ನಗರದ ರೋಟರಿ ಸಿಲ್ಕ್ ಸಿಟಿ ವತಿಯಿಂದ ಡಿ. ೧೯, ೨೦, ೨೧ ರಂದು ನಗರದಲ್ಲಿ ಆಹಾರ ಮೇಳ ಮತ್ತು ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ ಎಂದು ರೋಟರಿ ವಲಯ ೨೦೯ರ ಸಹಾಯಕ ಗೌವರ್ನರ್‌ ದೊಡ್ಡರಾಯಪೇಟೆ ಗಿರೀಶ್ ಹೇಳಿದರು.

ಸಾಮಾಜಿಕ ಸೇವೆಗೆ ಆದ್ಯತೆ: ಸಹಾಯಕ ಗೌವರ್ನರ್‌ ದೊಡ್ಡರಾಯಪೇಟೆ ಗಿರೀಶ್

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ನಗರದ ರೋಟರಿ ಸಿಲ್ಕ್ ಸಿಟಿ ವತಿಯಿಂದ ಡಿ. ೧೯, ೨೦, ೨೧ ರಂದು ನಗರದಲ್ಲಿ ಆಹಾರ ಮೇಳ ಮತ್ತು ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ ಎಂದು ರೋಟರಿ ವಲಯ ೨೦೯ರ ಸಹಾಯಕ ಗೌವರ್ನರ್‌ ದೊಡ್ಡರಾಯಪೇಟೆ ಗಿರೀಶ್ ಹೇಳಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ. ೧೯ ರಂದು ಬೆಳಗ್ಗೆ ೧೦ ಗಂಟೆಗೆ ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಶ್ರೀ ಸಿದ್ದಮಲ್ಲೇಶ್ವರ ವಿರಕ್ತ ಮಠದ ಶ್ರೀ ಸಿದ್ದಬಸವರಾಜಸ್ವಾಮಿಜಿಗಳ ಅನುಭವ ಮಂಟಪದಲ್ಲಿ ವಸ್ತುಪ್ರದರ್ಶನವನ್ನು ವಿರಕ್ತಮಠದ ಚೆನ್ನಬಸವಸ್ವಾಮೀಜಿ ಉದ್ಘಾಟನೆ ಮಾಡಲಿದ್ದು, ಜಿಲ್ಲಾಧಿಕಾರಿ ಶಿಲ್ಪಾನಾಗ್, ರೋಟರಿಯ ಜಿಲ್ಲಾ ಗೌವರ್ನರ್‌ ರಾಮಕೃಷ್ಣ ಉಪಸ್ಥಿತರಿರುವರು, ರೋ. ನಾಗಾರ್ಜುನ್, ರೊ. ಚಂದ್ರು, ರೋಟರಿ ಮತ್ತು ರೋಟರಿ ಸಿಲ್ಕ್‌ಸಿಟಿ ಪದಾಧಿಕಾರಿಗಳು ಉಪಸ್ಥಿತರಿರುವರು ಎಂದರು.

ಬೆಳಗ್ಗೆ ೧೦ ರಿಂದ ರಾತ್ರಿ ೯ ಗಂಟೆಯವರೆಗೆ ವಸ್ತುಪ್ರದರ್ಶನ ಇರಲಿದೆ. ಅಲ್ಲದೇ ಸಂಜೆ ೪ರಿಂದ ರಾತ್ರಿ ೯ ಗಂಟೆಯವರೆಗೆ ಆಹಾರ ಮೇಳ ನಡೆಯಲಿದೆ. ಮೂರು ದಿನಗಳ ಕಾಲ ಸಂಜೆ ೪ರಿಂದ ರಾತ್ರಿ ೯ ಗಂಟೆಯವರೆಗೆ ಸಾಂಸ್ಕೃತಿಕ ವೈಭವ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಡಿ. ೧೯ರಂದು ಖ್ಯಾತ ಹಿನ್ನಲೆ ಗಾಯಕಿ ಸೈಮ ಪ್ರಶಸ್ತಿ ವಿಜೇತೆ, ಜೀ ಹಿಂದಿ ಸರಿಗಮದ ಖ್ಯಾತಿಯ ಸಿಂಚನ್ ದೀಕ್ಷಿತ್ ಅವರಿಂದ ಸುಗಮ ಸಂಗೀತ, ಅಂತರರಾಷ್ಟ್ರೀಯ ಖ್ಯಾತಿಯ ಕೊಳಲು ವಾದಕ ಮತ್ತು ಸಂಗೀತ ನಿರ್ದೇಶಕ ನೀತು ವಿನಾದ್ ಅವರಿದಂ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ ಎಂದರು.

