ಸಾರಾಂಶ
12ನೇ ಶತಮಾನದಲ್ಲಿ ಶಿವಶರಣ ಮಾದಯ್ಯ ಅವರ ಜೀವನ ನಮಗೆ ಆದರ್ಶವಾಗಿದೆ. ಬಸವಾದಿ ಪ್ರಮಥರಿಗೆ ಹೂಗಾರ ಮಾದಯ್ಯ ಅವರು ಹೂವು ಪತ್ರಿ ನೀಡಿ ಲಿಂಗ ಪೂಜೆಗೆ ಕಾಯಕ ಮಾಡುತ್ತ ಜೀವನ ಸಾಗಿಸಿದ್ದು ನಮಗೆಲ್ಲ ಆದರ್ಶವಾಗಿದೆ ಎಂದು ನಿವೃತ್ತ ಡಿವೈಎಸ್‌ಪಿ ಬಸವಂತಪ್ಪ ಹೂಗಾರ ಹೇಳಿದರು.
ಲಕ್ಷ್ಮೇಶ್ವರ:12ನೇ ಶತಮಾನದಲ್ಲಿ ಶಿವಶರಣ ಮಾದಯ್ಯ ಅವರ ಜೀವನ ನಮಗೆ ಆದರ್ಶವಾಗಿದೆ. ಬಸವಾದಿ ಪ್ರಮಥರಿಗೆ ಹೂಗಾರ ಮಾದಯ್ಯ ಅವರು ಹೂವು ಪತ್ರಿ ನೀಡಿ ಲಿಂಗ ಪೂಜೆಗೆ ಕಾಯಕ ಮಾಡುತ್ತ ಜೀವನ ಸಾಗಿಸಿದ್ದು ನಮಗೆಲ್ಲ ಆದರ್ಶವಾಗಿದೆ ಎಂದು ನಿವೃತ್ತ ಡಿವೈಎಸ್‌ಪಿ ಬಸವಂತಪ್ಪ ಹೂಗಾರ ಹೇಳಿದರು.
ಸೋಮವಾರ ಪಟ್ಟಣದ ಸರಾಫ್ ಬಜಾರ್‌ದಲ್ಲಿನ ಬಸವೇಶ್ವರ ದೇವಸ್ಥಾನದಲ್ಲಿ ಶಿವಶರಣ ಹೂಗಾರ ಮಾದಯ್ಯ ಅವರ ಜಯಂತಿ ಆಚರಿಸಿ ಮಾತನಾಡಿದರು.ಶರಣರಾಗಿದ್ದ ಹೂಗಾರ ಮಾದಯ್ಯ ಅವರು ಬಸಣ್ಣನವರ ಸಮಕಾಲಿನರಾಗಿದ್ದು, 12ನೇ ಶತಮಾನದಲ್ಲಿ ಬಾಳಿ ಹೋದ ಶರಣರ ಕಾಯಕ ತತ್ವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದು ವಿಶೇಷವಾಗಿತ್ತು. ಹೂಗಾರ ಮಾದಯ್ಯ ಅವರ ವಚನಗಳು ಇಂದಿಗೂ ನಮಗೆ ಮಾದರಿಯಾಗಿವೆ ಎಂದು ಹೇಳಿದರು.
ಈ ವೇಳೆ ನಿವೃತ್ತ ಶಿಕ್ಷಕ ವಿ.ಎಂ. ಹೂಗಾರ ಮಾತನಾಡಿ, ಶರಣರಾಗಿದ್ದ ಹೂಗಾರ ಮಾದಯ್ಯ ಅವರು ತಮ್ಮ ಕಾಯಕದೊಂದಿಗೆ ನೂರಾರು ವಚನಗಳನ್ನು ರಚನೆ ಮಾಡಿ ಸಮಾಜದ ಅಂಕುಡೊಂಕು ತಿದ್ದುವ ಕಾರ್ಯ ಮಾಡಿದರು ಎಂದು ಹೇಳಿದರು.ಈ ವೇಳೆ ಡಾ.ಎಸ್.ಜಿ. ಹೂವಿನ, ಶಿವಾನಂದ ಹೂವಿನ, ಚನವೀರಪ್ಪ ಹೂಗಾರ, ಪರಶುರಾಮ ಹೂಗಾರ, ಚಂದ್ರಶೇಖರ ಹೂಗಾರ, ಚಂದ್ರಶೇಖರ ಪೂಜಾರ, ಟಿ.ಎಸ್. ಹೂಗಾರ. ಮಂಜುಳಾ ಹೂಗಾರ, ಶೈಲಜಾ ಹೂಗಾರ, ಅನ್ನಪೂರ್ಣಾ ಹೂಗಾರ ಸೇರಿದಂತೆ ಅನೇಕರು ಇದ್ದರು.