ಸಾರಾಂಶ
ಕನ್ನಡಪ್ರಭ ವಾರ್ತೆ ಆಲಮೇಲ ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆ ಸಮಾರಂಭ ಫೆ.4 ರಂದು ಬಸವನಬಾಗೇವಾಡಿಯಲ್ಲಿ ಹಮ್ಮಿಕೊಂಡಿದ್ದು, ಬೃಹತ್ ಸಮಾವೇಶದಲ್ಲಿ ಭಾಗವಹಿಸಲು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ ಆಲಮೇಲ
ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆ ಸಮಾರಂಭ ಫೆ.4 ರಂದು ಬಸವನಬಾಗೇವಾಡಿಯಲ್ಲಿ ಹಮ್ಮಿಕೊಂಡಿದ್ದು, ಬೃಹತ್ ಸಮಾವೇಶದಲ್ಲಿ ಭಾಗವಹಿಸಲು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಮನವಿ ಮಾಡಿದರು.ಪಟ್ಟಣದ ಅಳ್ಳೋಳ್ಳಿ ಮಠದ ಸಭಾಭವನದಲ್ಲಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ದರೋಡೆ, ಗೋವುಗಳ ಹತ್ಯೆ , ದುಷ್ಟಶಕ್ತಿಗಳನ್ನು ದಮನ ಮಾಡಲು ಸರ್ಕಾರ ವಿಫಲವಾಗಿದೆ. ಹಿಂದೂ ಸಮಾಜ ಬಲಿಷ್ಠವಾಗಲು ಎಲ್ಲಾ ಧರ್ಮೀಯರು ಜಾತ್ಯಾತೀತವಾಗಿ ಕ್ರಾಂತಿವೀರ ಬ್ರಿಗೇಡ್ ಯಶಸ್ವಿಗೆ ಸಹಕಾರ ನೀಡಬೇಕು. ತಾವೆಲ್ಲಾ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರಿ ಹಿಂದೂ ಧರ್ಮದ ಉಳಿವಿಗಾಗಿ ಪ್ರತಿಜ್ಞೆ ಪೂರ್ವಕವಾಗಿ ಯಾವುದೇ ಕಾಲಕ್ಕೂ ಮಧ್ಯದಲ್ಲಿ ನಿಲ್ಲುವುದಿಲ್ಲ, ಸಕಲ ಹಿಂದೂ ಸಮಾಜದ ಸಂಘಟನೆಯಿಂದ ಸಮಾಜ ಅಭಿವೃದ್ದಿ ಮಾಡುವ ಗುರಿಯಿದೆ, ಯಶಸ್ವಿಯಾಗಿ ಪಣ ತೊಡೋಣ ಎಂದು ಹೇಳಿದರು.ಕುರುಬ ಸಮಾಜದ ಅಧ್ಯಕ್ಷ ರಮೇಶ ಭಂಟನೂರು, ಡಾ. ಸಂದೀಪ ಪಾಟೀಲ ಮಾತನಾಡಿ, ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಹೆಗಲಿಗೆ ಹೆಗಲುಕೊಟ್ಟು ಅವರ ಯಶಸ್ವಿಗೆ ಶ್ರಮಿಸುವುದಾಗಿ ತಿಳಿಸಿದರು.ಕಾರ್ಯಕ್ರಮದಲ್ಲಿ ಸೋಮು ಪೂಜಾರಿ, ಸಿದ್ದು ಬುಳ್ಳ, ಶ್ರೀಶೈಲ ಮಠ, ಶ್ರೀಶೈಲ ಪೂಜಾರಿ, ಆಲಮೇಲ ತಾಲೂಕಿನ ಅಭಿಮಾನಿಗಳು ಇದ್ದರು.