ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲು
ಸಮಾಜದಲ್ಲಿ ಆಚರಿಸಲ್ಪಡುವ ಹಬ್ಬಗಳು ಸಾಮರಸ್ಯದ ಸಂಕೇತವಾಗಿದ್ದು ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತವೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆವನಜಾಕ್ಷಿ ರೇಣುಕೇಶ್ ಹೇಳಿದರು.
ಇಲ್ಲಿನ ನಾಲ್ಕು ನಾಡು ಆಟೋ ಚಾಲಕರ ಮತ್ತು ಮಾಲೀಕರ ಸಂಘ ಹಾಗೂ ವಾಹನ ಚಾಲಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ 33ನೇ ವರ್ಷದ ಆಯುಧ ಪೂಜಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ನಾಡಿನಾದ್ಯಂತ ಆಯುಧ ಪೂಜೆಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಇತಿಹಾಸವಿದೆ. ವಾಹನ ಚಾಲಕರ ಸಂಘದಿಂದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನೂ ಅದ್ಧೂರಿಯಾಗಿ ಆಯುಧಪೂಜೆ ಸಮಾರಂಭ ನಡೆಯಲಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನಾಲ್ಕು ನಾಡು ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಟಿ.ಪಿ ಸುಕುಮಾರ್ ಮಾತನಾಡಿ, ಸಂಘದ ವತಿಯಿಂದ ಆಯೋಜಿಸಲಾದ ಆಯುಧ ಪೂಜಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲು ಸದಸ್ಯರು, ನಾಡಿನ ಸಾರ್ವಜನಿಕರು ಸಹಕರಿಸಿದ್ದಾರೆ. ಮುಂದೆಯೂ ಇಂತಹ ಸಹಕಾರವನ್ನು ನೀಡುವಂತಾಗಲಿ ಎಂದು ಕಾರ್ಯಕ್ರಮಕ್ಕೆ ಸರ್ವ ರೀತಿಯಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.
ಕಾರ್ಯಕ್ರಮದ ಅತಿಥಿಗಳಾಗಿ ಭಾಗವಹಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್ ಕೆ.ಎ , ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್ ಎ ಹಂಸ, ಪಾರಾಣೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಾಡಿಯಂಡ ಕಟ್ಟಿ ಕುಶಾಲಪ್ಪ, ಮಾಜಿ ತಾಲೂಕು ಪಂಚಾಯಿತಿ ಸದಸ್ಯೆ ಉಮಾ ಪ್ರಭು, ಕಾಫಿ ಬೆಳಗಾರ ಕುಂಡಿಯೊಳಂಡ ರಮೇಶ್ ಮುದ್ದಯ್ಯ , ನಾಪೋಕ್ಲು ಗ್ರಾಮ ಪಂಚಾಯಿತಿ ಸದಸ್ಯ, ಬಿಲ್ಲವ ಸಮಾಜದ ಅಧ್ಯಕ್ಷ ಬಿ.ಎಂ ಪ್ರತೀಪ, ಹಿಂದು ಮಲಯಾಳಿ ಸಮಾಜದ ಅಧ್ಯಕ್ಷ ಅನಿಲ್ ಕೆ.ಕೆ, ನಾಪೋಕ್ಲು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ಸದಸ್ಯ ಕುಲ್ಲೇಟಿರ ಅರುಣ್ ಬೇಬಾ, ಚಾಲಕರ ಸಂಘದ ಮಾಜಿ ಅಧ್ಯಕ್ಷರಾದ ಬಿದ್ದಾಟಂಡ ರೋಜಿ ಚಿಣ್ಣಪ್ಪ ಮೊದಲಾದವರು ತಮ್ಮ ಅನಿಸಿಕೆ ವ್ಯಕ್ತಪಡಿಸಿ ಮಾತನಾಡಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಈ ಸಂದರ್ಭ ವೇದಿಕೆಯಲ್ಲಿ ಅತಿಥಿಗಳಾಗಿ ಗ್ಯಾರಂಟಿ ಅನುಷ್ಠಾನ ಯೋಜನೆಯ ಜಿಲ್ಲಾ ಉಪಾಧ್ಯಕ್ಷ ಬೊಳ್ಳಂಡ ಗಿರೀಶ್, ಜಯ ಕಾಫಿ ಕ್ಯೂರಿಂಗ್ ವರ್ಕ್ಸ್ನ , ಡಿ.