ದೇವನಹಳ್ಳಿ: ಮೀನು ಸೇವನೆಯಿಂದ ದೇಹಕ್ಕೆ ಪೌಷ್ಟಿಕ, ವಿಟಮಿನ್-ಡಿ ಮತ್ತು ಒಮೆಗಾ-೩ ಕೊಬ್ಬಿನಾಮ್ಲಗಳು ಸಿಗುತ್ತವೆ ಎಂದು ಜಲಾನಯನ ಇಲಾಖೆ ಆಯುಕ್ತ ಉಪೇಂದ್ರ ಪ್ರತಾಪ್‌ಸಿಂಗ್ ತಿಳಿಸಿದರು.

ಕಸಬಾ ಹೋಬಳಿಯ ಸಾವಕನಹಳ್ಳಿ ಕೆರೆಯಲ್ಲಿ ಮೀನುಗಾರಿಕೆ ಇಲಾಖೆ ಆಯೋಜಿಸಿದ್ದ ಮೀನು ಸೇವನೆ ಹಾಗೂ ಸಾಕಾಣಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಪೌಷ್ಟಿಕತೆ ತಡೆದು ಮೀನು ಸೇವನೆ ಹೆಚ್ಚಿಸಲು ಸರ್ಕಾರ ಮತ್ತು ವಿವಿಧ ಸಂಸ್ಥೆಗಳು ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿವೆ. ಮೀನು ರೋಗನಿರೋಧಕ ಶಕ್ತಿ ಹೊಂದಿದೆ. ಕಣ್ಣಿನ ದೃಷ್ಟಿ, ಮೂಳೆಗಳು ಬಲಗೊಳ್ಳಲು ಇದು ಸಹಕಾರಿ. ವಿಶೇಷವಾಗಿ ಗರ್ಭಿಣಿಯರು, ಬಾಣಂತಿಯರು ಮತ್ತು ಮಕ್ಕಳಲ್ಲಿ ರಕ್ತಹೀನತೆ ಮತ್ತು ಅಪೌಷ್ಟಿಕತೆ ಹೋಗಲಾಡಿಸಲು ಮೀನಿನ ಆಹಾರ ಪೋಷಕಾಂಶವಾಗಿದೆ ಎಂದರು.

ಜಲಾನಯನ ಇಲಾಖೆ ನಿರ್ದೇಶಕ ಮೊಹಮನ್ ಪರ್ವೆಜ್ ಬಂತನಾಲ್ ಮಾತನಾಡಿ, ಮೀನು ಸಾಕಾಣಿಕೆ ಮಾಡುವವರಿಗೆ ಇಲಾಖೆಯಿಂದ ಸೌಲಭ್ಯ ಹಾಗೂ ತರಬೇತಿ ಕಾಯಕ್ರಮಗಳಿವೆ. ಜಮೀನುಗಳಲ್ಲಿ ಹೊಂಡಗಳನ್ನು ನಿರ್ಮಿಸಿ ಮೀನು ಸಾಕಾಣಿಕೆ ಮಾಡಿ ಲಾಭ ಗಳಿಸಬಹುದು ಎಂದರು.

ಕಾರ್ಯಕ್ರಮದಲ್ಲಿ ರೀಜನಲ್ ಸೆಂಟರ್‌ನ ವಿಜ್ಞಾನಿ ಡಾ.ನರಸಿಂಹಮೂರ್ತಿ, ಮೀನುಗಾರಿ ಇಲಾಖೆ ಉಪನಿರ್ದೇಶಕ ಶಿವಶಂಕರ್‌, ಸಹಾಯಕ ನಿರ್ದೇಶಕರಾದ ನಾಗೇಂದ್ರಬಾಬು, ತಿಲಾಪಿಯ ಮೀನು ರೈತ ಉತ್ಪಾದಕರ ಸಂಸ್ಥೆಯ ಸಿಇಒ ಮೀನಾಕ್ಷಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ರಾಜಲಕ್ಷ್ಮೀ ಮತ್ತಿತರರಿದ್ದರು.

೧೨ ದೇವನಹಳ್ಳಿ ಚಿತ್ರಸುದ್ದಿ: ೦೨


ದೇವನಹಳ್ಳಿ ತಾಲೂಕಿನ ಸಾವಕನಹಳ್ಳಿ ಕೆರೆಯಲ್ಲಿ ಮೀನುಗಾರಿಕೆ ಇಲಾಖೆ ಆಯೋಜಿಸಿದ್ದ ಮೀನು ಸೇವನೆ ಹಾಗೂ ಸಾಕಾಣಿಕೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.