ಶಿಕ್ಷಣದ ಜೊತೆ ಸಂಸ್ಕಾರವು ಉಜ್ವಲ ಭವಿಷ್ಯಕ್ಕೆ ನಾಂದಿ: ಶಿಕ್ಷಕ ನಾಗೇಗೌಡ ಅಭಿಮತ

| Published : Jun 24 2024, 01:37 AM IST

ಶಿಕ್ಷಣದ ಜೊತೆ ಸಂಸ್ಕಾರವು ಉಜ್ವಲ ಭವಿಷ್ಯಕ್ಕೆ ನಾಂದಿ: ಶಿಕ್ಷಕ ನಾಗೇಗೌಡ ಅಭಿಮತ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಾಥಮಿಕ ಹಂತದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಯೊಬ್ಬ ಶಿಕ್ಷಕ ಗುಣಮಟ್ಟದ ಶಿಕ್ಷಣ ನೀಡಿದಾಗ ಉತ್ತಮ ಶಿಕ್ಷಣ ಪಡೆದು ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೆ ಏರುತ್ತಾರೆ ಎಂಬುದಕ್ಕೆ ಗುಂಡಪ್ಪ ಚಿಕ್ಕನಹಳ್ಳಿ ಗ್ರಾಮದ ವಿದ್ಯಾರ್ಥಿಗಳೇ ಸಾಕ್ಷಿ. ಒಂದೇ ಶಾಲೆಯಲ್ಲಿ 27 ವರ್ಷ ಸೇವೆ ಮಾಡಿ ಗ್ರಾಮಸ್ಥರು ಹಬ್ಬದ ರೀತಿ ಬೀಳ್ಕೊಡುಗೆ ನೀಡುತ್ತಿರುವುದು ನನ್ನ ಶಿಕ್ಷಕ ಜೀವನದಲ್ಲಿ ಪಡೆದ ಬಹು ದೊಡ್ಡ ಕೊಡುಗೆ.

ಕನ್ನಡಪ್ರಭ ವಾರ್ತೆ ಶಿರಾ

ಶಾಲೆಗಳಲ್ಲಿ ಗುರುಗಳು ನೀಡುವ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಿಗೆ ಕಲಿಸುವ ಸಂಸ್ಕಾರ ವಿದ್ಯಾರ್ಥಿಯ ಉಜ್ವಲ ಭವಿಷ್ಯ ರೂಪಿಸಲು ಸಹಕಾರಿಯಾಗುತ್ತದೆ ಎಂದು ನಿವೃತ್ತ ಮುಖ್ಯ ಶಿಕ್ಷಕ ನಾಗೇಗೌಡ ಹೇಳಿದರು.

ಶಿರಾ ತಾಲೂಕಿನ ಗುಂಡಪ್ಪ ಚಿಕ್ಕೇನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳು ಭಾನುವಾರ ಹಮ್ಮಿಕೊಂಡಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿಗಳಿಂದ ಗುರು ನಮನ ಸ್ವೀಕರಿಸಿ ಅವರು ಮಾತನಾಡಿದರು. ಪ್ರಾಥಮಿಕ ಹಂತದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಯೊಬ್ಬ ಶಿಕ್ಷಕ ಗುಣಮಟ್ಟದ ಶಿಕ್ಷಣ ನೀಡಿದಾಗ ಉತ್ತಮ ಶಿಕ್ಷಣ ಪಡೆದು ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೆ ಏರುತ್ತಾರೆ ಎಂಬುದಕ್ಕೆ ಗುಂಡಪ್ಪ ಚಿಕ್ಕನಹಳ್ಳಿ ಗ್ರಾಮದ ವಿದ್ಯಾರ್ಥಿಗಳೇ ಸಾಕ್ಷಿ. ಒಂದೇ ಶಾಲೆಯಲ್ಲಿ 27 ವರ್ಷ ಸೇವೆ ಮಾಡಿ ಗ್ರಾಮಸ್ಥರು ಹಬ್ಬದ ರೀತಿ ಬೀಳ್ಕೊಡುಗೆ ನೀಡುತ್ತಿರುವುದು ನನ್ನ ಶಿಕ್ಷಕ ಜೀವನದಲ್ಲಿ ಪಡೆದ ಬಹು ದೊಡ್ಡ ಕೊಡುಗೆ ಎಂದರು.

ಶಿಕ್ಷಕ ಓದೋ ಮಾರಪ್ಪ ಮಾತನಾಡಿ, ವಿದ್ಯೆ ಕಲಿಸಿದ ಗುರುವಿಗೆ ವಿದ್ಯಾರ್ಥಿಗಳು ನೀಡುವ ಗೌರವ, ಪ್ರತಿಯೊಬ್ಬ ಗುರುವಿಗೂ ಹೆಚ್ಚು ಹರ್ಷ ನೀಡುತ್ತದೆ ಎಂದರು.

ಶಿಕ್ಷಕ ಎಚ್. ನಾಗರಾಜು ಮಾತನಾಡಿ,ಗುಂಡಪ್ಪ ಚಿಕ್ಕೇನಹಳ್ಳಿ ಎಂಬ ಪುಟ್ಟ ಗ್ರಾಮದ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ವೈದ್ಯ ,ಇಂಜಿನಿಯರ್, ಶಿಕ್ಷಕ ವೃತ್ತಿಯಲ್ಲಿ ಇದ್ದಾರೆಂದರೆ ಅದು ಸರ್ಕಾರಿ ಶಾಲೆಯ ಬಹುದೊಡ್ಡ ಸಾಧನೆ. ಉತ್ತಮ ಗುರಿಯೊಂದಿಗೆ ಗುರುವಿನ ಮಾರ್ಗದರ್ಶನದಲ್ಲಿ ಮುನ್ನಡೆದಾಗ ಯಶಸ್ಸು ತಾನಾಗಿಯೇ ಲಭಿಸಲಿದೆ ಎಂದರು.

ನಿವೃತ್ತ ಮುಖ್ಯ ಶಿಕ್ಷಕ ಐ. ಎಂ.ಮಂಜುನಾಥ ಸ್ವಾಮಿ, ಶಿಕ್ಷಕ ವಿ. ತಿಪ್ಪಯ್ಯ, ವರುಣಕುಮಾರ್, ಸಿದ್ದೇಶ್, ಚಿಕ್ಕಿ ರಪ್ಪ, ನರಸಿಂಹರಾಜು, ನಿವೃತ್ತ ಶಿಕ್ಷಕ ಹೇಮಣ್ಣ ,ಗೋವಿಂದಪ್ಪ ,ಗಿರಿಯಪ್ಪ , ಅತಿಥಿ ಶಿಕ್ಷಕಿ ಅಂಬಿಕಾ, ನಿವೃತ್ತ ಪಿಡಿಒ ಗುಣಯ್ಯ ಸೇರಿ ನೂರಾರು ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಹಳೆಯ ವಿದ್ಯಾರ್ಥಿಗಳು ಗುರುಗಳಿಗೆ ನೀಡಿದ ಗುರು ವಂದನೆ ಗಮನ ಸೆಳೆಯಿತು.