ಡಿ. ೨೦ ಅಂತರರಾಷ್ಟ್ರೀಯ ಖ್ಯಾತಿಯ ಸ್ಯಾಕ್ಸೋಪೋನ್ ಕಲಾವಿದೆ ಅಂಜಲಿ ಶ್ಯಾನಬೋಗ್, ಮೈಸೂರಿನ ಕಥೆಗಳು ಖ್ಯಾತಿಯ ಪ್ರಖ್ಯಾತ ಇತಿಹಾಸ ಪ್ರಚಾರಕ ಧರ್ಮೇಂದರ್ ಕುಮಾರ್ ಅವರಿಂದ ಕಾರ್ಯಕ್ರಮ ನಡೆಯಲಿದೆ ಎಂದರು.

ದಿನಾಂಕ ೨೧ರಂದು ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ಮಿಸ್ಟರ್ ಮ್ಯಾಜಿಕ್ ಅವರಿಂದ ಜಾದೂ, ಜನಪ್ರಿಯ ಪೃಥ್ಬಿ ಪಿ. ಗೌಡ ಅವರಿಂದ ಸಮೂಹ ನೃತ್ಯ ಮತ್ತು ಮನರಂಜನೆ ನಡೆಯಲಿದೆ ಎಂದರು.

ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ಶಮಿತ್ ಕುಮಾರ್‌ , ಮಾಜಿ ಅಧ್ಯಕ್ಷ ಡಿ. ಪಿ. ವಿಶ್ವಾಸ್‌ ಮಾತನಾಡಿ, ನಗರದ ಜನತೆಗೆ ಒಂದು ಹೊಸ ರೀತಿಯ ಮನೋರಂಜನೆ ನೀಡಬೇಕು, ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು.

ಇದರಲ್ಲಿ ಬರುವ ಆದಾಯವನ್ನು, ಮೂಲ ಸೌಕರ್ಯ ವಂಚಿತ ಸರ್ಕಾರಿ ಬಾಲಕಿಯರ ವಸತಿ ಶಾಲೆಗಳಿಗೆ ಮೂಲಭೂತ ಸೌಕರ್ಯಕ್ಕಾಗಿ ಕೊಡಲಾಗುವುದು, ಸಾಮಾಜಿಕ ಸೇವೆಗೆ ಆದ್ಯತೆ ನೀಡಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಸಂತೋಷ್, ಶರತ್, ಮುರುಗೇಂದ್ರಸ್ವಾಮಿ, ಅಜಯ್ ಹೆಗ್ಗವಾಡಿಪುರ ಇದ್ದರು.

೧೭ಸಿಎಚ್‌ಎನ್೧

ಚಾಮರಾಜನಗರೆದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ರೋಟರಿ ವಲಯ ೨೦೯ರ ಸಹಾಯಕ ಗೌವರ್ನರ್‌ ದೊಡ್ಡರಾಯಪೇಟೆ ಗಿರೀಶ್ ಮಾತನಾಡಿದರು ಇದ್ದಾರೆ. ಅಧ್ಯಕ್ಷ ಶಮಿತ್ ಕುಮಾರ್‌, ಮಾಜಿ ಅಧ್ಯಕ್ಷ ಡಿ. ಪಿ. ವಿಶ್ವಾಸ್, ಕಾರ್ಯದರ್ಶಿ ಸಂತೋಷ್, ಶರತ್, ಮುರುಗೇಂದ್ರಸ್ವಾಮಿ, ಅಜಯ್ ಇದ್ದಾರೆ.------------