ಸಾರಾಂಶ
ಹಾವೇರಿ: ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ೭೪ನೇ ಜನ್ಮದಿನವನ್ನು ಕೇಕ್ ಕತ್ತರಿಸಿ, ಸಿಹಿ ವಿತರಿಸಿ ಅನ್ನಸಂತರ್ಪಣೆಯ ಮೂಲಕ ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಂಜುಂಡೇಶ ಕಳ್ಳೇರ ಮಾತನಾಡಿ, ಭಾರತದ ರಾಜಕೀಯ ಇತಿಹಾಸದಲ್ಲಿ ನರೇಂದ್ರ ಮೋದಿಜಿ ಅವರಂತಹ ವ್ಯಕ್ತಿತ್ವವನ್ನು ಹೊಂದಿರುವಂತಹ ಪ್ರಧಾನಿ ಭಾರತಕ್ಕೆ ಸಿಕ್ಕಿರಲಿಲ್ಲ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪ್ರಧಾನಿಗಳಾದಂತವರು ದೇಶದ ಹಿತವನ್ನು ಮರೆತು ಸ್ವಯಂ ಹಿತವನ್ನು ಕಾಪಾಡಿಕೊಂಡರೇ ಹೊರತು ದೇಶವನ್ನು ಭಯಮುಕ್ತ ರಾಷ್ಟ್ರವನ್ನಾಗಿ ನಿರ್ಮಿಸುವಲ್ಲಿ ವಿಫಲರಾದರು. ಅಷ್ಟೇ ಅಲ್ಲದೆ ಬಹಳಷ್ಟು ಸಮಯದಲ್ಲಿ ಸಂವಿಧಾನವನ್ನ ತಮಗೆ ತಿಳಿದಂತೆ ತಿದ್ದುಪಡಿ ಮಾಡಿ ಸಂವಿಧಾನವನ್ನು ಅಭದ್ರ ಗೊಳಿಸುವಂತಹ ಕಾರ್ಯ ಮಾಡಿದ್ದರು. ಆದರೆ ನರೇಂದ್ರ ಮೋದಿಜಿ ಭಾರತದ ಸಂವಿಧಾನವನ್ನು ಪರಮೋಚ್ಚ ಸ್ಥಾನದಲ್ಲಿ ಗೌರವಿಸುತ್ತಿದ್ದಾರೆ. ಅಲ್ಲದೆ ಸಂವಿಧಾನವನ್ನು ಮತ್ತಷ್ಟು ಭದ್ರಗೊಳಿಸುತ್ತಿದ್ದಾರೆ ಎಂದರು. ನರೇಂದ್ರ ಮೋದಿಜಿ ಅವರ ನಾಯಕತ್ವದಲ್ಲಿ ಭಾರತ ಇಂದು ವಿಶ್ವ ಮಟ್ಟದಲ್ಲಿ ಹೆಚ್ಚಿನ ಗೌರವಕ್ಕೆ ಪಾತ್ರವಾಗುತ್ತಿದೆ. ನರೇಂದ್ರ ಮೋದಿಜಿ ಅವರ ಜನ್ಮದಿನದ ಈ ಸಂದರ್ಭದಲ್ಲಿ ನಾವೆಲ್ಲರೂ ಮುಂಬರುವ ದಿನದಲ್ಲಿ ದೇಶದ ಅಭಿವೃದ್ಧಿಗೆ ಹಾಗೂ ಪಕ್ಷದ ಸಂಘಟನೆಗೆ ಹೆಚ್ಚಿನ ಸಮಯವನ್ನ ಕೊಟ್ಟು ಬಿಜೆಪಿಯನ್ನು ಸದೃಢಗೊಳಿಸೋಣ ಎಂದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಸಂತೋಷ ಆಲದಕಟ್ಟಿ ಮಾತನಾಡಿ, ನರೇಂದ್ರ ಮೋದಿಜಿ ಅವರು ವಿಶ್ವ ಕಂಡಂತಹ ಅಪ್ರತಿಮ ವ್ಯಕ್ತಿತ್ವದ ಮೇರು ನಾಯಕ. ನರೇಂದ್ರ ಮೋದಿಜಿ ಅವರು ಅವಿರತ ಕೆಲಸದ ಮೂಲಕ ದೇಶದ ಪ್ರಗತಿಯನ್ನ ದಿನದಿಂದ ದಿನಕ್ಕೆ ಇಮ್ಮಡಿಗೊಳಿಸಿದ್ದಾರೆ. ಭಾರತವನ್ನು ಇಂದು ಭಯೋತ್ಪಾದಕತೆಯ ಮುಕ್ತ ರಾಷ್ಟ್ರವನ್ನಾಗಿ ಮಾಡುವಲ್ಲಿ ನರೇಂದ್ರ ಮೋದಿಜಿ ಅವರ ಪಾತ್ರ ಪ್ರಮುಖವಾಗಿದೆ ಎಂದರು. ಹಾವೇರಿ ವಿಧಾನಸಭಾ ಕ್ಷೇತ್ರದ ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣನವರ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಸುರೇಶ ಹೊಸಮನಿ, ನಗರ ಮಂಡಲ ಅಧ್ಯಕ್ಷ ಗಿರೀಶ ತುಪ್ಪದ, ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ, ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಗುಡ್ಡಪ್ಪ ಭರಡಿ, ಪ್ರಕಾಶ ಉಜನಿಕೊಪ್ಪ, ಅಭಿಷೇಕ ಗುಡಗೂರ, ಲಲಿತಾ ಗುಂಡೇನಹಳ್ಳಿ, ವಿದ್ಯಾ ಶೆಟ್ಟಿ, ರಮೇಶ ಪಾಲನಕರ, ಶಿವಯೋಗಿ ಹುಲಿಕಂತಿಮಠ, ರುದ್ರೇಶ ಚಿನ್ನಣ್ಣನವರ, ಪ್ರಭು ಹಿಟ್ನಳ್ಳಿ, ನಾಗರಾಜ ಹಾರಿಗೋಲ, ಜಗದೀಶ ಕನವಳ್ಳಿ, ಆನಂದ ಕಲಾಲ, ನೀಲಪ್ಪ ಚಾವಡಿ, ಮಂಜುನಾಥ ಹುಲಗೂರ, ಈರಣ್ಣ ಹೊನ್ನಳ್ಳಿ, ಚನ್ನಮ್ಮ ಬ್ಯಾಗಿ, ರೋಹಿಣಿ ಪಾಟೀಲ, ಚನ್ನಮ್ಮ ಪಾಟೀಲ, ಲತಾ ಬಡ್ನಿಮಠ, ಪುಷ್ಪಲತಾ ಚಕ್ರಸಾಲಿ, ವಿಜಯಲಕ್ಷ್ಮಿ ಹೆಗಡೆ, ಭಾಗ್ಯಶ್ರೀ ಮೋರೆ, ವಿಜಯಕುಮಾರ ಚಿನ್ನಿಕಟ್ಟಿ, ಕಿರಣ ಕೋಣನವರ, ರವಿ ಅಂಗಡಿ, ಫಕ್ಕಿರೇಶ ಹಾವನೂರ, ನೀಖಿಲ ಡೊಗ್ಗಳ್ಳಿ, ಬಸವರಾಜ ಡೊಂಕಣ್ಣನವರ ಇತರರು ಇದ್ದರು.