ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸಕೋಟೆದೇಶದಲ್ಲಿ ಸಂವಿಧಾನ ರಚನೆ ಮಾಡುವ ಮೂಲಕ ಸಮ ಸಮಾಜದ ನಿರ್ಮಾಣ ಮಾಡುವ ಮೂಲಕ ಸಮಾನತೆಯ ಹಕ್ಕನ್ನು ಕೊಟ್ಟಿದ್ದು ಡಾ.ಬಿ.ಆರ್. ಅಂಬೇಡ್ಕರ್ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.ತಾಲೂಕಿನ ಅನಗೊಂಡನಹಳ್ಳಿ ಹೋಬಳಿಯ ಯಡಗೊಂಡನಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಪುತ್ಥಳಿ ಅನಾವರಣ ಮಾಡಿ ಮಾತನಾಡಿದರು.ಏ. 14ರ ಅಂಬೇಡ್ಕರ್ ಜಯಂತಿ ದಿನದಂದು ದೊಡ್ಡ ಹರಳಗೆರೆ ಗ್ರಾಮದಲ್ಲಿ ಸಂವಿಧಾನ ಬರೆಯುತ್ತಿರುವ ಅಂಬೇಡ್ಕರ್ ಪ್ರತಿಮೆಯನ್ನು ಅನಾವರಣ ಮಾಡಿದ್ದೆವು. ಯಡಗೊಂಡನಹಳ್ಳಿ ಗ್ರಾಮದಲ್ಲಿ ಸಹ ಅದೇ ರೀತಿಯ ಪ್ರತಿಮೆ ಅನಾವರಣವನ್ನು ಗ್ರಾಮದ ಮಧ್ಯಭಾಗದಲ್ಲಿಯೇ ಮಾಡಿದ್ದೇವೆ. ಇದರಿಂದ ಗ್ರಾಮದಲ್ಲಿ ಸಹ ಅಂಬೇಡ್ಕರ್ ಕಂಡಂತಹ ಸಮಾನತೆಯ ಭಾವ ಎದ್ದು ಕಾಣುತ್ತಿದೆ. ಸಮಾಜದಲ್ಲಿ ದೀನದಲಿತರ ಶೋಷಿತರ ಮಹಿಳೆಯರ ಅಭಿವೃದ್ಧಿಗೆಂದು ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡಿದರು. ಅವರ ಸಂವಿಧಾನದ ಅಡಿಯಲ್ಲಿ ನಾವೆಲ್ಲರೂ ಸಮಾನತೆಯಿಂದ ಬದುಕುತ್ತಿದ್ದು ಅಂಬೇಡ್ಕರ್ ಅವರನ್ನು ನಿತ್ಯ ಸ್ಮರಿಸುವ ಕೆಲಸ ಆಗಬೇಕು ಎಂದರು.ವಕೀಲರಾದ ಯಡಗೊಂಡನಹಳ್ಳಿ ರಾಧಾಕೃಷ್ಣ ಮಾತನಾಡಿ, ಸಂವಿಧಾನದ ಮೂಲಕ ಪ್ರತಿಯೊಬ್ಬರಿಗೂ ಸಮಬಾಳನ್ನು ದಕ್ಕಿಸಿಕೊಟ್ಟ ಕೀರ್ತಿ ಅಂಬೇಡ್ಕರ್ ಅವರಿಗೆ ಸಲ್ಲಬೇಕು. ಮೀಸಲಾತಿ ದೊರೆತಿದ್ದು ಸಂವಿಧಾನದ ಮೂಲಕವಾದ್ದರಿಂದ ದಲಿತರು, ಅಲ್ಪ ಸಂಖ್ಯಾತರು, ಹಿಂದುಳಿದ ವರ್ಗದವರಿಗೆ ಅನುಕೂಲ ಆಗಿದೆ. ಆದ್ದರಿಂದ ಗ್ರಾಮಗಳಲ್ಲಿ ಜಾತಿ ಧರ್ಮ ಎನ್ನುವುದನ್ನು ಬಿಟ್ಟು ಸಮಾನತೆಯ ಬದುಕನ್ನು ಸಾಗಿಸಬೇಕು. ಎಂದರು.