ್ಬಾಲ್ ಅಹಮ್ಮದ್, ಶಿವ ಆರ್ಟ್ಸ್ ಮಾಲಕರಾದ ವರದರಾಯ ಪ್ರಭು, ಜಲ್ವಾ-ಇ-ನೂರ್ ಮದ್ರಸ ಕಾರ್ಯದರ್ಶಿ ಅಬ್ದುಲ್ಲಾ ಶೇಖ್ ಅದಫ್, ವಿಜೇತ ವಿಶೇಷ ಶಾಲಾ ಸಂಸ್ಥಾಪಕಿ ಡಾ.ಕಾಂತಿ ಹರೀಶ್, ಜೆಸಿಐ ಸದಸ್ಯರಾದ ವಿಘ್ನೇಶ್ - ಸುಶ್ಮಿತಾ ದಂಪತಿ, ಬಾಲಕೃಷ್ಣ ದೇವಾಡಿಗ, ಸುರೇಶ್ ನಾಯಕ್, ರೋಟರಿ ಕ್ಲಬ್ ಕಾರ್ಯದರ್ಶಿ ಗಣೇಶ್ ಸಾಲ್ಯಾನ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.ವಿಶೇಷ ಶಿಕ್ಷಕಿ ಹರ್ಷಿತಾ ಕಿರಣ್ ನಿರೂಪಿಸಿದರು. ಡಾ.ಕಾಂತಿ ಹರೀಶ್ ಸ್ವಾಗತಿಸಿದರು. ಶ್ವೇತಾ ಜೈನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀನಿಧಿ ಅಶೋಕ್ ವಂದಿಸಿದರು.