ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತಸಂಘ ಪ್ರತಿಭಟನೆ

| Published : Sep 09 2025, 01:01 AM IST

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತಸಂಘ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಸತತ ಮಳೆಯಿಂದಾಗಿ ಹಾನಿಯಾದ ಮುಂಗಾರು ಹಂಗಾಮಿನ ಈರುಳ್ಳಿ, ಹೆಸರು, ಮೆಕ್ಕೆಜೋಳಗಳಿಗೆ ಸರ್ಕಾರ ಬೆಳೆ ಹಾನಿ ಪರಿಹಾರ ನೀಡಬೇಕು, ಖರೀದಿ ಕೇಂದ್ರ ಸ್ಥಾಪನೆ ಸೇರಿದಂತೆ ರೈತರ ವಿವಿಧ ಬೇಡಿಕೆಗಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಡಂಬಳ: ಸತತ ಮಳೆಯಿಂದಾಗಿ ಹಾನಿಯಾದ ಮುಂಗಾರು ಹಂಗಾಮಿನ ಈರುಳ್ಳಿ, ಹೆಸರು, ಮೆಕ್ಕೆಜೋಳಗಳಿಗೆ ಸರ್ಕಾರ ಬೆಳೆ ಹಾನಿ ಪರಿಹಾರ ನೀಡಬೇಕು, ಖರೀದಿ ಕೇಂದ್ರ ಸ್ಥಾಪನೆ ಸೇರಿದಂತೆ ರೈತರ ವಿವಿಧ ಬೇಡಿಕೆಗಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಡಂಬಳ ಗ್ರಾಮದಲ್ಲಿ ಸೋಮವಾರ ಪ್ರತಿಭಟನೆ ಬಳಿಕ ನಾಡ ಕಾರ್ಯಾಲಯದಲ್ಲಿ ಉಪ ತಹಸೀಲ್ದಾರ್‌ ಎಸ್.ಎಸ್. ಬಿಚ್ಚಾಲಿ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಜಿಲ್ಲಾ ಘಟಕ ಅಧ್ಯಕ್ಷ ಶಂಕರಗೌಡ ಜಯನಗೌಡ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾದ ಹೆಸರು, ಮೆಕ್ಕೆಜೋಳ, ಶೇಂಗಾ, ಈರುಳ್ಳಿ ಅತಿಯಾದ ಮಳೆಯಿಂದ ಸಂಪೂರ್ಣ ನಾಶವಾಗಿದ್ದು, ಇದುವರೆಗೂ ಅವುಗಳಿಗೆ ಯಾವುದೇ ರೀತಿ ಸರ್ಕಾರ ಬೆಳೆ ಪರಿಹಾರ ನೀಡಿಲ್ಲ. ರೈತರ ಎಲ್ಲ ಬೆಳೆಗಳಿಗೆ

