ಕನಕಗಿರಿ: ವಿದ್ಯುತ್ ಶ್ಯಾಟ್ ಸರ್ಕ್ಯೂಟ್ ನಿಂದಾಗಿ ತಾಲೂಕಿನ ಹುಲಿಹೈದರ ಗ್ರಾಮದ ರೈತ ದುರುಗಪ್ಪ ಕಚಗಾರಿ ಎಂಬುವರ ತೋಟದ ಮನೆ ಸುಟ್ಟು ಕರಕಲಾಗಿರುವ ಘಟನೆ ತಾಲೂಕಿನ ಹುಲಿಹೈದರ ಗ್ರಾಮದ ಹೊರವಲಯದಲ್ಲಿನ ಪೆಟ್ರೋಲ್ ಬಳಿ ಮಂಗಳವಾರ ನಡೆದಿದೆ.
ಮಾಹಿತಿ ತಿಳಿದ ಕಂದಾಯ ನೀರಿಕ್ಷಕ ರವಿ ನಾಯಕ ನೇತೃತ್ವದ ಗ್ರಾಪಂ, ಜೆಸ್ಕಾಂ ಇಲಾಖೆ ಅಧಿಕಾರಿಗಳ ನೇತೃತ್ವದ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಹಾನಿಯಾಗಿರುವ ಬಗ್ಗೆ ವರದಿ ಮಾಡಿಕೊಂಡರು.ಕಳೆದ ೩೦ ವರ್ಷಗಳಿಂದ ತೋಟದಲ್ಲಿ ಮನೆ ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದೇವೆ. ₹೧ ಲಕ್ಷ ನಗದು, ೨೦ಗ್ರಾಂ ಚಿನ್ನ, ೨ ಕ್ವಿಂಟಲ್ ಜೋಳ, ೨ ಕ್ವಿಂಟಲ್ ಅಕ್ಕಿ, ಅಡುಗೆ ಸಾಮಗ್ರಿ, ಕೃಷಿ ಚಟುವಟಿಕೆ ಉಪಯೋಗಿಸುವ ಟ್ಯಾಂಕರ್ ಯಂತ್ರ ಹಾಗೂ ಬಿತ್ತನೆಗೆ ಬಳಸುವ ಸಾಮಗ್ರಿಗಳು ಸುಟ್ಟು ಕರಕಲಾಗಿವೆ. ಮಳೆಯಾಗದೆ ಬೆಳೆ ಇಲ್ಲವಾಗಿದೆ. ಇಂತಹ ಹೀನ ಪರಿಸ್ಥಿತಿಯಲ್ಲಿರುವ ನಮಗೆ ದಿಕ್ಕು ತೋಚದಂತಾಗಿದೆ ಎಂದು ರೈತ ದುರುಗಪ್ಪ ಕಣ್ಣೀರಿಟ್ಟನು.
ಈ ವೇಳೆ ಗ್ರಾಮ ಆಡಳಿತಧಿಕಾರಿ ಹಾಲೇಶ, ಗ್ರಾ.ಪಂ ಕರವಸೂಲಿಗಾರ ಶ್ರೀನಿವಾಸ ಕುಲಕರ್ಣಿ, ಜೆಸ್ಕಾಂ ಇಲಾಖೆಯ ಸಿಬ್ಬಂದಿಯವರು ಇದ್ದರು.ವಿದ್ಯುತ್ ಶ್ಯಾಟ್ ಸರ್ಕ್ಯೂಟ್‌ನಿಂದಾಗಿ ಲಕ್ಷಾಂತರ ಹಾನಿಗೊಳಗಾದ ರೈತ ದುರುಗಪ್ಪನಿಗೆ ಮುಖ್ಯಮಂತ್ರಿಗಳು ನೆರವಾಗಬೇಕು. ಸಿಎಂ ಪರಿಹಾರ ನಿಧಿಯಿಂದ ರೈತನಿಗೆ ಪರಿಹಾರ ನೀಡಿದರೆ ಪತ್ನಿ ಜತೆಗೆ ಇನ್ನೂಳಿದ ಮೂವರು ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ. ಶ್ಯಾಟ್ ಸರ್ಕ್ಯೂಟ್‌ನಿಂದ ಸಂಕಷ್ಟದಲ್ಲಿರುವ ಬಡ ರೈತನ ಆರ್ಥಿಕ ನೆರವು ನೀಡಿ ಆಸರೆಯಾಗಬೇಕು ಎಂದು ರೈತ ಮುಖಂಡ ಹನುಮಂತಪ್ಪ ಬಂಡ್ರಾಳ್ ತಿಳಿಸಿದ್ದಾರೆ.