ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ರೈತ ಬಾಂಧವರಿಗೆ ಉಳಿದ ಬ್ಯಾಂಕ್‌ಗಳಿಗಿಂತ ನಮ್ಮ ಬ್ಯಾಂಕ್‌ನಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ವಿತರಣೆ ಮಾಡುತ್ತಿದ್ದು, ಬ್ಯಾಂಕಿನ ಆರ್ಥಿಕ ಉನ್ನತಿ ಸಾಧಿಸುವಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಬಸವನಬಾಗೇವಾಡಿ ತಾಲೂಕು ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಹೇಳಿದರು.
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ರೈತ ಬಾಂಧವರಿಗೆ ಉಳಿದ ಬ್ಯಾಂಕ್‌ಗಳಿಗಿಂತ ನಮ್ಮ ಬ್ಯಾಂಕ್‌ನಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ವಿತರಣೆ ಮಾಡುತ್ತಿದ್ದು, ಬ್ಯಾಂಕಿನ ಆರ್ಥಿಕ ಉನ್ನತಿ ಸಾಧಿಸುವಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಬಸವನಬಾಗೇವಾಡಿ ತಾಲೂಕು ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಹೇಳಿದರು.ಪಟ್ಟಣದ ಬ್ಯಾಂಕ್‌ನ ಆವರಣದಲ್ಲಿ ಮಂಗಳವಾರ ಜರುಗಿದ ೬೨ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಬ್ಯಾಂಕ್‌ನಿಂದ ಸಾಲ ಪಡೆದ ರೈತರು ಸಕಾಲಕ್ಕೆ ಸಾಲ ಮರುಪಾವತಿ ಮಾಡಿದರೆ ಬ್ಯಾಂಕ್ ಆರ್ಥಿಕ ಅಭಿವೃದ್ಧಿಯಾಗುವ ಜೊತೆಗೆ ರೈತರ ಅಭಿವೃದ್ಧಿ ಆಗುವುದರಲ್ಲಿ ಸಂದೇಹವಿಲ್ಲ. ಎಲ್ಲ ರೈತ ಬಾಂಧವರು ತಮ್ಮ ಏಳ್ಗೆಗಾಗಿ ಬ್ಯಾಂಕ್- ಬ್ಯಾಂಕಿನ ಏಳ್ಗೆಗಾಗಿ ತಾವು ಎಂಬ ಸಹಕಾರಾಮೃತ ತತ್ವ ಅರಿತುಕೊಂಡು ಮುನ್ನಡೆಯಬೇಕೆಂದರು.ಪ್ರಸಕ್ತ ವರ್ಷ ಬ್ಯಾಂಕ್ ಶೇ.81.14 ರಷ್ಟು ಸಾಲ ವಸೂಲಾತಿ ಮೂಲಕ ₹101.41 ಲಕ್ಷ ಲಾಭ ಹೊಂದಿದೆ. ಬ್ಯಾಂಕ್ ಹೆಚ್ಚಿನ ವಸೂಲಾತಿ ಗುರಿ ಸಾಧಿಸುವ ಮೂಲಕ ಜಿಲ್ಲೆಗೆ ಮೂರನೇ ಸ್ಥಾನ ಗಳಿಸಿದೆ. ಎಲ್ಲರ ಸಹಕಾರದಿಂದ ಬ್ಯಾಂಕ್ ಅಭಿವೃದ್ಧಿಯಾಗುತ್ತಿದೆ ಎಂದು ಶ್ಲಾಘಿಸಿದರು.ವಿಪಿಕೆಪಿಎಸ್ ಬ್ಯಾಂಕ್ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಮಾತನಾಡಿ, ರೈತರು ಕೃಷಿ ಚಟುವಟಿಕೆಯೊಂದಿಗೆ ಕುರಿ, ಎಮ್ಮೆ ಸಾಕಾಣಿಕೆ, ಹೈನುಗಾರಿಕೆಯಂತಹ ಕೃಷಿಯೇತರ ಚಟುವಟಿಕೆ ಮಾಡಬೇಕು. ಸರ್ಕಾರದಿಂದ ಹೈನುಗಾರಿಕೆಗೆ ವಿಶೇಷವಾಗಿ ಸಾಲ ಸೌಲಭ್ಯ ಕಲ್ಪಿಸುತ್ತದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು. ಬ್ಯಾಂಕ್ ಉಪಾಧ್ಯಕ್ಷ ಬಿ.ಎಸ್.ಪೂಜಾರಿ, ಬ್ಯಾಂಕ್ ನಿರ್ದೇಶಕರಾದ ಎನ್.ಪಿ.ಬಿಸನಾಳ, ವ್ಹಿ.ಎಸ್.ನಾಡಗೌಡ, ಆರ್.ವೈ.ಬಾವೂರ, ಎಂ.ಬಿ.ಪಾಟೀಲ, ಎಸ್.ಎಸ್.ಎಮ್ಮಿ, ಯು.ಜಿ.ವಿವೇಕಿ, ಎ.ಎ.ಬಿರಾದಾರ, ಜಿ.ಬಿ.ಕೊಲ್ಹಾರ, ಆರ್.ಬಿ.ಪಾಟೀಲ, ಮುಖಂಡರಾದ ಲೋಕನಾಥ ಅಗರವಾಲ, ಬಾಲಚಂದ್ರ ಮುಂಜಾನೆ ಇದ್ದರು. ಬ್ಯಾಂಕ್ ನಿರ್ದೇಶಕ ರವಿ ರಾಠೋಡ ಸ್ವಾಗತಿಸಿದರು. ಬ್ಯಾಂಕ್ ವ್ಯವಸ್ಥಾಪಕ ಎಸ್.ಬಿ.ಮಂತ್ರಿ ನಿರೂಪಿಸಿ ವಾರ್ಷಿಕ ವರದಿ ವಾಚಿಸಿದರು. ಹಣಮಂತ ಜಾಲಗೇರಿ ವಂದಿಸಿದರು.