ಸಾರಾಂಶ
ಮೃತ್ಯುಂಜಯ ದೇವಳದಲ್ಲಿ ಪುತ್ತರಿ ಹಬ್ಬವನ್ನು ವಿಜೃಂಬಣೆಯಿಂದ ಸಾಮೂಹಿಕವಾಗಿ ಗ್ರಾಮಸ್ಥರು ಆಚರಿಸಿದರು. ಗ್ರಾಮಸ್ಥರು ಕುಣಿದು ಸಂಭ್ರಮಿಸಿದರು.
ಕನ್ನಡಪ್ರಭ ವಾರ್ತೆ ಶ್ರೀಮಂಗಲ
ಇತಿಹಾಸ ಪ್ರಸಿದ್ಧ ಬಾಡಗರಗೇರಿ ಮೃತ್ಯುಂಜಯ ದೇವಸ್ಥಾನದಲ್ಲಿ ಪುತ್ತರಿ ಹಬ್ಬವನ್ನು ವಿಜೃಂಬಣೆಯಿಂದ ಸಾಮೂಹಿಕವಾಗಿ ಗ್ರಾಮಸ್ಥರು ಆಚರಿಸಿದರು.ತಕ್ಕ ಮುಖ್ಯಸ್ಥರು, ದೇವಸ್ಥಾನ ಮಂಡಳಿ ಪದ್ಧತಿಯಂತೆ ಸಾಂಪ್ರದಾಯಿಕವಾಗಿ ಕದಿರು ತೆಗೆಯುವ ಆಚರಣೆ ನಡೆಸಲಾಯಿತು.
ದೇವಸ್ಥಾನದಿಂದ ಸುಮಾರು ಎರಡು ಕಿ. ಮೀ.ದೂರದಲ್ಲಿರುವ ಪಾರಂಪರಿಕವಾಗಿ ಕದಿರು ತೆಗೆಯುವ ಮಲ್ಲೇಂಗಡ ಕುಟುಂಬಸ್ಥರ ಗದ್ದೆಗೆ ದೇವಸ್ಥಾನದಿಂದ ತಳಿಯತಕ್ಕಿ ಬೊಳಕ್, ಓಡ್ಡೋಲಗ ದೊಂದಿಗೆ ತೆರಳಿ ಕದಿರು ತೆಗೆದು ದೇವಸ್ಥಾನಕ್ಕೆ ತರಲಾಯಿತು. ಪಟಾಕಿ ಸಿಡಿಸಿ, ಓಡ್ಡೋಲಗಕ್ಕೆ ಗ್ರಾಮಸ್ಥರು ಕುಣಿದು ಸಂಭ್ರಮಿಸಿದರು. ಪುತ್ತರಿ ಪ್ರಯುಕ್ತ ವಿಶೇಷ ಖಾದ್ಯ ತಂಬಿಟ್ಟು ನೊಂದಿಗೆ ಸಾಮೂಹಿಕ ಊಟೋಪಚಾರ ನಡೆಯಿತು.ದೇವತಕ್ಕ ಆಣ್ಣೀರ ಕುಟುಂಬದ ದಾದಾ ಗಣಪತಿ, ನಾಡ್ ತಕ್ಕ ಕುಟುಂಬ ಕಾಯಪಂಡ ಕುಟುಂಬದ ಅಯ್ಯಪ್ಪ, ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಚೋನಿರ ಸುಬ್ರಮಣಿ, ಕಾರ್ಯದರ್ಶಿ ಬಲ್ಯಮೀದೇರಿರ ಸಂಪತ್, ಉಪಾಧ್ಯಕ್ಷ ಕಾಯಪಂಡ ಸ್ಟಾಲಿನ್ ಹಾಗೂ ಆಡಳಿತ ಮಂಡಳಿ ಸದಸ್ಯರು, ಮುಖ್ಯ ಅರ್ಚಕರಾದ ಗಿರೀಶ್ ಹಾಗೂ ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು.
)
;Resize=(128,128))
;Resize=(128,128))