ಡಿವೈಎಸ್ಪಿ ವಿರುದ್ಧ ಕಿರುಕುಳ ಆರೋಪ: ವೀಡಿಯೋ ಮಾಡಿ ಆತ್ಮಹತ್ಯೆ ಯತ್ನ

| Published : Sep 15 2025, 01:00 AM IST

ಡಿವೈಎಸ್ಪಿ ವಿರುದ್ಧ ಕಿರುಕುಳ ಆರೋಪ: ವೀಡಿಯೋ ಮಾಡಿ ಆತ್ಮಹತ್ಯೆ ಯತ್ನ
Share this Article
  • FB
  • TW
  • Linkdin
  • Email

ಸಾರಾಂಶ

ಡಿವೈಎಸ್ಪಿ ಕಿರುಕುಳ‌ ಕೊಡುತ್ತಿದ್ದು ನನ್ನ ಸಾವಿಗೆ ಡಿವೈಎಸ್ಪಿ ಕಾರಣ ಎಂದು ಕ್ರೀಡಾ ತರಬೇತುದಾರ ಚಂದನ್‌ ವೀಡಿಯೋ ಹರಿಬಿಟ್ಟು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಡಿವೈಎಸ್ಪಿ ಕಿರುಕುಳ‌ ಕೊಡುತ್ತಿದ್ದು ನನ್ನ ಸಾವಿಗೆ ಡಿವೈಎಸ್ಪಿ ಕಾರಣ ಎಂದು ಕ್ರೀಡಾ ತರಬೇತುದಾರ ಚಂದನ್‌ ವೀಡಿಯೋ ಹರಿಬಿಟ್ಟು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ.

ಕೊಳ್ಳೇಗಾಲದ ಚಂದನ್ ಎಂಬಾತ ವೀಡಿಯೋ ಹರಿಬಿಟ್ಟ ವ್ಯಕ್ತಿ. ಈತ ಚಾಮರಾಜನಗರ ಸಿಇಎನ್ ಠಾಣೆ ಡಿವೈಎಸ್ಪಿ ಪವನ್ ಕುಮಾರ್ ವಿರುದ್ಧ ಆರೋಪ ಮಾಡಿದ್ದಾನೆ. ಬೆಂಗಳೂರಿನ ಸಹಕಾರ ನಗರದಲ್ಲಿ ಪವನ್ ಕುಮಾರ್ ಸೇರಿದಂತೆ 23 ಮಂದಿಗೆ ಬ್ಯಾಡ್ಮಿಂಟನ್ ಕೋಚ್ ಆಗಿದ್ದೆ. ನನಗೆ ಡಿವೈಎಸ್ಪಿ ಪವನ್ ಕುಮಾರ್ ಕಿರುಕುಳ ಕೊಡುತ್ತಿದ್ದು, ನಾನು ಸಾಯುತ್ತಿದ್ದೇನೆ. ನನ್ನ ಸಾವಿಗೆ ಪವನ್ ಕುಮಾರ್ ಕಾರಣ ಎಂದು ಚಂದನ್ ವೀಡಿಯೋದಲ್ಲಿ ಹೇಳಿದ್ದಾನೆ.

ಸಾಲ ವಾಪಸ್ ಕೇಳಿದ್ದಕ್ಕೆ ಕಿರುಕುಳ: ಈ ಕುರಿತು ಡಿವೈಎಸ್ಪಿ ಪವನ್ ಕುಮಾರ್ ಪ್ರತಿಕ್ರಿಯಿಸಿ, ಬ್ಯಾಡ್ಮಿಂಟನ್ ಕೋಚ್ ಆಗಿದ್ದಾಗಿನಿಂದ ನನಗೆ ಚಂದನ್ ಪರಿಚಯ. ಕೆಲ ತಿಂಗಳ ಹಿಂದೆ ಮನೆಯೂ ಇಲ್ಲ, ತಾಯಿ ಹಾಗೂ ನಾನು ಕಾರಿನಲ್ಲೇ ಇರಬೇಕಾದ ಪರಿಸ್ಥಿತಿ ಇದೆ. ಸಾಲ ಕೊಡಿ ಎಂದು ಅಂಗಲಾಚಿದಾಗ ಪುತ್ರನ ಕಾಲೇಜು ಶುಲ್ಕಕ್ಕೆ ಇಟ್ಟಿದ್ದ 5 ಲಕ್ಷ ರು. ಕೊಟ್ಟಿದ್ದೆ. ಹಿಂತಿರುಗಿಸುವ ಷರತ್ತು ಹಾಕಿ ಸಾಲ ನೀಡಿದ್ದೆ. ಆದರೆ, ಆತ ಮನೆಯನ್ನೂ ಮಾಡಲಿಲ್ಲ. ಷೇರ್ ಮಾರುಕಟ್ಟೆಗೆ ಹಣ ಸುರಿದಿದ್ದಾನೆ. ಸಾಲದ ಹಣ ವಾಪಸ್ ಕೇಳಿದ್ದಕ್ಕೆ ಕಿರುಕುಳ ಆರೋಪ ಹೊರಿಸಿದ್ದು, ಈ ಬಗ್ಗೆ ಕೊಳ್ಳೇಗಾಲ ಠಾಣೆಗೆ ದೂರು ಕೊಡುತ್ತೇನೆ ಎಂದಿದ್ದಾರೆ.