1 ಸಾವಿರಕ್ಕೂ ಅಧಿಕ ಮಂದಿಗೆ ಲಯನ್ಸ್ ವತಿಯಿಂದ ಕಣ್ಣಿನ ಚಿಕಿತ್ಸೆ

| Published : Jun 17 2024, 01:41 AM IST

ಸಾರಾಂಶ

ಕೊಳ್ಳೇಗಾಲದ ಲಯನ್ಸ್ ಸಂಸ್ಥೆಯಲ್ಲಿ ಆಯೋಜಿಸಿದ್ದ ಉಚಿತ ಕಣ್ಣಿನ ಶಿಬಿರಕ್ಕೆ ಅಧ್ಯಕ್ಷ ವೆಂಕಟೇಶ ಬಾಬು ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಲಯನ್ಸ್ ಸಂಸ್ಥೆ ಮಾನವೀಯ ಸೇವಾ ಕಾರ್ಯಗಳನ್ನು ಹತ್ತಾರು ವರ್ಷಗಳಿಂದ ಮಾಡುತ್ತಾ ಬಂದಿದ್ದು ಇಲ್ಲಿತನಕ 11,315 ಮಂದಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ನೀಡಲಾಗಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ವೆಂಕಟೇಶ್ ಬಾಬು ಹೇಳಿದರು.

ಪಟ್ಟಣದ ಲಯನ್ಸ್ ಕ್ಲಬ್ ವತಿಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಲಯನ್ಸ್ ಸಂಸ್ಥೆ ಆರಂಭವಾದಗಿನಿಂದ ಇದುವರೆಗೂ ಸುಮಾರು 225ಕ್ಕೂ ಹೆಚ್ಚಿನ ಕಣ್ಣಿನ ಶಿಬಿರವನ್ನು ನಡೆಸಿದ್ದು, ಇದರಲ್ಲಿ 1,15,037 ಜನರಿಗೆ ಚಿಕಿತ್ಸೆ ನೀಡಿ, ಅದರಲ್ಲಿ 11,315 ಮಂದಿಗೆ ಶಸ್ತ್ರ ಚಿಕಿತ್ಸೆ ಮಾಡಿಸಲು ಸ್ಪಂದಿಸಲಾಗಿದೆ ಎಂದರು. ನಮ್ಮಲ್ಲಿ ಚಿಕಿತ್ಸೆ ಪಡೆದು ಹೋಗುವ ಪ್ರತಿಯಿಬ್ಬರೂ ಕಣ್ಣಿನ ದೋಷವುಳ್ಳವರಿಗೆ ಮಾಹಿತಿ ನೀಡಿ, ಅವರಿಗೆ ಚಿಕಿತ್ಸೆ ಕೊಡಿಸುವುದು ನಮ್ಮ ಜವಾಬ್ದಾರಿ ಆಗಿದೆ ಎಂದರು.

ಇಂದಿನ ಶಿಬಿರದಲ್ಲಿ 73 ಮಂದಿ ಚಿಕಿತ್ಸೆ ಪಡೆದಿದ್ದು, ಅದರಲ್ಲಿ 43 ಮಂದಿ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾಗಿದ್ದು ಅವರನ್ನು ಬೆಂಗಳೂರಿನ ಲಯನ್ ವೆಸ್ಟ್ ಆಸ್ಪತ್ರೆಗೆ ಕರೆದುಕೊಂಡು ತೆರಳಲಾಗುವುದು ಎಂದರು. ಈ ವೇಳೆ ಲಯನ್ಸ್ ಕ್ಲಬ್ ಕಾರ್ಯದರ್ಶಿ ಇಂದ್ರೇಶ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗರಾಜು ಕೊಂಗರಹಳ್ಳಿ, ಆನಂದ್ ರಾಮಶೆಟ್ಟಿ, ,ಚಿಕ್ಕಬಸವಯ್ಯ, ವೈದ್ಯರಾದ ಡಾ.ಮರಿಯಾ, ಚನ್ನಮಾದೇಗೌಡ ಇನ್ನಿತರರಿದ್ದರು.