ರೋ ಹೋಟೆಲ್ ಮಾಲೀಕ ಮಂಡಿರ ಕಿಶೋರ್ ತಮ್ಮಯ್ಯ, ಉದ್ಯಮಿ ಕಂಗಣ್ಣ ಅರುಣ್ ಮಂದಣ್ಣ, ಕರ್ನಾಟಕ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮನ್ಸೂರ್ ಆಲಿ, ಬೆನಕ ಕಾಫಿ ಟ್ರೇಡರ್ಸ್ ಮಾಲೀಕ ಚೆಯಕಪೂವಂಡ ಸತೀಶ್ ದೇವಯ್ಯ, ವಾಹನ ಚಾಲಕರ ಸಂಘದ ಮಾಜಿ ಅಧ್ಯಕ್ಷರಾದ ಬಿ.ಆರ್ ವಸಂತ, ವಾಹನ ಚಾಲಕರ ಸಂಘದ ಗೌರವಾಧ್ಯಕ್ಷ ಅಬ್ದುಲ್ ರಜಾಕ್ (ಗುಂಡು) , ಕೆ ಡಿ ಪಿ ಸದಸ್ಯ ಕಲಿಯಂಡ ಕೌಶಿ ಉಪಸ್ಥಿತರಿದ್ದರು. ಮೆರವಣಿಗೆ ಉದ್ಘಾಟನೆ :
ಇದಕ್ಕೂ ಮುನ್ನ ಹಳೆ ತಾಲೂಕಿನಲ್ಲಿ ಅಲಂಕೃತ ವಾಹನಗಳ ಮೆರವಣಿಗೆಯ ಉದ್ಘಾಟನೆ ನಡೆಯಿತು. ಕಾಫಿ ಬೆಳೆಗಾರ ಬೊಳ್ಳಚೆಟ್ಟೀರ ಸುರೇಶ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಾಹನ ಚಾಲಕ ಮತ್ತು ಮಾಲೀಕರ ಸಂಘದ ವತಿಯಿಂದ ಆಯೋಜಿಸಲಾಗಿರುವ ಕಾರ್ಯಕ್ರಮ ಜನಾಂಗದ ಸಾಮರಸ್ಯಕ್ಕೆ ಕಾರಣವಾಗಲಿ ಎಂದರು. ಬಳಿಕ ಅಲಂಕೃತ ವಾಹನಗಳ ಅದ್ದೂರಿ ಮೆರವಣಿಗೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಾಗಿ ಮಾರುಕಟ್ಟೆ ಆವರಣದಲ್ಲಿ ವಾಹನಗಳ ಸಾಮೂಹಿಕ ಆಯುಧ ಪೂಜೆ ನಡೆಯಿತು. ಅರ್ಚಕ ಹರೀಶ್ ಭಟ್ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು.ವಿವಿಧ ವಿಭಾಗಗಳಲ್ಲಿ ವಿಜೇತರಾದ ಅಲಂಕೃತ ವಾಹನಗಳ ಚಾಲಕರಿಗೆ ಗಣ್ಯರು ಟ್ರೋಫಿ ಹಾಗೂ ಬಹುಮಾನಗಳನ್ನು ವಿತರಿಸಿದರು.ವಿಜೇತರು: ದ್ವಿಚಕ್ರವಾಹನ: ಪ್ರಥಮ ಕೆಎ 03ಜೆ 0491, ದ್ವಿತೀಯ ಕೆಎ 12 ವಿ 6319, ತೃತಿಯ ಕೆಎ 12 ಎನ್ 1472, ತ್ರಿ ಚಕ್ರವಾಹನ ಪ್ರಥಮ ಕೆಎ 12 0799, ದ್ವಿತೀಯ 7978, ತೃತೀಯ ಕೆಎ 12 ಸಿ 0753,
ನಾಲ್ಕು ಚಕ್ರ: ಪ್ರಥಮ ಕೆಎ 12 ಬಿ 8973, ದ್ವಿತೀಯ ಕೆಎ 12 ಎಂ 6783, ತೃತೀಯ ಕೆಎ 12 ಸಿ 6617, ಟ್ರ್ಯಾಕ್ಟರ್ ಪ್ರಥಮ ಕೆಎ 12 ಟಿ 8515, ದ್ವಿತೀಯ ಕೆಎ 12 ಟಿ 3778, ಆರು ಚಕ್ರ ಪ್ರಥಮ ಕೆಎ 12 4874, ದ್ವಿತೀಯ ಕೆಎ 12 ಸಿ 5245, ತೃತೀಯ 5461, ಅಂಗಡಿ ಮಳಿಗೆ ಪ್ರಥಮ ಸುಗುಣ ಚಿಕನ್ ಸೆಂಟರ್, ದ್ವಿತೀಯ ಅಮರ ಜ್ಯೋತಿ ಟೈಯರ್ ಶಾಪ್, ತೃತೀಯ ಹಳೆ ತಾಲೂಕು ಹೊನ್ನು ಮುತ್ತಪ್ಪ ಟೈಯರ್ ಶಾಪ್ಉತ್ತಮ ಸೇವೆ ಸಲ್ಲಿಸಿದಂತಹ ಆಟೋ ಚಾಲಕರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು . ಉಸ್ಮಾನ್ ಸ್ವಾಗತಿಸಿದರು. ಬಿದ್ದಾಟಂಡ ಮಮತಾ ಚಿಣ್ಣಪ್ಪ ಕಾರ್ಯಕ್ರಮ ನಿರೂಪಿಸಿ ಸಂಘದ ಅಧ್ಯಕ್ಷ ಟಿ.ಪಿ ಸುಕುಮಾರ್ ವಂದಿಸಿದರು. ಬಳಿಕ ಭದ್ರಾವತಿ ಬ್ರದರ್ಸ್ ಸೌಂಡ್ಸ್ ಲೈಟಿಂಗ್ಸ್ ಮತ್ತು ಇವೆಂಟ್ಸ್ ವತಿಯಿಂದ ಕಾರ್ಯಕ್ರಮ ದಲ್ಲಿದ್ದ ಪ್ರೇಕ್ಷಕರನ್ನು ರಂಜಿಸಿತು.