ದಲಿತ ನಾಯಕ ಬಿ. ಗೋಪಾಲ್, ಟಿ. ನರಸೀಪುರದ ನಳಂದ ಬುದ್ಧ ವಿಹಾರದ ಬೋಧಿರತ್ನ ಬಂತೆಜಿ, ಬಿವಿಎಸ್ ರಾಜ್ಯ ಸಂಯೋಜಕ ಡಾ. ಜಿ ಶ್ರೀನಿವಾಸ್, ಕೆಪಿಸಿಸಿ ಕಾರ್ಯದರ್ಶಿ ಸಮೇತನಹಳ್ಳಿ ಲಕ್ಷ್ಮಣ ಸಿಂಗ್, ರಾಜ್ಯ ರೆಡ್ಡಿ ಜನ ಸಂಘದ ನಿರ್ದೇಶಕ ಎಂಎ ಕೃಷ್ಣರೆಡ್ಡಿ, ಟಿಎಪಿಸಿಎಂ ಎಸ್ ಅಧ್ಯಕ್ಷ ಬಾಬುರೆಡ್ಡಿ, ಎಪಿಎಂಸಿ ಮಾಜಿ ಅಧ್ಯಕ್ಷ ಹಾರೋಹಳ್ಳಿ ದೇವರಾಜ್, ಅನಗೊಂಡನಹಳ್ಳಿ ಹೋಬಳಿ ಕಾಂಗ್ರೆಸ್ ಮುಖಂಡ ಬಿಎಮ್ ಪ್ರಕಾಶ್, ವಕೀಲ ರಾಧಾಕೃಷ್ಣ, ಮುತ್ಕುರು ಮುನಿರಾಜ್, ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್, ಮಾಜಿ ಅಧ್ಯಕ್ಷೆ ಮಂಜುಳಾ ಗೋಪಾಲ್, ಮುಖಂಡರಾದ ಮಧುಕುಮಾರ್ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.ಬಾಕ್ಸ್ :
ರಸ್ತೆ ಅಭಿವೃದ್ಧಿಗೆ ಶೀಘ್ರವಾಗಿ ಚಾಲನೆಅನಗೊಂಡನಹಳ್ಳಿ ಹೋಬಳಿಯ ತಿರುವರಂಗ ಗ್ರಾಮದಿಂದ ಬೋಧನಹೊಸಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಗಲೀಕರಣ ಮಾಡಿ ಮರುಡಾಂಬರಿಕರಣ ಮಾಡುವ ಕಾಮಗಾರಿಗೆ ಶೀಘ್ರವಾಗಿ ಚಾಲನೆ ನೀಡಲಾಗುವುದು. ಹಲವಾರು ದಿನಗಳಿಂದ ಬಾಕಿ ಉಳಿದಿದ್ದ ರಸ್ತೆ ಕಾಮಗಾರಿಗೆ ಅಗತ್ಯ ಅನುದಾನವನ್ನು ಒದಗಿಸಿದ್ದು ರಸ್ತೆ ಕಾಮಗಾರಿಯಿಂದ ಈ ಭಾಗದ ನಾಗರಿಕರಿಗೆ ಸಂಚಾರಕ್ಕೆ ಸಾಕಷ್ಟು ಅನುಕೂಲವಾಗಲಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಫೋಟೋ : 28 ಹೆಚ್‌ಎಸ್‌ಕೆ 1 ಹೊಸಕೋಟೆ ತಾಲೂಕಿನ ಯಡಗೊಂಡನಹಳ್ಳಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರ ಪುತ್ಥಳಿಯನ್ನು ಶಾಸಕ ಶರತ್ ಬಚ್ಚೇಗೌಡ ಅನಾವರಣ ಮಾಡಿದರು.