ಸಮಾಜದಲ್ಲಿನ ತಾರತಮ್ಯ ಹೋಗಲಾಡಿಸಿ, ಸಮಾಜದ ಮುಖ್ಯವಾಹಿನಿಯಲ್ಲಿ ಎಲ್ಲರೂ ಬರುವಂತೆ ಮಾಡುವ ಜವಾಬ್ದಾರಿ ಸಮಾಜದ ಎಲ್ಲರ ಮೇಲಿದೆ.

ಸಾಮೂಹಿಕ ಸತ್ಯನಾರಾಯಣ ಪೂಜೆ, ವಾರ್ಷಿಕ ಸ್ನೇಹ ಸಮ್ಮೇಳನ, ಸನ್ಮಾನ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಯಲ್ಲಾಪುರ

ಪಾಲಕರನ್ನು ಪ್ರೀತಿ, ವಿಶ್ವಾಸದಿಂದ ನೋಡಿದಂತೆ ಸಮಾಜವನ್ನೂ ಪ್ರೀತಿಯಿಂದ ನೋಡಿ. ಸಮಾಜದಲ್ಲಿನ ತಾರತಮ್ಯ ಹೋಗಲಾಡಿಸಿ, ಸಮಾಜದ ಮುಖ್ಯವಾಹಿನಿಯಲ್ಲಿ ಎಲ್ಲರೂ ಬರುವಂತೆ ಮಾಡುವ ಜವಾಬ್ದಾರಿ ಸಮಾಜದ ಎಲ್ಲರ ಮೇಲಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ಪಟ್ಟಣದ ವೇದವ್ಯಾಸ ಸಭಾಭವನದಲ್ಲಿ ಸಮಗ್ರ ನಾಮಧಾರಿ ಅಭಿವೃದ್ಧಿ ಸಂಘ ಯಲ್ಲಾಪುರ ರಜತಮಹೋತ್ಸವದ ಅಂಗವಾಗಿ ಭಾನುವಾರ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಾಮಧಾರಿ ಸಮಾಜ ಜನಸಂಖ್ಯೆಯಲ್ಲಿ ಕಡಿಮೆ ಇರಬಹುದು. ಆದರೆ ರಾಜಕೀಯ, ಮಾಧ್ಯಮ, ಶಿಕ್ಷಣ, ಪ್ರಮುಖ ಇಲಾಖೆ ಹೀಗೆ ಯಾವುದೇ ಕ್ಷೇತ್ರದಲ್ಲಿಯೂ ಸಮಾಜ ಬಾಂಧವರು ಹಿಂದೆ ಬಿದ್ದಿಲ್ಲ. ಸಂಘಟನೆಯ ಮೂಲಕ ಸಮಾಜದ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಬೇಕು ಎಂದರು.

ಸಾಧಕರು ಹಾಗೂ ಪ್ರತಿಭಾವಂತರನ್ನು ಸನ್ಮಾನಿಸಿದ ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಪ್ರತಿಯೊಬ್ಬರಿಗೂ ತಮ್ಮ ತಮ್ಮ ಸಮಾಜದ ಬಗ್ಗೆ ಪ್ರೀತಿ ಇರಬೇಕು. ಅದರ ಜೊತೆ ಎಲ್ಲ ಸಮಾಜದ ಜೊತೆ ಸಮಾನತೆ, ಸಹಿಷ್ಣುತೆ, ಸೌಹಾರ್ಧತೆಯಿಂದ ಇರಬೇಕು. ಸಮುದಾಯ ಸಣ್ಣದಾದರೂ ಪ್ರಭಾವಿ ಅಧಿಕಾರ ಅನುಭವಿಸುವ ಅವಕಾಶ ಸಮುದಾಯ ನೀಡಿದೆ ಎಂದರು.

ಕುಮಟಾದ ಜೆಡಿಎಸ್ ಮುಖಂಡ ಸೂರಜ ನಾಯ್ಕ ಸೋನಿ ಮಾತನಾಡಿ, ನಮ್ಮ ಮನೆ, ಸಮಾಜ, ಕೇರಿ ಊರು ಹೀಗೆ ಎಲ್ಲರ ಸಹಕಾರ ಎಲ್ಲರ ಅಭಿವೃದ್ಧಿಗೆ ಸಂಘಟನೆ ಪ್ರಯತ್ನಿಸಬೇಕಿದೆ ಎಂದರು.

ಭಟ್ಕಳದ ಉದ್ಯಮಿ ಈಶ್ವರ ನಾಯ್ಕ, ಹೆಸ್ಕಾಂ ಎಇಇ ರಮಾಕಾಂತ ನಾಯ್ಕ, ಶಾಸಕ ಆಪ್ತ ಕಾರ್ಯದರ್ಶಿ ಕಮಲಾಕರ ನಾಯ್ಕ ಮಾತನಾಡಿದರು. ಸಂಘದ ಅಧ್ಯಕ್ಷ ನರಸಿಂಹ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.

ಬಿಇಓ ರೇಖಾ ನಾಯ್ಕ, ಪಪಂ ಅಧ್ಯಕ್ಷೆ ನರ್ಮದಾ ನಾಯ್ಕ, ಪ್ರಮುಖರಾದ ಲತಾ ಪೂಜಾರಿ, ಎಂ.ಎಚ್. ನಾಯ್ಕ ಮುಂಡಗೋಡು, ಕೆ.ಕೆ. ನಾಯ್ಕ, ಪಿ.ಟಿ. ನಾಯ್ಕ, ರವಿಂದ್ರ ನಾಯ್ಕ, ವೆಂಕಟೇಶ ನಾಯ್ಕ ಇತರರು ವೇದಿಕೆಯಲ್ಲಿದ್ದರು. ಸಮಾಜದ ಪ್ರತಿಭಾವಂತರು, ಸಾಧಕರನ್ನು ಗೌರವಿಸಲಾಯಿತು.

ನೇಹಾ ಮತ್ತು ಸಾರಿಕಾ ನಾಯ್ಕ ಸಂಗಡಿಗರು ಪ್ರಾರ್ಥಿಸಿದರು. ಭಾಸ್ಕರ ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸಂತೋಷ ನಾಯ್ಕ ನಿರ್ವಹಿಸಿದರು. ದಾಕ್ಷಾಯಣಿ ನಾಯ್ಕ ವಂದಿಸಿದರು.