ಸಾರಾಂಶ
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಗ್ಯಾರಂಟಿ ಯೋಜನೆ ನಡುವೆಯೂ ಅಭಿವೃದ್ಧಿ ಕೆಲಸಗಳಿಗೆ ಒತ್ತು ನೀಡಲಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಆನಂದಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಗ್ಯಾರಂಟಿ ಯೋಜನೆ ನಡುವೆಯೂ ಅಭಿವೃದ್ಧಿ ಕೆಲಸಗಳಿಗೆ ಒತ್ತು ನೀಡಲಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇಲ್ಲಿಗೆ ಸಮೀಪದ ಆಚಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪತ್ರೆ ಹೋಂಡಾ ಗ್ರಾಮದಲ್ಲಿ 50 ಲಕ್ಷ ರು. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಂಗಳವಾರ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.ಕಾಂಗ್ರೆಸ್ ಸರ್ಕಾರವು ಭರವಸೆ ನೀಡಿದಂತೆ 5 ಗ್ಯಾರಂಟಿಗಳ ಅನುಷ್ಠಾನಗೊಳಿಸಿದೆ. ಗ್ಯಾರೆಂಟಿ ಯೋಜನೆಗಳ ಕಾರಣದಿಂದ ಯಾವುದೇ ಅಭಿವೃದ್ಧಿ ಕಾರ್ಯಕ್ಕೆ ಹಿನ್ನಡೆಯಾಗಿಲ್ಲ. ಗ್ಯಾರೆಂಟಿ ಯೋಜನೆಯಿಂದ ಪ್ರತಿಯೊಂದು ಸಣ್ಣ ಕುಟುಂಬಗಳಿಗೂ ತಿಂಗಳಿಗೆ 4,500 ರು. ಆದಾಯ ಸಿಗುತ್ತಿದೆ. ಇದರಿಂದ ಅವರ ಜೀವನ ಹಸನಾಗಲಿದೆ ಎಂದರು.
ಅಲ್ಲದೇ ಈ ಬಾರಿಯ ಬಜೆಟ್‌ನಲ್ಲಿ ಸಾಕಷ್ಟು ಹಣ ಮೀಸಲಾಡಲಾಗಿದ್ದು. ರಾಜ್ಯ ಸರ್ಕಾರ ಈಗಾಗಲೇ 5200 ಹೊಸ ಬಸ್‌ಗಳನ್ನು ಖರೀದಿ ಮಾಡುತ್ತಿದ್ದು. ಸಾಗರ ವಿಭಾಗಕ್ಕೆ 40ಕ್ಕೂ ಹೆಚ್ಚು ಬಸ್‌ಗಳು ಬರಲಿದೆ. ಇದರಿಂದ ಶಕ್ತಿ ಯೋಜನೆಗೆ ಇನ್ನೆಷ್ಟು ಶಕ್ತಿ ತುಂಬಲು ಸಹಕಾರಿಯಾಗಲಿದೆ. ಹಾಗೆ ಮುಂದಿನ ದಿನಗಳಲ್ಲಿ ಸಣ್ಣ ಸಣ್ಣ ಹಳ್ಳಿಗಳಿಗೂ ರಸ್ತೆಯ ಅಭಿವೃದ್ಧಿಯೊಂದಿಗೆ ಶುದ್ಧ ಕುಡಿಯುವ ನೀರು, ಸೇರಿದಂತೆ ವಿವಿಧ ಮೂಲಭೂತ ಸೌಕರ್ಯ ದೊರಕಲಿದೆ ಎಂದು ತಿಳಿಸಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷ ಕಲೀಮುಲ್ಲಾ ಖಾನ್, ಉಪಾಧ್ಯಕ್ಷೆ ನಾಗರತ್ನ ಗಣೇಶ್, ಸದಸ್ಯರಾದ ಗನ್ನಿ ಸಾಬ್, ಬಸವರಾಜ್, ಪ್ರಕಾಶ್ ತಂಗಳವಾಡಿ, ಪುಷ್ಪ, ಲತಾ , ಸೋಮಶೇಖರ್, ರವಿಕುಮಾರ್ ದಾಸ್ ಕೊಪ್ಪ, ಅಬ್ದುಲ್ ರಜಾಕ್, ಉಮೇಶ್, ಸೋಮಶೇಖರ್ ಲವ್ ಗೆರೆ, ಬಸವರಾಜ್, ಗಜೇಂದ್ರ ಯಾದವ್ ಇದ್ದರು.