ಲಕ್ಷ್ಮೇಶ್ವರದಲ್ಲಿ ಜನೌಷಧ ಕೇಂದ್ರಕ್ಕೆ ಚಾಲನೆ

| Published : Jun 24 2024, 01:37 AM IST

ಸಾರಾಂಶ

ಕಳೆದ 3-4 ತಿಂಗಳು ಕೆಲವು ಅನಿವಾರ್ಯ ಕಾರಣಗಳಿಂದ ಪಟ್ಟಣದ ಜನೌಷಧಿ ಕೇಂದ್ರ ಬಂದ್ ಆಗಿತ್ತು. ಈಗ ಮತ್ತೆ ಆರಂಭಗೊಳ್ಳುವ ಮೂಲಕ ಬಡ ಜನತೆಗೆ ಔಷಧಿಗಳು ಲಭ್ಯವಾಗಲಿವೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಲಕ್ಷ್ಮೇಶ್ವರ: ಜನರಿಕ್ ಔಷಧಿಗಳು ಗುಣಮಟ್ಟದಲ್ಲಿ ಉತ್ತಮವಾಗಿವೆ, ಅಲ್ಲದೆ ಕಡಿಮೆ ಬೆಲೆಗೆ ಸಿಗುತ್ತವೆ. ಜನಸಾಮಾನ್ಯರ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು. ಭಾನುವಾರ ಪಟ್ಟಣದ ಸಮುದಾಯದ ಆರೋಗ್ಯ ಕೇಂದ್ರದಲ್ಲಿ ಪ್ರಧಾನಮಂತ್ರಿ ಜನೌಷಧಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು. ಜನಸಾಮಾನ್ಯರ ಗಂಭೀರ ಕಾಯಿಲೆಗಳಿಗೆ ಸರ್ಕಾರ ಉಚಿತ ಚಿಕಿತ್ಸೆ ನೀಡುವ ಯೋಜನೆಗಳು ಈಗ ಚಾಲ್ತಿಯಲ್ಲಿವೆ. ಅದರ ಜತೆಗೆ ಕಡಿಮೆ ದರದಲ್ಲಿ ಹಲವಾರು ಗಂಭೀರ ಕಾಯಿಲೆಗಳಿಗೆ ಔಷಧಿಗಳನ್ನು ಒದಗಿಸುವ ಮೂಲಕ ಜನಸಾಮಾನ್ಯರ ಆರ್ಥಿಕ ಹೊರೆ ಕಡಿಮೆ ಮಾಡುವ ಕಾರ್ಯವನ್ನು ಮಾಡುತ್ತಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಸುಮಾರು ₹100 ಬೆಲೆಬಾಳುವ ಔಷಧಿಗಳನ್ನು ಸುಮಾರು ₹10, ₹20ಕ್ಕೆ ಕೊಡುತ್ತಿದೆ. ಎನ್‌ಡಿಎ ನೇತೃತ್ವದ ಸರ್ಕಾರ ಬಡವರ ಪಾಲಿಗೆ ಸಂಜೀವಿನಿಯಾಗಿದೆ. ಬಡವರ, ದೀನ ದಲಿತರ ಉದ್ಧಾರಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕಡಿಮೆ ಬೆಲೆಗೆ ಗುಣಮಟ್ಟದ ಔಷಧಿಗಳನ್ನು ಕೊಡುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಕಳೆದ 3-4 ತಿಂಗಳು ಕೆಲವು ಅನಿವಾರ್ಯ ಕಾರಣಗಳಿಂದ ಪಟ್ಟಣದ ಜನೌಷಧಿ ಕೇಂದ್ರ ಬಂದ್ ಆಗಿತ್ತು. ಈಗ ಮತ್ತೆ ಆರಂಭಗೊಳ್ಳುವ ಮೂಲಕ ಬಡ ಜನತೆಗೆ ಔಷಧಿಗಳು ಲಭ್ಯವಾಗಲಿವೆ ಎಂದು ಹೇಳಿದರು.

ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ, ನವೀನ ಬೆಳ್ಳಟ್ಟಿ, ಅನಿಲ ಮುಳಗುಂದ, ಅಶೋಕ ಶಿರಹಟ್ಟಿ, ಸಿದ್ದು ಸವಣೂರ, ಯಲ್ಲಿ ಗಟ್ಟಿ, ಗಿರೀಶ ಅಗಡಿ, ಡಾ. ಬಿಸ್ಮಿಲ್ಲಾ ಬಾನು, ಡಾ. ಗಿರೀಶ ಸಜ್ಜನ, ದುಂಡೇಶ ಕೊಠಡಿ, ಮೆಕ್ಕಿ, ರಂಗನಾಥ ಬದಿ, ಹೊನ್ನಪ್ಪನವರ, ಗಿರೀಶ ಚೌಡರೆಡ್ಡಿ, ನಿರಂಜನ ವಾಲಿ, ಡಾ‌. ಎನ್.ಎನ್. ಬಾಡಗಿ, ಅಂಗಡಿ, ಬೂದಿಹಾಳ ಅವರು ಇದ್ದರು.