ಸಾರಾಂಶ
ಕನ್ನಡಪ್ರಭ ವಾರ್ತೆ ಚಿಂಚೋಳಿ
ತಾಲೂಕಿನ ಕರಚಖೇಡ ಗ್ರಾಪಂ ಎರಡನೇ ಅವಧಿಗಾಗಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಶನಿವಾರ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಬಾಬುಮಿಯಾ ಮಹೆಬೂಬಸಾಬ ಮೋಮಿನ ಮತ್ತು ಉಪಾಧ್ಯಕ್ಷೆಯಾಗಿ ಭಾಗ್ಯಶ್ರೀ ಜಗನ್ನಾಥ ಬಡಿಗೇರ ಛತ್ರಸಾಲ ಭರ್ಜರಿ ಗೆಲುವು ಸಾಧಿಸಿದ್ದಾರೆ.ಕರಚಖೇಡ ಗ್ರಾಪಂ ಕಾರ್ಯಲಯದಲ್ಲಿ ಜರುಗಿದ ಚುನಾವಣೆಯ ಪ್ರಕ್ರಿಯೇಯಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ಸ್ಥಾನಕ್ಕೆ ಬಾಬುಮಿಯಾ ಮಹೆಬೂಬಸಾಬ ಛತ್ರಸಾಲ ಮತ್ತು ಲಕ್ಷ್ಮೀ ತಿಪ್ಪಣ್ಣ ಕುಂಬಾರ ಇರ್ವರು ತಲಾ ಒಂದೊಂದು ನಾಮಪತ್ರವನ್ನು ಸಲ್ಲಿಸಿದ್ದರು. ಕಾಂಗ್ರೆಸ ಪಕ್ಷದ ಬೆಂಬಲಿತ ಸದಸ್ಯರಾದ ಬಾಬುಮಿಯಾ ಛತ್ರಸಾಲ ಅವರು ೭ಮತಗಳು ಮತ್ತು ಬಿಜೆಪಿ ಬೆಂಬಲಿತ ಗ್ರಾಮ ಸದಸ್ಯೆ ಲಕ್ಷ್ಮಿತಿಪ್ಪಣ್ಣ ಕುಂಬಾರ ೫ಮತಗಳನ್ನು ಪಡೆದುಕೊಂಡರು.ಕೇವಲ ೨ಮತಗಳಿಂದ ಸೋಲು ಅನುಭವಿಸಿದರು.ಇದರಿಂದಾಗಿ ಕರಚಖೇಡ ಗ್ರಾಪಂ ಅಧ್ಯಕ್ಷರಾಗಿ ಬಾಬುಮಿಯಾ ಮಹೆಬೂಬಸಾಬ ಛತ್ರಸಾಲ ಗೆಲುವು ಸಾಧಿಸಿದರು.
ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ ಪಕ್ಷದ ಬೆಂಬಲಿತ ಸದಸ್ಯೆ ಭಾಗ್ಯಶ್ರೀ ಜಗನ್ನಾಥ ಒಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂ ಅವರನ್ನು ಅವಿರೋಧವಾಗಿ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ತಹಸೀಲ್ದಾರ ಸುಬ್ಬಣ್ಣ ಜಮಖಂಡಿ ಫಲಿತಾಂಶ ಘೋಷಿಸಿದರು. ಕರಚಖೇಡ ಗ್ರಾಪಂ ಸದಸ್ಯರಾದ ತಿಪ್ಪಮ್ಮ, ಶ್ರೀಮಂತ, ಮಹೇಶ್ವರಿ, ಸಲೀಮಪಾಶಾ, ಶಾರದಮ್ಮ, ಜಗದೀಶ, ತಿಪ್ಪಣ್ಣ ಮೊಗಲಪ್ಪ, ತನುಜಾ, ಸಂಗೀತಾ, ಶಾಂತಮ್ಮ ಭಾಗವಹಿಸಿದ್ದರು. ಚುನಾವಣಾ ಸಿಬ್ಬಂದಿ ಶೋಯಬ ಪಟೇಲ, ಕಂದಾಯ ನಿರೀಕ್ಷಕ ಕೇಶವ ಕುಲಕರ್ಣಿ, ಪಿಡಿಓ ಶಾಂತಪ್ಪ ಕೆರೋಳಿ ಭಾಗವಹಿಸಿದ್ದರು.ಪಟಾಕಿ ಸಿಡಿಸಿ ವಿಜಯೋತ್ಸವ: ಕರಚಖೇಡ ಗ್ರಾಪಂ ಅಧ್ಯಕ್ಷ/ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ ಪಕ್ಷದ ಬೆಂಬಲಿತ ಸದಸ್ಯರು ಭಾರಿಗೆಲುವು ಸಾಧಿಸಿದ್ದರಿಂದ ಗ್ರಾಮದಲ್ಲಿ ವಿಜಯೋತ್ಸವ ನಡೆಸಿದರು. ಸಚಿವ ಡಾ. ಶರಣಪ್ರಕಾಶ ಪಾಟೀಲ ಸಹೋದರ ಬಸವರಾಜ ಪಾಟೀಲ ಊಡಗಿ, ಕರಚಖೇಡ ಸಂಗಾರೆಡ್ಡಿ, ರಾಮರೆಡ್ಡಿ ಪಾಟೀಲ, ಆನಂದರೆಡ್ಡಿ ಪೊಲೀಸ್ ಪಾಟೀಲ, ಸುಭಾನರೆಡ್ಡಿ ಪಾಟೀಲ, ದೇವಪ್ಪ, ಹಣಮಂತ, ನಾಗರೆಡ್ಡಿ ಪಾಟೀಲ, ಕೃಷ್ಣ ಛತ್ರಸಾಲ, ರಾಜೂ ನಾವದಗಿ, ಗೋಪಾಲ ಮಡಗ, ಶಕೀಲ ಪಾಶಾ, ನ್ಯಾಮತಪಟೇಲ ದಳಪತಿ, ಲಕ್ಷ್ಮಣ ದಯಾಲ್, ಮಂಜು ಪಟೇಲ್ ಬಡೇಸಾಬ, ರಾಜೂ ಪೋಲಿಸ್ ಪಾಟೀಲ, ಭೀಮರೆಡ್ಡಿ ಪೊಲೀಸ್ ಪಾಟೀಲ ಇನ್ನಿತರಿದ್ದರು.