- ಹೊನ್ನಾಳಿ, ನ್ಯಾಮತಿ ತಾಲೂಕು ಫಲಾನುಭವಿಗಳಿಗೆ ಮೀನುಗಾರಿಕೆ ಪರಿಕರಗಳ ವಿತರಣೆ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ಮೀನುಗಾರರು ರಾಜ್ಯ ಸರ್ಕಾರದಿಂದ ಬರುವ ಎಲ್ಲ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.ಪಟ್ಟಣದ ದೇವನಾಯ್ಕನಹಳ್ಳಿ ಬಳಿಯ ಮೀನುಗಾರಿಕೆ ಇಲಾಖೆ ವತಿಯಿಂದ ಶುಕ್ರವಾರ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳ ಮೀನುಗಾರರ ಅರ್ಹ ಫಲಾನುಭವಿಗಳಿಗೆ ತೆಪ್ಪ (ಹರಿಗೋಲು) ಮತ್ತು ಮೀನಿನ ಬಲೆಗಳು ಸೇರಿದಂತೆ ಇತರೆ ಪರಿಕರಗಳನ್ನು ವಿತರಿಸಿ ಅವರು ಮಾತನಾಡಿದರು.
ಮೀನುಗಾರಿಕೆಯ ರಾಜ್ಯ ವಲಯ ಯೋಜನೆಯಡಿ 15 ಫಲಾನುಭವಿಗಳಿಗೆ ತೆಪ್ಪ, ಮೀನಿನ ಬಲೆ ಹಾಗೂ ಇತರೆ ಪರಿಕರಗಳು ಬಂದಿವೆ. ಜಿಲ್ಲಾ ಪಂಚಾಯಿತಿ ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿ ಜನಾಂಗಕ್ಕೆ 20, ಪರಿಶಿಷ್ಟ ಪಂಗಡ ಜನರಿಗೆ 15 ಸೇರಿದಂತೆ ಒಟ್ಟು 50 ಫಲಾನುಭವಿಗಳಿಗೆ ತಲಾ ₹10 ಸಾವಿರ ಮೌಲ್ಯದ ತೆಪ್ಪ, ಮೀನಿನ ಬಲೆಗಳು, ಇತರೆ ಪರಿಕರಗಳನ್ನನೀಡಲಾಗಿದೆ. ಈ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ ಎಂದರು.
ತಾಲೂಕಿನಲ್ಲಿ ಒಂದು ಕೆರೆ 48 ಹೆಕ್ಟೇರ್ ವ್ಯಾಪ್ತಿಯ ಒಟ್ಟು 16 ಕೆರೆಗಳಿವೆ. ಇವುಗಳು ಸೇರಿದಂತೆ ಗ್ರಾಮ ಪಂಚಾಯಿತಿಯಲ್ಲಿನ ಕೆಲ ಗ್ರಾಮಗಳಲ್ಲಿ ಸಣ್ಣಕೆರೆಗಳಲ್ಲಿ ಮೀನು ಗುತ್ತಿಗೆದಾರರು ಮೀನುಗಳನ್ನು ಸಾಕಾಣಿಕೆ ಮಾಡುತ್ತಿದ್ದಾರೆ ಎಂದರು.
ಜಿಲ್ಲಾ ಮೀನುಗಾರಿಕೆ ಇಲಾಖೆ ಉಪನಿದೇರ್ಶಕ ಡಿ.ಅಣ್ಣಪ್ಪ ಸ್ವಾಮಿ ಮಾತನಾಡಿ, ಅವಳಿ ತಾಲೂಕಿನಲ್ಲಿ ಚಾಲ್ತಿಇರುವ ಕೆರೆಗಳಿಗೆ ಮೀನುಗಾರಿಕೆ ಇಲಾಖೆಯಿಂದ ನರ್ಸರಿ ಮೂಲಕ ಮೀನುಮರಿಗಳನ್ನು ಸೂಳೆಕೆರೆ, ಬಿ.ಆರ್. ಪ್ರಾಜಕ್ಟ್ ಶಿವಮೊಗ್ಗ ಮತ್ತು ಭದ್ರಾವತಿಯ ಖಾಸಗಿ ಮೀನು ನರ್ಸರಿಗಳಿಂದ ಕೆರೆ ಟೆಂಡರ್‌ದಾರರಿಗೆ ಇಲಾಖೆ ವತಿಯಿಂದ ಗರಿಷ್ಠ ₹5 ಸಾವಿರ ಸಹಾಯಧನದಂತೆ ಕೆರೆಗಳಲ್ಲಿ ಮೀನು ಸಾಕಲು ಮೀನುಮರಿಗಳನ್ನು ನೀಡಲಾಗುವುದು ಎಂದರು.ತಾಲೂಕು ಕೇಂದ್ರದಲ್ಲಿ ಸುಸಜ್ಜಿತವಾದ ಮೀನು ಮಾರುಕಟ್ಟೆ ಸ್ಥಾಪಿಸಲು ತಾಲೂಕು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಸುಮಾ ಅವರಿಗೆ ಪುರಸಭೆ ಮುಖ್ಯಾಧಿಕಾರಿಗೆ ಇಲಾಖೆಯಿಂದ ಈ ಕುರಿತು ಪತ್ರ ಸಲ್ಲಿಸುವಂತೆ ಸೂಚನೆ ನೀಡಿದರು.
ಮೀನುಗಾರಿಕೆ ಇಲಾಖೆ ಸಹಾಯಕ ನಿದೇರ್ಶಕಿ ಸುಮಾ, ಸಹಾಯಕ ಗಿರೀಶ್, ಬಸವರಾಜ, ಸವಳಂಗ ಗ್ರಾಮದ ಮಾರಿಕಾಂಬ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ಕಾಳಪ್ಪ, ಕಾರ್ಯದರ್ಶಿ ಪ್ರಸಾದಕುಮಾರ, ನಿರ್ದೇಶಕರಾದ ಪ್ರಕಾಶ, ಕಾಳಪ್ಪ, ಮಲ್ಲಿಗೇನಹಳ್ಳಿ ಗಣೇಶ್, ಮಹಿಳಾ ಸದಸ್ಯರಾದ ರಶ್ಮಿ, ಮಮತಾ ಹಾಗೂ ಹರಿಗೋಲು, ಮೀನು ಬಲೆ ಸೌಲಭ್ಯ ಪಡೆದ ಫಲಾನುಭವಿಗಳು ಇದ್ದರು.- - -
-15ಎಚ್.ಎಲ್.ಐ3:ಹೊನ್ನಾಳಿಯಲ್ಲಿ ಮೀನುಗಾರಿ ಇಲಾಖೆ ವತಿಯಿಂದ ಫಲಾನುಭವಿಗಳಿಗೆ ಶುಕ್ರವಾರ ತೆಪ್ಪ, ಮೀನಿನ ಬಲೆಗಳನ್ನು ಶಾಸಕ ಡಿ.ಜಿ.ಶಾಂತನಗೌಡ ವಿತರಿಸಿದರು. ಇಲಾಖೆ ಅಧಿಕಾರಿಗಳು, ಫಲಾನುಭವಿಗಳು ಇದ್ದರು.