ಸಾರಾಂಶ
30 ವರ್ಷಗಳ ಉತ್ತಮ ಕೆಲಸದ ಮೂಲಕ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅಪಾರ ಶ್ರಮಿಸಿದ್ದಾರೆ. ಎಂ.ಡಿ. ಮರಿಸ್ವಾಮಿಗೌಡ ಅವರು ನನ್ನ ಒಡನಾಡಿಗಳು. ಸೆಪ್ಟಂಬರ್ ಎರಡನೇ ಅಥವಾ ಮೂರನೇ ವಾರ ಪಾಂಡವಪುರದಲ್ಲಿ ಮರಿಸ್ವಾಮಿಗೌಡರಿಗೆ ದೊಡ್ಡ ಮಟ್ಟದಲ್ಲಿ ಅಭಿನಂದನಾ ಸಮಾರಂಭ ಆಯೋಜಿಸಲು ನಿರ್ಧರಿಸಲಾಗಿದೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಮೂಡಲಕೊಪ್ಪಲು ಗ್ರಾಮದ ಪ್ರಭಾರಿ ಮುಖ್ಯ ಶಿಕ್ಷಕ ಎಂ.ಡಿ.ಮರಿಸ್ವಾಮಿಗೌಡರು ಸೇವೆಯಿಂದ ವಯೋ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಅದ್ಧೂರಿಯಾಗಿ ಬೀಳ್ಕೊಡುಗೆ ನೀಡಲಾಯಿತು.ಎಂ.ಡಿ.ಮರಿಸ್ವಾಮಿಗೌಡ ದಂಪತಿಯನ್ನು ವಾದ್ಯ ಮೇಳಗಳ ಮೆರವಣಿಗೆ ಮೂಲಕ ವೇದಿಕೆಗೆ ಕರೆ ತರಲಾಯಿತು. ಬಳಿಕ ಆತ್ಮೀಯವಾಗಿ ಅಭಿನಂದಿಸಿ ಬೀಳ್ಕೊಟ್ಟರು.
ಕಾರ್ಯಕ್ರಮ ಉದ್ಘಾಟಿಸಿದ ಭೂ ದಾಖಲೆಗಳ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಎಂ.ಎಸ್.ಮರಿಸ್ವಾಮಿಗೌಡ ಮಾತನಾಡಿ, 30 ವರ್ಷಗಳ ಉತ್ತಮ ಕೆಲಸದ ಮೂಲಕ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅಪಾರ ಶ್ರಮಿಸಿದ್ದಾರೆ. ಎಂ.ಡಿ. ಮರಿಸ್ವಾಮಿಗೌಡ ಅವರು ನನ್ನ ಒಡನಾಡಿಗಳು. ಸೆಪ್ಟಂಬರ್ ಎರಡನೇ ಅಥವಾ ಮೂರನೇ ವಾರ ಪಾಂಡವಪುರದಲ್ಲಿ ಮರಿಸ್ವಾಮಿಗೌಡರಿಗೆ ದೊಡ್ಡ ಮಟ್ಟದಲ್ಲಿ ಅಭಿನಂದನಾ ಸಮಾರಂಭ ಆಯೋಜಿಸಲು ನಿರ್ಧರಿಸಲಾಗಿದೆ ಎಂದರು.ಶ್ರೀ ಬಾಲ ಭೈರವೇಶ್ವರ ಎಜುಕೇಷನಲ್ ಮತ್ತು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಅರವಿಂದ ರಾಘವನ್ ಮಾತನಾಡಿ, ನಿವೃತ್ತಿಯಾಗಿರುವ ಎಂ.ಡಿ.ಮರಿಸ್ವಾಮಿಗೌಡರು ನನಗೆ ಸಿಕ್ಕಿದ್ದು ಬಹಳ ಅದೃಷ್ಟ. ಈತ ಒಳ್ಳೆಯ ಗೆಳೆಯ, ಆಗಾಗ್ಗೆ ನನಗೆ ಒಳ್ಳೆಯ ಮಾರ್ಗದರ್ಶನ ನೀಡುತ್ತಿರುತ್ತಾರೆ ಎಂದರು.
ಅಭಿನಂದನೆ ಸ್ವೀಕರಿಸಿದ ಎಂ.ಡಿ.ಮರಿಸ್ವಾಮಿಗೌಡ ಮಾತನಾಡಿ, ಮೊದಲು ದುದ್ದ ಹೋಬಳಿಯ ಹೊನ್ನೆಮಡು ಶಾಲೆಯಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದೆ. ನಂತರ ಚಿಟ್ಟನಹಳ್ಳಿ ಶಾಲೆ, ಮಾಣಿಕ್ಯನಹಳ್ಳಿ, ಮೂಡಲಕೊಪ್ಪಲು ಶಾಲೆಯಲ್ಲಿ ಸೇವೆ ಸಲ್ಲಿಸುವಾಗ ಮಕ್ಕಳಿಗೆ ಶಿಕ್ಷಣ ನೀಡುವ ಜೊತೆಗೆ ಶಿಕ್ಷಕರು ಸಹಕಾರದಿಂದ ಶಾಲೆಯಲ್ಲಿ ಗಿಡಮರ ನೆಡಿಸಿ ಪರಿಸರ ಸಂರಕ್ಷಣೆಗಾಗಿ ಶ್ರಮಿಸಿದೆ ಎಂದರು.ಈ ವೇಳೆ ಎಂ.ಡಿ.ಮರಿಸ್ವಾಮಿಗೌಡ ಅವರನ್ನು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ನಾಗೇಶ್ ಸೇರಿದಂತೆ ಶಿಕ್ಷಕರ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಆಯುಕ್ತರ ಕಚೇರಿ ಸಹಾಯಕ ನಿರ್ದೇಶಕ ಗೋಪಾಲಗೌಡ, ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್, ಹಳೇಬೀಡು ಗ್ರಾಪಂ ಅಧ್ಯಕ್ಷ ಧನಂಜಯ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಎನ್.ಕೆಂಪೇಗೌಡ, ರಾಜ್ಯ ಸಂಘಟನಾ ಕಾರ್ಯದರ್ಶಿ ಮಾಣಿಕ್ಯನಹಳ್ಳಿ ಜಯರಾಂ, ಪ್ರೌಢಶಾಲೆ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ರಮೇಶ್ ಬೀರಶೆಟ್ಟಹಳ್ಳಿ, ದೈಹಿಕ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಎಸ್.ಮಲ್ಲಿಕಾರ್ಜುನಗೌಡ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಲ್.ಎಸ್.ಕೇಶವಮೂರ್ತಿ ಪದಾಧಿಕಾರಿಗಳು, ಎಸ್ ಡಿಎಂಸಿ ಪದಾಧಿಕಾರಿಗಳು, ಶಿಕ್ಷಕರು ಇದ್ದರು.