ಸಾರಾಂಶ
ಈ ಕ್ಷೇತ್ರದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರು ಮುದುಗಲ್ಲ ವಸತಿ ಮಾಡಿಕೊಂಡು ಇಳಕಲ್ಲ ನಗರವನ್ನು ಟೂರಿಂಗ್ ಟಾಕೀಜ್ ಮಾಡಿಕೊಂಡಿದ್ದಾರೆ. ಮೂರು ತಿಳಗಳಿಗೊಮ್ಮೆ ಇಳಕಲ್ಲ ನಗರಕ್ಕೆ ಬಂದು ಪತ್ರಿಕಾಗೋಷ್ಠಿ ಮಾಡಿ ಹೋಗುತ್ತಾರೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಕನ್ನಡಪ್ರಭ ವಾರ್ತೆ ಇಳಕಲ್ಲ
ಈ ಕ್ಷೇತ್ರದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರು ಮುದುಗಲ್ಲ ವಸತಿ ಮಾಡಿಕೊಂಡು ಇಳಕಲ್ಲ ನಗರವನ್ನು ಟೂರಿಂಗ್ ಟಾಕೀಜ್ ಮಾಡಿಕೊಂಡಿದ್ದಾರೆ. ಮೂರು ತಿಳಗಳಿಗೊಮ್ಮೆ ಇಳಕಲ್ಲ ನಗರಕ್ಕೆ ಬಂದು ಪತ್ರಿಕಾಗೋಷ್ಠಿ ಮಾಡಿ ಹೋಗುತ್ತಾರೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.ನಗರದ ನಾಲ್ಕು ವಾರ್ಡಗಳಿಗೆ ಕುಡಿಯುವ ನೀರು ಪೂರೈಸುವ ೧೫ ಲಕ್ಷ ಲೀಟರ್ ನೀರು ಹಿಡಿಯುವ ಸಾಮರ್ಥ ಉಳ್ಳ ಓವರಹೆಡ್ ಟ್ಯಾಂಕ್ ಕಾಮಗಾರಿಗೆ ಪೂಜೆ ಮಾಡಿ ಪುನರಾಂರಭಿಸಿ ಅವರು ಮಾತನಾಡಿದರು.
ಅವರಿಗೆ ಈ ಕ್ಷೇತ್ರದ ಬಗ್ಗೆ ಏನೂ ಗೊತ್ತಿಲ್ಲ, ವಿನಾಕಾರಣ ಟೀಕೆ ಮಾಡುತ್ತಾರೆ. ತಮ್ಮ ಪಕ್ಷದ ಕಾರ್ಯಕರ್ತರನ್ನು ಕರೆದುಕೊಂಡು ನೀರಿಗಾಗಿ ಹೋರಾಟ ಎಂದು ಏನೇನೋ ಮಾಡುತ್ತಾರೆ. ಆದರೆ ನೀರಿನ ವಿಷಯದಲ್ಲಿ ನಾನು ರಾಜಕಾರಣ ಮಾಡೋದಿಲ್ಲ. ಈ ಯೋಜನೆಗಾಗಿ ಈಗಾಗಲೇ ₹೨೩ ಕೋಟಿ ಹಣ ಮಂಜೂರಾಗಿದ್ದು, ಐದು ತಿಳಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಿದ್ದೆನೆ ಎಂದು ಹೇಳಿದರು.ನಗರ ಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ, ಮುಖಂದರಾದ ಅರುಣ ಬಿಜ್ಜಳ, ಶಿವಾನಂದ ಮುಚಖಂಡಿ, ಶರಣಪ್ಪ ಆಮದಿಹಾಳ, ವಿಠಲ ಜಕ್ಕಾ, ಮೌಲೇಶ ಬಂಡಿವಡ್ಡರ, ಹುಸೇನಸಾಬ ಬಾಗವಾನ, ಮಹಮ್ಮದ ರಫೀಕ ಐಹೋಳ್ಳಿ, ಮಂಜುನಾಥ ಸಪ್ಪರದ, ಮಲ್ಲು ಮಡಿವಾಳರ, ಅಮೃತ ಬಿಜ್ಜಲ, ಪೌರಾಯುಕ್ತ ಶ್ರೀನಿವಾಸ ಜಾಧವ, ೨೪/೭ ನೀರು ಪೂರೈಕೆ ಯೋಜನೆ ಅಧಿಕಾರಿಗಳು ಮತ್ತು ಸಿಬ್ಬಂದಿ ಇತರರು ಉಪಸ್ಥಿತರಿದ್ದರು.