ಧೈರ್ಯ, ವಿನಮ್ರತೆ ಮೈಗೂಡಿಸಿಕೊಳ್ಳಿ: ಪ್ರೊ. ಎಸ್.ಎಂ. ಶಿವಪ್ರಸಾದ

| Published : Oct 13 2025, 02:02 AM IST

ಧೈರ್ಯ, ವಿನಮ್ರತೆ ಮೈಗೂಡಿಸಿಕೊಳ್ಳಿ: ಪ್ರೊ. ಎಸ್.ಎಂ. ಶಿವಪ್ರಸಾದ
Share this Article
  • FB
  • TW
  • Linkdin
  • Email

ಸಾರಾಂಶ

ಇಂದಿನ ಜಾಗತೀಕರಣದ ಯುಗದಲ್ಲಿ ಎಐ, ನ್ಯಾನೊ, ಬಯೋಟೆಕ್ನೊಲೊಜಿ ಮೂಲಕ ಇಡೀ ಜಗತ್ತು ಅಂಗೈಯಲ್ಲಿದೆ.

ಕನ್ನಡಪ್ರಭ ವಾರ್ತೆ ದಾಂಡೇಲಿ

ದಾಂಡೇಲಿ ಶಿಕ್ಷಣ ಸಂಸ್ಥೆಯ ಬಂಗೂರನಗರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವೆಸ್ಕೊ ಸಭಾಂಗಣದಲ್ಲಿ ಸಾಂಸೃತಿಕ, ಕ್ರೀಡೆ, ಎನ್.ಎಸ್.ಎಸ್, ರೆಡ್‌ಕ್ರಾಸ್, ರೆಡ್‌ರಿಬ್ಬನ್ ಹಾಗೂ ರೇಂಜರ್ಸ್‌ ಮತ್ತು ರೋಜರ್ಸ್‌ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ಶನಿವಾರ ನಡೆಯಿತು.

ಕಾರ್ಯಕ್ರಮವನ್ನು ಧಾರವಾಡದ ಐಐಟಿಯ ಡೀನ್ ಹಾಗೂ ಗೌರವ ಪ್ರಾಧ್ಯಾಪಕ ಪ್ರೊ. ಎಸ್.ಎಂ. ಶಿವಪ್ರಸಾದ ಉದ್ಘಾಟಿಸಿ ಮಾತನಾಡಿ, ಇಂದಿನ ಜಾಗತೀಕರಣದ ಯುಗದಲ್ಲಿ ಎಐ, ನ್ಯಾನೊ, ಬಯೋಟೆಕ್ನೊಲೊಜಿ ಮೂಲಕ ಇಡೀ ಜಗತ್ತು ಅಂಗೈಯಲ್ಲಿದೆ. ನಾವು ಅದರ ಸದುಪಯೋಗ ಪಡೆದುಕೊಳ್ಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿ ಆಸಕ್ತಿಯಿಂದ ಕಲಿತಾಗ ಶಿಕ್ಷಣ ವೃತ್ತಿ ಸಾಕಾರವಾಗುತ್ತದೆ. ವಿದ್ಯಾರ್ಥಿ ಮತ್ತು ಶಿಕ್ಷಕರಲ್ಲಿ ಹೃದಯಾತ್ಮಕ ಸಂಬಂಧವಿರಬೇಕು. ವಿದ್ಯಾರ್ಥಿಗಳು ಜೀವನದಲ್ಲಿ ಧೈರ್ಯ ಮತ್ತು ವಿನಮ್ರತೆ ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಕಾಲೇಜಿನ ಪ್ರಾಚಾರ್ಯ ಡಾ. ಬಿ.ಎಲ್. ಗುಂಡೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಬಿರ ಎನ್ನುವುದು ಮಡಕೆ ಎಂದಾದರೆ ಅದರಲ್ಲಿರುವ ಜಲ ಜ್ಞಾನಕ್ಕೆ ಸಮ. ಜ್ಞಾನ ಎಲ್ಲರಿಗೂ ಸಿಗಬೇಕು ಹಾಗೂ ಹರಡಬೇಕು. ವಿದ್ಯಾರ್ಥಿಗಳಲ್ಲಿ ಗುರುವಿನ ಪ್ರತಿ ನಂಬಿಕೆ, ಇರಬೇಕು ವ್ಯಕ್ತಿತ್ವ ಮತ್ತು ಆತ್ಮ ವಿಶ್ವಾಸ ರೂಪಿಸಿಕೊಳ್ಳಲು ಗುರುವಿನ ಮೇಲೆ ನಂಬಿಕೆ ಅತ್ಯಗತ್ಯ ಎಂದರು.

ಡಾ. ಎಸ್.ಎಸ್. ಹಿರೇಮಠ ಸ್ವಾಗತಿಸಿದರು. ಡಾ. ವಿನಯ ಎಸ್. ಅತಿಥಿ ಪರಿಚಯಿಸಿದರು. ವಿದ್ಯಾರ್ಥಿ ಪ್ರತಿನಿಧಿಗಳು ೨೦೨೫-೨೬ನೇ ಸಾಲಿನ ಕಾಲೇಜಿನ ಎಲ್ಲ ಘಟಕಗಳ ಚಟುವಟಿಕೆಗಳ ಕುರಿತು ವರದಿ ನೀಡಿದರು. ಡಾ. ಪಿ.ಎ. ಹೊಸಮನಿ ವಂದಿಸಿದರು. ಹೀನಾ ಖಾನ್ ಹಾಗೂ ದ್ರಾಕ್ಷಾಯಣಿ ಕಾಶಿಲಕರ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ವೈಷ್ಣವಿ ಮೊರೆ ಭರತನಾಟ್ಯ ಪ್ರದರ್ಶಿಸಿದರು. ನವ್ಯಾ, ಸಾನಿಕಾ ಪ್ರಾರ್ಥನಾ ಗೀತೆ ಹಾಡಿದರು. ನಿಕಿತಾ ಮಯೆಕರ ಸಂಗಡಿಗರಿಂದ ಎನ್.ಎಸ್.ಎಸ್. ಗೀತೆ, ಸೃಷ್ಠಿ ನಾಯ್ಕ ಸಂಗಡಿಗರಿಂದ ರೇಂಜರ್ಸ್‌ ಮತ್ತು ರೋಜರ್ಸ್‌ ಪ್ರಾರ್ಥನೆ ಗೀತೆ ಹಾಡಿದರು.

ಕಾರ್ಯಕ್ರಮದಲ್ಲಿ ದಾಂಡೇಲಿ ಶಿಕ್ಷಣ ಸಂಸ್ಥೆಯ ಸಂಯೋಜಕ ರಾಘವೇಂದ್ರ ಜೆ.ಆರ್., ಎನ್.ಎಸ್.ಎಸ್. ಯೋಜನಾಧಿಕಾರಿ ಡಾ. ಲಕ್ಷ್ಮೀ ಪರಬ, ಲೀಡರ್‌ ಅಶಿತಾ ಸಾಲ್ಡಾನಾ, ಕಾಲೇಜಿನ ಎಲ್ಲ ಬೋಧಕ/ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿ ಪ್ರತಿನಿಧಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.