ಕನ್ನಡಪ್ರಭ ವಾರ್ತೆ ಹುಣಸಗಿ
ಹೊಸ ಪಿಂಚಣಿ ಯೋಜನೆ (ಎನ್.ಪಿ.ಎಸ್) ಯೋಜನೆಯನ್ನು ರದ್ದು ಪಡಿಸುತ್ತಾರೆಂದು ನೌಕರರು ನಿರೀಕ್ಷೆಯಲ್ಲಿರುವ ಸಂದರ್ಭದಲ್ಲಿ ಸರ್ಕಾರ ಮೂರನೇ ಸಮಿತಿ ರಚಿಸಿ, ನೌಕರರಿಗೆ ಆಘಾತ ತಂದಿದೆ ಎಂದು ಸರ್ಕಾರಿ ಎನ್.ಪಿ.ಎಸ್ ನೌಕರರ ಸಂಘದ ತಾಲೂಕು ಅಧ್ಯಕ್ಷರಾದ ಮಹ್ಮದ್ ರಫಿ ಮಳ್ಳಿಕರ್ ದೂರಿದರು.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್ ನೌಕರರ ಸಂಘವು ಕಳೆದ 10 ವರ್ಷಗಳಿಂದ ಹಳೆಯ ಪಿಂಚಣಿ ಯೋಜನೆಯನ್ನು ಮರು ಸ್ಥಾಪಿಸಬೇಕು ಎಂದು ಸರಕಾರದ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತಿದೆ ಎಂದರು.ಅ.10 2022ರಿಂದ ಒಂದು ತಿಂಗಳ ಕಾಲ ಒ.ಪಿ.ಎಸ್ ಸಂಕಲ್ಪ ಯಾತ್ರೆ ಕೂಡ ಕೈಗೊಳ್ಳಲಾಗಿತ್ತು. ಈ ಒಂದು ಯೋಜನೆ ಜಾರಿಗಾಗಿ 14 ದಿನಗಳ ಕಾಲ ಬೆಂಗಳೂರಿನ ಪ್ರೀಡ್ಂ ಪಾರ್ಕಿನಲ್ಲಿ ಅಹೋರಾತ್ರಿ ಧರಣಿ ಕೂಡ ನಡೆಸಲಾಗಿತ್ತು. ಮೂರು ತಿಂಗಳ ಕಾಲ ವೊಟ್ ಫಾರ್ ಒ.ಪಿ.ಎಸ್ ಅಭಿಯಾನ ಕೂಡ ಮಾಡಲಾಗಿತ್ತು. ಈ ಎಲ್ಲಾ ಹೋರಾಟದಿಂದ ಕಾಂಗ್ರೆಸ್ ಸರ್ಕಾರವು ತನ್ನ ಪ್ರಣಾಳಿಕೆಯಲ್ಲಿ ಈ ಒಂದು ಎನ್.ಪಿ.ಎಸ್ ಯೋಜನೆಯನ್ನು ರದ್ದು ಪಡಿಸುವ ಭರವಸೆ ನೀಡಿತ್ತು.ರಾಜ್ಯದ ಮುಖ್ಯಮಂತ್ರಿ ಹಾಗೂ ಉಪ ಮುಖಮಂತ್ರಿಗಳು ಸೇರಿ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ, ಎಲ್ಲಾ ವಿಷಯಗಳ ಕುರಿತು ