ಕೆಆರ್ ಎಸ್ ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷೆ ಮಹದೇವಮ್ಮ ಮಾತನಾಡಿ, ರಾಜಕಾರಣಿಗಳು ಮತ ಕೇಳಲು ಬಂದಾಗ ಗೋವಿನ ತರ ಬರುತ್ತಾರೆ. ಗೆದ್ದ ನಂತರ ಗೋಮುಖ ವ್ಯಾಘ್ರರಾಗಿ ವರ್ತಿಸುತ್ತಿದ್ದಾರೆ. ನೀವು ತಿನ್ನುತ್ತಿರುವುದು ರೈತರು ಬೆಳೆದ ಅನ್ನವೇ ಹೊರತು ಚಿನ್ನ ಬೆಳ್ಳಿಯಲ್ಲ, ನಿಮಗೆ ಮಾನ, ಮರ್ಯಾದೆ ಇದ್ದರೆ ಮೊದಲು ಅಂತರ್ಜಲ ಅಭಿವೃದ್ಧಿಗೆ ನೀರು ಕೊಡಿ ಅಯೋಗ್ಯರೇ ಎಂದು ಆಕ್ರೋಶ ಹೊರ ಹಾಕಿದರು.
ಕನ್ನಡಪ್ರಭ ವಾರ್ತೆ ಹನೂರು
ಕಾವೇರಿ ನದಿಯಿಂದ ದಂಟಳ್ಳಿ ಮಾರ್ಗವಾಗಿ ಒಡಕೆಹಳ್ಳ, ಮಾರ್ಟಳ್ಳಿ, ಸುಳವಾಡಿ ಸೇರಿ ಹಲವು ಗ್ರಾಮಗಳಿಗೆ ಏತ ನೀರಾವರಿ ಯೋಜನೆ ಕಲ್ಪಿಸುವಂತೆ ಒತ್ತಾಯಿಸಿ ಸೋಮವಾರ ನಡೆದ ರೈತಸಂಘದ 43ನೇ ದಿನದ ಶಾಂತಿಯುತ ಅಹೋರಾತ್ರಿ ಹೋರಾಟಕ್ಕೆ ಕೆ ಆರ್ ಎಸ್ ಸಂಘಟನೆಯ ಜಿಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿ ಸರ್ಕಾರದ ಸಂವಿಧಾನ ವಿರೋಧಿ ನೀತಿಯನ್ನು ಖಂಡಿಸಿದರು.ಕೆಆರ್ ಎಸ್ ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷೆ ಮಹದೇವಮ್ಮ ಮಾತನಾಡಿ, ರಾಜಕಾರಣಿಗಳು ಮತ ಕೇಳಲು ಬಂದಾಗ ಗೋವಿನ ತರ ಬರುತ್ತಾರೆ. ಗೆದ್ದ ನಂತರ ಗೋಮುಖ ವ್ಯಾಘ್ರರಾಗಿ ವರ್ತಿಸುತ್ತಿದ್ದಾರೆ. ನೀವು ತಿನ್ನುತ್ತಿರುವುದು ರೈತರು ಬೆಳೆದ ಅನ್ನವೇ ಹೊರತು ಚಿನ್ನ ಬೆಳ್ಳಿಯಲ್ಲ, ನಿಮಗೆ ಮಾನ, ಮರ್ಯಾದೆ ಇದ್ದರೆ ಮೊದಲು ಅಂತರ್ಜಲ ಅಭಿವೃದ್ಧಿಗೆ ನೀರು ಕೊಡಿ ಅಯೋಗ್ಯರೇ ಎಂದು ಆಕ್ರೋಶ ಹೊರ ಹಾಕಿದರು.
ಪ್ರತಿಭಟನೆಯಲ್ಲಿ ಮೈಸೂರು ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ನೇತ್ರ, ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್ ಶಾಸ್ತ್ರಿ, ಚಾಮರಾಜನಗರ ಜಿಲ್ಲಾಧ್ಯಕ್ಷ ಗಿರೀಶ್, ಮಂಡ್ಯ ಜಿಲ್ಲಾಧ್ಯಕ್ಷ ಶಿವಮೂರ್ತಿ, ರೈತ ಸಂಘದ ಜಿಲ್ಲಾ ಸಂಚಾಲಕ ಶೈಲೇಂದ್ರ, ಗ್ರಾಮ ಘಟಕದ ಅಧ್ಯಕ್ಷ ಅರ್ಪುದರಾಜ್, ವಸಂತ, ಮಾಜಿ ಸೈನಿಕರಾದ ಮರಿಯಾ ಜೋಸೆಫ್, ವಸಂತ, ಪುಟ್ಟಸ್ವಾಮಿ, ರಾಜು, ಫ್ರಾನ್ಸಿಸ್, ಸೆಲ್ವ ಮೇರಿ ಡೇವಿಡ್, ಅಂಟೋನಿ ಸ್ವಾಮಿ ಹಾಜರಿದ್ದರು.