ಸಾರಾಂಶ
ಬಾಲ್ಯವಿವಾಹ ಮಾಡಿದರೆ ಪೋಕ್ಸೋ ಕಾಯಿದೆಯಡಿ ಪೋಷಕರೂ ಸಹಾ ಅಪರಾಧಿಗಳಾಗುತ್ತಾರೆ, ಜೈಲು ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಓದಬೇಕಾದ ವಯಸ್ಸಿನಲ್ಲಿ ಮಕ್ಕಳಿಗೆ ಮದುವೆ ಮಾಡಿ ಅವರ ಬದುಕು ನರಕ ಮಾಡುವ ಮನಸ್ಥಿತಿಯಿಂದ ದೂರವಾಗಬೇಕು. ಮಕ್ಕಳು ನಿಮ್ಮ ಪರಿಸರದಲ್ಲಿ ಇಂತಹ ಬಾಲ್ಯವಿವಾಹ ಪ್ರಕರಣ ಕಂಡು ಬಂದರೆ ಪೊಲೀಸರಿಗೆ ತಿಳಿಸಿ.
ಕನ್ನಡಪ್ರಭ ವಾರ್ತೆ ಕೋಲಾರಬಾಲ್ಯ ವಿವಾಹ, ಬಾಲಗರ್ಭಿಣಿ ಅಪರಾಧ ಮಾತ್ರವಲ್ಲ, ಹೆಣ್ಣಿನ ಜೀವಕ್ಕೂ ಅಪಾಯ ಎಂಬುದನ್ನು ಅರಿತು ಈ ಪಿಡುಗಿನ ವಿರುದ್ಧ ಧ್ವನಿಯೆತ್ತಬೇಕು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮಾರಾಜು ಹೇಳಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲ್ಲೂಕಿನ ಮೂರಂಡಹಳ್ಳಿಯ ನಿಸರ್ಗ ಸಂಗೀತ ಮತ್ತು ಸಾಂಸ್ಕೃತಿಕ ಕಲಾ ಸಂಸ್ಥೆ ಆಶ್ರಯದಲ್ಲಿ ವಿಶ್ವ ಜನಸಂಖ್ಯಾದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಗೆ ಜಾಗೃತಿ ಮೂಡಿಸುವ ಬೀದಿ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು.ಬಾಲ್ಯದಲ್ಲೇ ಗರ್ಭಧಾರಣೆ ಅಪಾಯ
ಮದುವೆಗೆ ಹೆಣ್ಣು ಮಕ್ಕಳಿಗೆ ೧೮ವರ್ಷ, ಗಂಡು ಮಕ್ಕಳಿಗೆ ೨೧ ವರ್ಷವಾಗಿರಬೇಕು ಎಂದು ಸರ್ಕಾರ ಮಾಡಿರುವ ನಿಯಮ ಮಾತ್ರವಲ್ಲ, ತಜ್ಞರು ಸೂಚಿಸಿರುವ ಆರೋಗ್ಯಕರ ವಯಸ್ಸು. ಕಾರಣಾಂತರಗಳಿಂದ ಬಾಲಗರ್ಭಿಣಿಯಾದರೆ ಅದರಿಂದ ಜೀವಕ್ಕೂ ಹಾನಿ ಎಂದು ಎಚ್ಚರಿಸಿದ ಅವರು, ಆರೋಗ್ಯ ಇಲಾಖೆಯಲ್ಲಿ ಗರ್ಭಿಣಿಯಾಗುವುದನ್ನು ತಡೆಯಲು ಉಚಿತ ಸೌಲಭ್ಯಗಳಿಂದ ಅದನ್ನು ಮುಜುಗರಕ್ಕೊಳಗಾಗದೇ ಪಡೆದುಕೊಳ್ಳಿ, ಅಗತ್ಯವಾದಲ್ಲಿ ನಿಮ್ಮ ಅರಾಭಿಕೊತ್ತನೂರು ಗ್ರಾಮದಲ್ಲಿ ಸಮುದಾಯ ಆರೋಗ್ಯಾಧಿಕಾರಿ ಅವರೊಂದಿಗೆ ಆಪ್ತ ಸಮಾಲೋಚನೆಗೆ ಒಳಗಾಗಿ ಎಂದು ಸಲಹೆ ನೀಡಿದರು. ಬಾಲ್ಯವಿವಾಹ ಮಾಡಿದರೆ ಪೋಕ್ಸೋ ಕಾಯಿದೆಯಡಿ ಪೋಷಕರೂ ಸಹಾ ಅಪರಾಧಿಗಳಾಗುತ್ತಾರೆ, ಜೈಲು ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಓದಬೇಕಾದ ವಯಸ್ಸಿನಲ್ಲಿ ಮಕ್ಕಳಿಗೆ ಮದುವೆ ಮಾಡಿ ಅವರ ಬದುಕು ನರಕ ಮಾಡುವ ಮನಸ್ಥಿತಿಯಿಂದ ದೂರವಾಗಬೇಕು. ಮಕ್ಕಳು ನಿಮ್ಮ ಪರಿಸರದಲ್ಲಿ ಇಂತಹ ಬಾಲ್ಯವಿವಾಹ ಪ್ರಕರಣ ಕಂಡು ಬಂದರೆ ನಿಮ್ಮ ಶಿಕ್ಷಕರಿಗೆ, ಪೊಲೀಸ್ ಠಾಣೆಗೆ ಮಾಹಿತಿ ನೀಡಿ ತಡೆಯಲು ಸಹಕರಿಸಬೇಕು ಎಂದು ಮನವಿ ಮಾಡಿದರು.ನಕಲಿ ಕ್ಲಿನಿಕ್‌ಗೆ ಹೋಗಬೇಡಿ
ಇದೇ ಸಂದರ್ಭದಲ್ಲಿ ಕೋಲಾರ ಜಿಲ್ಲಾಧ್ಯಂತ ಆರ್‌ಎಂಪಿ ನಕಲಿ ಕ್ಲಿನಿಕ್‌ನ ಡಾಕ್ಟರ್‌ಗಳ ಬಳಿ ಚಿಕಿತ್ಸೆ ಪಡೆಯಬಾರದು ಎಂಬ ವಿಚಾರದ ಬಗ್ಗೆಯೂ ಕೂಡ ಬೀದಿ ನಾಟಕ ಮೂಲಕ ಅರಿವು ಮೂಡಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕ ತಾಹೇರಾ ನುಸ್ರತ್ ವಹಿಸಿದ್ದು, ಸರ್ಕಾರಿ ಮಕ್ಕಳಿಗೆ ಉಚಿತ ಶಿಕ್ಷಣ,ಸೌಲಭ್ಯ ನೀಡುತ್ತಿದೆ, ಬಾಲ್ಯವಿವಾಹದ ಮೂಲಕ ಜೀವನ ನಾಶಮಾಡಿಕೊಳ್ಳದಿರಿ, ನಿಮ್ಮ ಪೋಷಕರಿಗೂ ಅರಿವು ಮೂಡಿಸಿ, ಅಪರಾಧ, ಜೈಲುಶಿಕ್ಷೆಯ ಎಚ್ಚರಿಕೆಯನ್ನೂ ನೀಡಿ ಎಂದು ಕಿವಿಮಾತು ಹೇಳಿದರು.ಕಲಾವಿದರಿಂದ ಬೀದಿ ನಾಟಕ
ಕಲಾವಿದರಾದ ಯಲ್ಲಪ್ಪ, ಚಿಕ್ಕರೆಡ್ಡಪ್ಪ ನೇತೃತ್ವದ ತಂಡ ಬೀದಿ ನಾಟಕ ನಡೆಸಿಕೊಡುವ ಮೂಲಕ ಬಾಲ್ಯವಿವಾಹ ಹಾಗೂ ಬಾಲಗರ್ಭಿ ಣಿಯಾದರೆ ತಾಯಿ ಮತ್ತು ಮಗು ಇಬ್ಬರ ಜೀವಕ್ಕೂ ಹಾನಿ ಎಂಬುದನ್ನು ಮಕ್ಕಳ ಮನಮುಟ್ಟುವಂತೆ ನಾಟಕದ ಮೂಲಕ ಪ್ರದರ್ಶಿಸಿದರು. ಇದೇ ಸಂದರ್ಭದಲ್ಲಿ ಸರದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ಏಕತಾ ಪ್ರತಿಜ್ಞೆಯನ್ನು ಮಕ್ಕಳು ಸ್ವೀಕರಿಸಿದರು.ಬೀದಿನಾಟಕದಲ್ಲಿ ಕಲಾವಿದರಾ ಯಲ್ಲಪ್ಪ, ಚಿಕ್ಕರೆಡ್ಡಪ್ಪ, ಶಾಂತಮ್ಮ, ಅಂಭುಜ, ಗಾಯತ್ರಿ, ಕೌಶಿಕ್,ಗಗನ್, ಶಿಕ್ಷಕರಾದ ಸಿದ್ದೇಶ್ವರಿ, ಎಂ.ಆರ್.ಗೋಪಾಲಕೃಷ್ಣ, ಭವಾನಿ, ಸುಗುಣಾ,ವೆಂಕಟರೆಡ್ಡಿ, ರಮಾದೇವಿ, ಚೈತ್ರಾ, ಶ್ರೀನಿವಾಸಲು, ಆರೋಗ್ಯ ಇಲಾಖೆಯ ಕೆ.ಆರ್.ರಮೇಶ್ ಹಾಜರಿದ್ದರು.
;Resize=(128,128))
;Resize=(128,128))
;Resize=(128,128))