ಸಾರಾಂಶ
ಸಿದ್ದಾಪುರ: ಇಂದಿನ ಆಹಾರ ಪದ್ಧತಿಯಲ್ಲಿ ಮನುಷ್ಯನು ಆರೋಗ್ಯಯುತ ಜೀವನ ನಡೆಸಲು ವ್ಯಾಯಾಮ ಉತ್ತಮ ಮಾರ್ಗವಾಗಿದೆ. ಅದರಲ್ಲಿ ಸೈಕಲ್ ಸವಾರಿ ಅತ್ಯುತ್ತಮ ವ್ಯಾಯಾಮಗಳಲ್ಲೊಂದಾಗಿದೆ. ಪ್ರತಿಯೊಬ್ಬರು ಸೈಕಲ್ ಸವಾರಿ ಮಾಡುವುದನ್ನು ರೂಢಿ ಮಾಡಿಕೊಂಡು ಆರೋಗ್ಯಯುತ ಜೀವನ ನಡೆಸುವಂತೆ ಬೇಡ್ಕಣಿ ಗ್ರಾಪಂ ಸದಸ್ಯ ಕೃಷ್ಣಮೂರ್ತಿ ಮಡಿವಾಳ ಹೇಳಿದರು.
ಅವರು ಕಾನಳ್ಳಿಯ ಚೌಡೇಶ್ವರಿದೇವಿ ಕಾಣದ ಆವರಣದಲ್ಲಿ ವಿಶ್ವ ಸೈಕಲ್ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದರು.ಪರಮೇಶ್ವರಯ್ಯ ಕಾನಳ್ಳಿಮಠ ಮಾತನಾಡಿ, ನೆಮ್ಮದಿಯ ಜೀವನ ನಡೆಸಲು ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಹೃದಯ ಉತ್ತಮ ವಾಗಿರಲು, ಬೊಜ್ಜು ಕರಗಿಸಲು ಹಾಗೂ ಸದೃಢ ದೇಹಕ್ಕಾಗಿ ಸೈಕಲ್ ತಿಳಿಯುವುದು ಅವಶ್ಯವಾಗಿದೆ. ಸೈಕಲ್ ತುಳಿಯುವವರು ಅರೋಗ್ಯಯುತವಾಗಿರುವುದನ್ನು ನೋಡುತ್ತೇವೆ. ಇಂದಿನ ಜನತೆ ಸೈಕಲ್ ತುಳಿಯುವುದನ್ನು ರೂಢಿಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಹಲವಾರು ವರ್ಷಗಳಿಂದ ಸೈಕಲ್ ಸವಾರರಾಗಿರುವ ಈಶ್ವರ ನಾಯ್ಕ ಅವರನ್ನು ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಸುರೇಶ ಮಡಿವಾಳ, ರವಿ ಕಾನಳ್ಳಿ, ರಾಮಣ್ಣ ಕಾನಳ್ಳಿ, ಕೃಷ್ಣ ಕಾನಳ್ಳಿ, ಲಕ್ಷ್ಮಣ ಕಾನಳ್ಳಿ, ದೇವೇಂದ್ರ ಕಾನಳ್ಳಿ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.
ಗೋಪಾಲ ಕಾನಳ್ಳಿ ಸ್ವಾಗತಿಸಿ, ನಿರೂಪಿಸಿದರು.ಸಿದ್ದಾಪುರ ತಾಲೂಕಿನ ಕಾನಳ್ಳಿಯಲ್ಲಿ ವಿಶ್ವ ಸೈಕಲ್ ದಿನಾಚರಣೆ ಆಚರಿಸಲಾಯಿತು.