ಸತ್ಯಶುದ್ಧ ಕಾಯಕ ದಾಸೋಹಕ್ಕೆ ಮಹತ್ವ ನೀಡಿ

| Published : Oct 10 2025, 01:01 AM IST

ಸಾರಾಂಶ

ಮೂಢನಂಬಿಕೆ, ಕಂದಾಚಾರ ನಿರ್ಮೂಲನೆ, ಜಾತಿ ರಹಿತವಾದ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಬಸವಾದಿ ಶರಣರು ಚಳವಳಿ ನಡೆಸಿದ್ದಾರೆ.

ಯಲಬುರ್ಗಾ: ಸತ್ಯ ಶುದ್ಧ ಕಾಯಕ ದಾಸೋಹಕ್ಕೆ ಪ್ರತಿಯೊಬ್ಬರೂ ಮಹತ್ವ ನೀಡಿದಾಗ ಮಾತ್ರ ಜೀವನದಲ್ಲಿ ಶಾಂತಿ ನೆಮ್ಮದಿ ಕಾಣಲು ಸಾಧ್ಯ ಎಂದು ಮಕ್ಕಳಿಯ ಶಿವಾನಂದ ಮಠದ ಶಿವಾನಂದ ಸ್ವಾಮೀಜಿ ಹೇಳಿದರು.

ತಾಲೂಕಿನ ಮಕ್ಕಳ್ಳಿ ಗ್ರಾಮದ ಶಿವಾನಂದ ಮಠದಲ್ಲಿ ಹಮ್ಮಿಕೊಂಡಿದ್ದ ೭೪ನೇ ಹುಣ್ಣಿಮೆಯ ಶಿವಾನುಭವ ಗೋಷ್ಠಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮೂಢನಂಬಿಕೆ, ಕಂದಾಚಾರ ನಿರ್ಮೂಲನೆ, ಜಾತಿ ರಹಿತವಾದ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಬಸವಾದಿ ಶರಣರು ಚಳವಳಿ ನಡೆಸಿದ್ದಾರೆ. ಕಾಯಕಕ್ಕೆ ದೈವತ್ವದ ಸ್ವರೂಪ ನೀಡಿದ ಬಸವಣ್ಣನವರು, ಪ್ರತಿಯೊಬ್ಬರು ಜೀನವದಲ್ಲಿ ಕಾಯಕ ಮಾಡಬೇಕು ಎಂದರು.

ಮುಖಂಡ ಮುದಿಯಪ್ಪ ಮೇಟಿ ಮಾತನಾಡಿ, ಮಮಕಾರ ಮತ್ತು ಅಹಂಕಾರ ತೊಲಗಲು ನಾನು ಮತ್ತು ನನ್ನದು ಎಂಬ ಭಾವನೆ ತೊರೆಯಬೇಕು. ಎಲ್ಲವೂ ಭಗವಂತನದು ಎಂದು ಅರಿತುಕೊಳ್ಳಬೇಕು.ಶಿವಾನುಭವ ಗೋಷ್ಠಿಯಲ್ಲಿ ಭಾಗವಹಿಸಿ ಶರಣರ ತತ್ವ ಸಿದ್ಧಾಂತ ತಿಳಿದುಕೊಳ್ಳಬೇಕು ಎಂದರು.

ಈ ಸಂದರ್ಭ ಷಣ್ಮುಖಯ್ಯ ಶಾಸ್ತ್ರಿಮಠ, ಶರಣಯ್ಯ ಹಿರೇಮಠ, ಪ್ರಭುಗೌಡ ಪಾಟೀಲ್, ವೀರಬಸಯ್ಯ ಹಿರೇಮಠ, ಮಳಿಯಪ್ಪಯ್ಯ ಶರಣರ, ಶರಣಪ್ಪ ಭೂತಲ್, ಯಮನೂರಪ್ಪ ಕಂಬಳಿ, ರಂಗನಗೌಡ ಮಾಲಿಪಾಟೀಲ್, ರುದ್ರಪ್ಪ ನಡಲಮನಿ, ಅಲ್ಲೇಸಾಬ್ ನದಾಫ್, ನಿಂಗಪ್ಪ ಮೇಟಿ, ದುರಗಪ್ಪ ಮಕ್ಕಳ್ಳಿ, ಶಂಕ್ರಪ್ಪ ಮೇಟಿ, ಪಾಲಾಕ್ಷಪ್ಪ ಪತ್ತಾರ, ಗುನ್ನೇಪ್ಪ ಚನ್ನದಾಸರ, ಹನುಮಗೌಡ ಮಾನಪ್ಪ ನವರ, ಶರಣಪ್ಪ ಕಂಬಳಿ ಸೇರಿದಂತೆ ಮತ್ತಿತರರು ಇದ್ದರು.