ಸಾರಾಂಶ
ಇನ್ನು ಮುಂದೆ ನರೇಗಾ ಯೋಜನೆಯಡಿ ತಯಾರಾಗುವ ಕ್ರಿಯಾಯೋಜನೆ ಯುಕ್ತಧಾರ ಮೂಲಕ ಕಾರ್ಯ ನಿರ್ವಹಿಸಲಿದೆ. ಇದರಿಂದ ಅನುಕೂಲವಾಗಲಿದೆ
ಯಲಬುರ್ಗಾ: ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದಿಂದ ನಿರ್ಮಾಣ ಮಾಡಿರುವ ಹೊಸ ವೈಜ್ಞಾನಿಕ ಮಾದರಿ ಕಾಮಗಾರಿ ಆಯ್ಕೆ ಮಾಡುವ ಒಂದು ಹಂತವಾಗಿದ್ದು, ಇದರಿಂದ ನರೇಗಾದ ಉದ್ದೇಶ ಸಾಕಾರಗೊಳ್ಳುತ್ತದೆ ಎಂದು ತಾಪಂ ಸಹಾಯಕ ನಿರ್ದೇಶಕ ಹನುಮಂತಗೌಡ ಪಾಟೀಲ್ ಹೇಳಿದರು.
ಇಲ್ಲಿನ ತಾಪಂ ಸಭಾಂಗಣದಲ್ಲಿ ೨೦೨೬-೨೭ನೇ ಸಾಲಿನ ಮಹಾತ್ಮಗಾಂಧಿ ನರೇಗಾ ಕ್ರಿಯಾಯೋಜನೆ ತಯಾರಿಕೆಯಡಿ ಕಾಮಗಾರಿ ಆಯ್ಕೆಯ ಪೂರ್ವಭಾವಿ ಹಂತದ ಯುಕ್ತಧಾರ ಆ್ಯಪ್ ಬಗ್ಗೆ ಗ್ರಾಪಂ ಪಿಡಿಒ,ಅನುಷ್ಠಾನ ಇಲಾಖೆ ಅಧಿಕಾರಿಗಳು, ತಾಂತ್ರಿಕ ಸಹಾಯಕರು, ಕಂಪ್ಯೂಟರ್ ಆಪರೇಟರ್‌ಗಳಿಗೆ ಆಯೋಜಿಸಿದ್ದ ಮಾಹಿತಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಇನ್ನು ಮುಂದೆ ನರೇಗಾ ಯೋಜನೆಯಡಿ ತಯಾರಾಗುವ ಕ್ರಿಯಾಯೋಜನೆ ಯುಕ್ತಧಾರ ಮೂಲಕ ಕಾರ್ಯ ನಿರ್ವಹಿಸಲಿದೆ. ಇದರಿಂದ ಅನುಕೂಲವಾಗಲಿದೆ ಎಂದರು.
ಯುಕ್ತಧಾರ ತರಬೇತಿ ಬಗ್ಗೆ ಕುಕನೂರು ತಾಪಂ ಸಹಾಯಕ ನಿರ್ದೇಶಕ ಶರಣಪ್ಪ ಕೆಳಗಿನಮನಿ ಮಾತನಾಡಿ, ಭೌತಿಕ ಕ್ರಿಯಾಯೋಜನೆ ಬದಲು ಆನ್‌ಲೈನ್‌ನಲ್ಲಿ ಕ್ರಿಯಾಯೋಜನೆಯ ಹಂತವಾಗಿದ್ದು, ಇದರಿಂದ ಯಾವ ಸ್ಥಳದಲ್ಲಿ ಎಂತಹ ಕಾಮಗಾರಿ ತೆಗೆದುಕೊಳ್ಳಬೇಕು. ಅದು ಆ ಸ್ಥಳಕ್ಕೆ ಸೂಕ್ತವಾಗಿದೆಯೇ ಎಂದು ತಿರ್ಮಾನಿಸಿ ಅನುಷ್ಠಾನ ಮಾಡುವ ಪ್ರಕ್ರಿಯೆಯಾಗಿದೆ ಎಂದರು.ತರಬೇತಿಯ ಮಾಸ್ಟರ್ ಟ್ರೇನರ್‌ಗಳಾದ ತಾಂತ್ರಿಕ ಸಂಯೋಜಕ ಸಂತೋಷ ನಂದಾಪುರ ತರಬೇತಿ ನೀಡಿದರು. ವಲಯ ಅರಣ್ಯಾಧಿಕಾರಿ ಬಸವರಾಜ ಗೊಗೇರಿ, ರೇಷ್ಮೆ ವಿಸ್ತೀರ್ಣಾಧಿಕಾರಿ ಹಸೇನ್, ಯಲಬುರ್ಗಾ ಮತ್ತು ಕುಕನೂರು ತಾಲೂಕಿನ ಗ್ರಾಪಂ ಪಿಡಿಒಗಳು, ಅನುಷ್ಠಾನ ಇಲಾಖೆಯ ಕ್ಷೇತ್ರ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ, ತಾಲೂಕು ಐಇಸಿ ಸಂಯೋಜಕರು, ತಾಂತ್ರಿಕ ಸಂಯೋಜಕರು, ಸಹಾಯಕರು, ಕಂಪ್ಯೂಟರ್ ಆಪರೇಟರ್‌ಗಳು ಹಾಜರಿದ್ದರು.