ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ನಮ್ಮ ಬಳಿ ಇರುವ ಮೊಬೈಲ್‌ಗಳ ಪ್ರದರ್ಶನ ಮಾಡಲು ಹೋಗಿ ಜೀವ ಕಳೆದುಕೊಳ್ಳುತ್ತಿರುವ ಪರಿಸ್ಥಿತಿ ಎದುರಾಗುತ್ತಿರುವುದು ವಿಷಾದನೀಯ ವಿಚಾರ ಎಂದು ಕುಶಾಲನಗರ ಗ್ರಾಮಾಂತರ ವೃತ್ತ ನಿರೀಕ್ಷ ದಿನೇಶ್ ಕುಮಾರ್ ಹೇಳಿದರು. ಶನಿವಾರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ‘ಹೆಲ್ಮೆಟ್ ಧರಿಸಿ ಜೀವ ಉಳಿಸಿ’ ವಿಷಯದ ಮೇಲೆ ಪ್ರಾತ್ಯಕ್ಷಿಕೆ ಸಹಿತ ಸಂವಾದ ನಡೆಸಿದ ಅವರು ದ್ವಿಚಕ್ರ ವಾಹನಗಳಲ್ಲಿ ಹೆಲ್ಮೆಟ್ ಧರಿಸಿದರೆ ಎಷ್ಟು ಸರಕ್ಷತೆ ಮತ್ತು ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಾಲನೆ ಜೀವಕ್ಕೆ ಅಪಾಯಕ ಎಂಬುದನ್ನು ಅವರು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ಅದೇ ರೀತಿ ಕಾರು ಮತ್ತು ಇತರ ದೊಡ್ಡ ವಾಹನಗಳಲ್ಲಿ ಸೀಟ್ ಬೆಲ್ಟ್ ಧರಿಸದೆ ವಾಹನ ಚಲಾಯಿಸುವುದರಿಂದ ಅಪಘಾತ ಗಳು ಸಂಭವಿಸಿದಾಗ ಆಗುವ ಮಾರಣಾಂತಿಕ ಗಾಯಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದ ಅವರು, ಮಕ್ಕಳು ಸಂಚಾರಿ ನಿಯಮಗಳನ್ನು ಪಾಲಿಸಬೇಕು. ವಾಹನ ಚಾಲನೆ ಸಂದರ್ಭ ಚಾಲನಾ ಪರವಾನಗಿ ಸಹಿತ ವಾಹನದ ಎಲ್ಲ ಅಗತ್ಯ ದಾಖಲಾತಿಗಳನ್ನು ಹೊಂದಿದ್ದರೆ ದಂಡ ಮತ್ತು ಇತರ ಕಾನೂನು ಕ್ರಮಗಳಿಂದ ಪಾರಾಗಬಹುದು ಎಂದು ಹೇಳಿದರು.ಈ ಸಂದರ್ಭ ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಮೋಹನ್‌ರಾಜ್, ಸಿಬ್ಬಂದಿ ಹಾಗೂ ಕಾಲೇಜು ಉಪನ್ಯಾಸಕರು ಇದ್ದರು.