ಎಂಎಸ್ಪಿ ದರ ನಿಗದಿಪಡಿಸಬೇಕು. ಡಂಬಳ ಎಪಿಎಂಸಿಯಲ್ಲಿ ಈರುಳ್ಳಿ ಖರೀದಿ ಕೇಂದ್ರ ಸ್ಥಾಪಿಸಬೇಕು. ಸೋಲಾರ, ಫ್ಯಾನ್‌ಗಳ ಅಳವಡಿಕೆಯಿಂದಾಗಿ ರೈತರ ಜಮೀನಿಗೆ ತೆರಳುವ ರಸ್ತೆ ಸುಧಾರಣೆ ಕೈಗೊಳಬೇಕು, ಪಾಪನಾಶಿ ಹತ್ತಿರ ಇರುವ ಅವೈಜ್ಞಾನಿಕ ಟೋಲ್ ಗೇಟ್ ತೆರವುಗೊಳಿಸಬೇಕು, ರೈತರ ಪಂಪ್ ಸೆಟ್‌ಗಳಿಗೆ ನೀಡುತ್ತಿರುವ 7 ತಾಸು 3ಫೇಸ್ ವಿದ್ಯುತ್‌ನ್ನು 10 ತಾಸು ನೀಡಬೇಕು, ರೈತರ ಸಾಲಮನ್ನಾ ಮಾಡಬೇಕು. ಡಾ. ಎಂ.ಎಸ್. ಸ್ವಾಮಿನಾಥನ್ ವರದಿ ರಾಜ್ಯದಲ್ಲಿ ಜಾರಿಗೆ ಆಗಬೇಕು. ರೈತ ಕಾರ್ಮಿಕರಿಗೆ ಇದುವರೆಗೂ ಸರ್ಕಾರದಿಂದ ಯಾವುದೇ ಸಹಾಯಧನಗಳು ಇರುವುದಿಲ್ಲ. ಸಿಂಗಟಾಲೂರು ಹುಲಿಗುಡ್ಡ ಏತನೀರಾವರಿ ಸಂಪೂರ್ಣ ನೀರಾವರಿ ಯೋಜನೆ ಜಾರಿಗೆ ಕಾಲುವೆ ಮೂಲಕ ರೈತ ಜಮೀನಿಗೆ 2 ಟಿಎಂಸಿ ನೀರು ಹರಿಸುವ ಯೋಜನೆಯನ್ನು 8 ಟಿಎಂಸಿಗೆ ನೀರು ಪೂರೈಕೆ ಯೋಜನೆಯನ್ನು ಎತ್ತಿಕೊಳ್ಳಬೇಕು. ವನ್ಯಜೀವಿಧಾಮ ಕಪತ್ತುಗುಡ್ಡ ಅಂಚಿನಲ್ಲಿರುವ ರೈತರ ಜಮೀನಿಗೆ ಕಾಡು ಪ್ರಾಣಿಗಳು ಅಪಾರ ಪ್ರಮಾಣದಲ್ಲಿ ನುಗ್ಗಿ ಬೆಳೆ ಹಾನಿ ಮಾಡಿರುವಂತ ರೈತರಿಗೆ ವನ್ಯಜೀವಿಧಾಮದಡಿಯಲ್ಲಿ ಪರಿಹಾರ ಘೋಷಣೆ ನೀಡಬೇಕು, ಜಿಂಕೆವನ ನಿರ್ಮಾಣ ಮಾಡಬೇಕು. ಹೊಸರು ಡಂಬಳ ಗ್ರಾಮಸ್ಥರಿಗೆ ರುದ್ರಭೂಮಿ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಉಪತಹಸೀಲ್ದಾರ್ ಎಸ್.ಎಸ್. ಬಿಚ್ಚಾಲಿ, ಸ್ಥಳೀಯ ರೈತರ ಸಮಸ್ಯೆ ಅತೀ ಶೀಘ್ರದಲ್ಲಿ ಈಡೇರಿಸಲಾಗುವುದು. ಮನವಿಯನ್ನು ಸಂಬಂಧಿಸಿದ ಇಲಾಖೆಗೆ ಕಳಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಪ್ರಭು ಬಾಗಲಿ, ಡಂಬಳ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಎಸ್.ಬಿ. ರಾಮನೇಹಳ್ಳಿ, ಅರಣ್ಯ ಅಧಿಕಾರಿ ಮೈಲಾರಪ್ಫ ಮಡಿವಾಳರ, ಗ್ರಾಪಂ ಪಿಡಿಒ ಲತಾ ಮಾನೆ, ರೈತರಾದ ಬಿ.ಸಿ. ಡಂಬಳಮಠ, ಮಂಜುನಾಥ ಗದಗಿನ, ಪೀರಸಾಬ ಹಳ್ಳಿಕೇರಿ, ಈರಯ್ಯ ಕರವೀರಮಠ, ಹಮ್ಮಿದಸಾಬ ಹಳ್ಳಿಕೇರಿ, ಶಿವಾಜಿ ಪಾರಪ್ಪನವರ, ಪರಶುರಾಮ‌ ವಡ್ಡರ, ನಿಂಗಪ್ಪ ಸಂಗಟಿ, ಎಸ್. ಪಿ. ಕಾಡಸಿದ್ದೇಶ್ವರಮಠ, ರಾಜಾಭಕ್ಷಿ, ಎಮ್.ಡಿ. ಹೊಂಬಳ, ಎಚ್ .ಡಿ. ದೊಡ್ಡಮನಿ, ಮಾರುತಿ ಸಂಜೀವಣ್ಣವರ, ರವಿ ಮೇಗೂರ, ಹನಮಪ್ಪ ಒಂಟೆಲಭೋವಿ, ಗಯಪ್ಪ ಜೊಂಡಿ, ಶ್ರೀಧರ ಪಲ್ಲೇದ, ಸೋಮಪ್ಪ ಓಲಿ ಸುತ್ತಮುತ್ತಲಿನ ಗ್ರಾಮದ ರೈತರು ಇದ್ದರು.