ಕನ್ನಡಪ್ರಭ ವಾರ್ತೆ ಟಿ. ನರಸೀಪುರಡಿಎಪಿ ಯೂರಿಯಾದ ಜೊತೆಗೆ ಒತ್ತಾಯವಾಗಿ ಬೇರೆ ಉತ್ಪನ್ನಗಳನ್ನು ಲಿಂಕ್ ರೂಪದಲ್ಲಿ ಕೊಡುವುದನ್ನು ನಿಲ್ಲಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಾಲೂಕು ರಸಗೊಬ್ಬರ ಬಿತ್ತನೆ ಬೀಜ ಮತ್ತು ಕೀಟನಾಶಕ ಮಾರಾಟಗಾರರು ಕೃಷಿ ಪರಿಕರ ಅಂಗಡಿಗಳನ್ನು ಬಂದ್ ಮಾಡಿ ಪಟ್ಟಣದಲ್ಲಿ ಸೋಮವಾರ ಪ್ರತಿಭಟಿಸಿದರು.ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಾರಾಟಗಾರರು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಬಳಿ ಜಮಾವಣೆಗೊಂಡು ಕೃಷಿ ಮಾರಾಟಗಾರರು ನಿತ್ಯ ಎದುರಿಸುತ್ತಿರುವ ಸಮಸ್ಯೆಗಳನ್ನು ಈಡೇರಿಸುವಂತೆ ದೇಶಾದ್ಯಂತ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ಪ್ರತಿಭಟಿಸಿದರು.ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ತಾಲೂಕು ಕಚೇರಿ ತಲುಪಿದ ಪ್ರತಿಭಟನಾ ನಿರತರು ವಿವಿಧ ಬೇಡಿಕೆಯುಳ್ಳ ಮನವಿ ಪತ್ರವನ್ನು ಗ್ರೇಡ್ 2 ತಹಸೀಲ್ದಾರ್ ರಾಜಾಕಾಂತ್ ಅವರಿಗೆ ಸಲ್ಲಿಸಿದರು.ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಎಂ. ಚಂದ್ರಶೇಖರ್, ಮಾರಾಟಗಾರರ ವಿವಿಧ ಸಮಸ್ಯೆಗಳು ಹಾಗು ಬೇಡಿಕೆ ಈಡೇರಿಸುವಂತೆ ದೇಶಾದ್ಯಂತ ಇಂದು ಪ್ರತಿಭಟನೆ ನಡೆಯುತ್ತಿದ್ದು, ದೆಹಲಿಯ ಅಖಿಲ ಭಾರತ ಕೃಷಿ ಪರಿಕರ ಮಾರಾಟಗಾರರ ಸಂಘ, ಬೆಂಗಳೂರು ಹಾಗು ಮೈಸೂರು ಕರ್ನಾಟಕ ರಾಜ್ಯ ಕೃಷಿ ಪರಿಕರಗಳ ಮಾರಾಟಗಾರರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.ಪ್ರತಿಭಟನೆಯಲ್ಲಿ ಸಂಘದ ಕಾರ್ಯದರ್ಶಿ ಯೋಗೇಶ್, ವಿನಾಯಕ ಟ್ರೇಡರ್ಸ್ ರಾಜೇಶ್, ಬನ್ನೂರು ಪಿ. ಮಂಜು, ಬಿ.ಎಚ್. ಸೋಮಶೇಖರ್, ಸೀಹಳ್ಳಿ ಎಸ್.ಕೆ. ಕಾಂತರಾಜು, ಸೋಸಲೆ ಜಯಪ್ರಕಾಶ್, ತಲಕಾಡು ವಿಶ್ವನಾಥ್, ಬಿ.ಎಂ. ನಾಗೇಶ್, ಜಯಕುಮಾರ್, ಜವಾದ್, ಕಾಹಳ್ಳಿ ರಾಜು, ಕುಪ್ಪೇಗಾಲ ರಾಜೇಶ್, ಮೂಗೂರು ಕೇಶವ, ಪ್ರಭುಸ್ವಾಮಿ, ಬಾಲ ಸುಬ್ರಹ್ಮಣ್ಯಂ ಮೊದಲಾದವರು ಇದ್ದರು.
ರಸಗೊಬ್ಬರ ಮಾರಾಟಗಾರರ ಪ್ರತಿಭಟನೆ
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಾರಾಟಗಾರರು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಬಳಿ ಜಮಾವಣೆ
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.