ಚನ್ನರಾಯಪಟ್ಟಣ: ಮನೆಗೊಂದು ಗಿಡ ಊರಿಗೊಂದು ವನ ಎಂದಂತೆ ಪ್ರತಿಯೊಬ್ಬರೂ ಕೂಡ ಈ ಕಾರ್ಯವನ್ನು ಮಾಡಿದರೆ ಮನುಷ್ಯನಿಗೆ ಉತ್ತಮ ಗಾಳಿ ಬೆಳಕು ದೊರೆಯುತ್ತದೆ ಎಂದು ಜನನಿ ಸೇವಾ ಫೌಂಡೇಶನ್ ಅಧ್ಯಕ್ಷ ಮಂಜು ಕುರುವಂಕ ತಿಳಿಸಿದ್ದಾರೆ.
ಪಟ್ಟಣದ ಹೌಸಿಂಗ್ ಬೋರ್ಡ್ ನ ಸರ್ಕಾರಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಮಕ್ಕಳಿಗೆ ಉಚಿತ ಸಸ್ಯಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಮನೆಗೊಂದು ಗಿಡ ಊರಿಗೊಂದು ವನ ಎಂಬಂತೆ ಪ್ರತಿಯೊಬ್ಬರೂ ಕೂಡ ಈ ಪದ್ಧತಿಯನ್ನು ಪಾಲಿಸಿದರೆ ಮನುಷ್ಯನಿಗೆ ಉತ್ತಮ ಗಾಳಿ ಬೆಳಕು ದೊರೆಯುತ್ತದೆ. ಇಲ್ಲದೆ ಹೋದ ಪಕ್ಷದಲ್ಲಿ ಮುಂದೊಂದು ದಿನ ಉತ್ತಮ ಗಾಳಿಗಾಗಿ ಪರದಾಡು ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದರು. ಇದೇ ಸಂದರ್ಭದಲ್ಲಿ ಮುಖ್ಯ ಉಪಾಧ್ಯಾಯರಾದ ಚಿಕ್ಕೇಗೌಡ, ಸಹ ಶಿಕ್ಷಕರಾದ ದೇವರಾಜು, ಸುನಂದಾ, ಜನನಿ ಸೇವಾ ಫೌಂಡೇಶನ್ ಉಪಾಧ್ಯಕ್ಷರಾದ ರುದ್ರೇಶ್, ಬಾಲಚಂದ್ರ, ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಕಾರ್ಯದರ್ಶಿ ರಮೇಶ್, ಖಜಾಂಚಿ ವಿನೋದ್, ಎಸ್ ಟಿ ಎಂ ಸಿ ಸದಸ್ಯರುಗಳು ಹಾಜರಿದ್ದರು.ಮನೆಗೊಂದು ಗಿಡ ಊರಿಗೊಂದು ವನ ತತ್ವ ಪಾಲಿಸಿ
ಮನೆಗೊಂದು ಗಿಡ ಊರಿಗೊಂದು ವನ ಎಂದಂತೆ ಪ್ರತಿಯೊಬ್ಬರೂ ಕೂಡ ಈ ಕಾರ್ಯವನ್ನು ಮಾಡಿದರೆ ಮನುಷ್ಯನಿಗೆ ಉತ್ತಮ ಗಾಳಿ ಬೆಳಕು ದೊರೆಯುತ್ತದೆ ಎಂದು ಜನನಿ ಸೇವಾ ಫೌಂಡೇಶನ್ ಅಧ್ಯಕ್ಷ ಮಂಜು ಕುರುವಂಕ ತಿಳಿಸಿದ್ದಾರೆ. ಪ್ರತಿಯೊಬ್ಬರೂ ಕೂಡ ಈ ಪದ್ಧತಿಯನ್ನು ಪಾಲಿಸಿದರೆ ಮನುಷ್ಯನಿಗೆ ಉತ್ತಮ ಗಾಳಿ ಬೆಳಕು ದೊರೆಯುತ್ತದೆ. ಇಲ್ಲದೆ ಹೋದ ಪಕ್ಷದಲ್ಲಿ ಮುಂದೊಂದು ದಿನ ಉತ್ತಮ ಗಾಳಿಗಾಗಿ ಪರದಾಡು ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.