ಹೆದ್ದಾರಿ ಪಕ್ಕ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಒತ್ತಾಯ

| Published : Dec 14 2023, 01:30 AM IST

ಸಾರಾಂಶ

ತಿಂಗಳಲ್ಲಿ ಕನಿಷ್ಠ ನಾಲ್ಕರಿಂದ ಐದು ಅಪಘಾತಗಳು ಸಂಭವಿಸುತ್ತಲ್ಲೇ ಇರುತ್ತವೆ. ಇದರಲ್ಲಿ ಹೆಚ್ಚಾಗಿ ಬೈಕ್ ಮತ್ತು ಕಾರುಗಳ ಅಪಘಾತಗಳ ಸಂಖ್ಯೆ ಹೆಚ್ಚಾಗಿ ಬೆಳಕಿಗೆ ಬಂದಿವೆ. ತಕ್ಷಣವೇ ರಾಷ್ಟ್ರೀಯ ಹೆದ್ದಾರಿ 50 ರಸ್ತೆಯ ಪಕ್ಕದಲ್ಲಿ ಸರ್ವೀಸ್‌ ರಸ್ತೆಯನ್ನು ನಿರ್ಮಾಣ ಮಾಡಿ ಮನುಷ್ಯರ ಜೀವ ಉಳಿಸಬೇಕೆಂದು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಮರಿಯಮ್ಮನಹಳ್ಳಿ

ರಾಷ್ಟ್ರೀಯ ಹೆದ್ದಾರಿ 50 ರಸ್ತೆಗೆ ಡಣಾಪುರ ಗ್ರಾಮದಿಂದ ತಿಮ್ಮಲಾಪುರದ ಟೋಲ್‌ ಗೇಟ್‌ವರೆಗೆ ಸರ್ವಿಸ್ ರಸ್ತೆ ನಿರ್ಮಿಸುವಂತೆ ಒತ್ತಾಯಿಸಿ ಕರ್ನಾಟಕ ಚಾಲಕರ ಒಕ್ಕೂಟದ ದೇವಲಾಪುರ ಮತ್ತು ನಂದಿಬಂಡಿ ಗ್ರಾಮ ಘಟಕದ ಕಾರ್ಯಕರ್ತರು ತಿಮ್ಮಲಾಪುರ ಟೋಲ್ ಗೇಟಿನ ಮುಖ್ಯಸ್ಥರಿಗೆ ಮಂಗಳವಾರ ಮನವಿಪತ್ರ ಸಲ್ಲಿಸಿದರು.

ರಾಷ್ಟ್ರೀಯ ಹೆದ್ದಾರಿ 50 ರಸ್ತೆಯ ಪಕ್ಕದಲ್ಲಿ ಡಣಾಪುರ ಗ್ರಾಮದಿಂದ ಪೋತಲಕಟ್ಟೆ ಕ್ರಾಸ್‌ವರೆಗೂ ಸರ್ವಿಸ್ ರಸ್ತೆ ನಿರ್ಮಾಣ ಮಾಡದೇ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಸರ್ವಿಸ್ ರಸ್ತೆ ಇಲ್ಲದೇ ಇರುವುದರಿಂದ ಒಂದು ವರ್ಷದಲ್ಲಿ ಮರಿಯಮ್ಮನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 45ಕ್ಕೂ ಹೆಚ್ಚು ಜನ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ತಿಂಗಳಲ್ಲಿ ಕನಿಷ್ಠ ನಾಲ್ಕರಿಂದ ಐದು ಅಪಘಾತಗಳು ಸಂಭವಿಸುತ್ತಲ್ಲೇ ಇರುತ್ತವೆ. ಇದರಲ್ಲಿ ಹೆಚ್ಚಾಗಿ ಬೈಕ್ ಮತ್ತು ಕಾರುಗಳ ಅಪಘಾತಗಳ ಸಂಖ್ಯೆ ಹೆಚ್ಚಾಗಿ ಬೆಳಕಿಗೆ ಬಂದಿವೆ. ತಕ್ಷಣವೇ ರಾಷ್ಟ್ರೀಯ ಹೆದ್ದಾರಿ 50 ರಸ್ತೆಯ ಪಕ್ಕದಲ್ಲಿ ಸರ್ವೀಸ್‌ ರಸ್ತೆಯನ್ನು ನಿರ್ಮಾಣ ಮಾಡಿ ಮನುಷ್ಯರ ಜೀವ ಉಳಿಸಬೇಕೆಂದು ಆಗ್ರಹಿಸಿದರು.

ಕರ್ನಾಟಕ ಚಾಲಕರ ಒಕ್ಕೂಟದ ದೇವಲಾಪುರ ಮತ್ತು ನಂದಿಬಂಡಿ ಗ್ರಾಮ ಘಟಕದ ಅಧ್ಯಕ್ಷ ಕೆಂಚಪ್ಪ ಉಪ್ಪಾರ, ಗೌರವ ಅಧ್ಯಕ್ಷ ಪ್ರಕಾರ್ ಯು., ಉಪಾಧ್ಯಕ್ಷ ಎಂ. ನಾಗರಾಜ, ಸಹ ಉಪಾಧ್ಯಕ್ಷ ಶಿವಪುತ್ರ, ಕಾರ್ಯದರ್ಶಿ ಸಿ.ಯು. ಮಂಜುನಾಥ, ಸದಸ್ಯರಾದ ಬಿಂದಪ್ಪ, ತಿಮ್ಮೇಶ್, ಸಂತೋಷ್, ಪಿ. ಆನಂದ, ಮಂಜುನಾಧ, ವಿಶ್ವನಾಥ, ಡಿ. ಉಮ್ಮೇಶ್, ಎಚ್‌. ಶೇಖರ್, ಬಿಂದೇಶ ಸೇರಿದಂತೆ ದೇವಲಾಪುರ ಗ್ರಾಮದ ಮುಖಂಡರು ಇದ್ದರು.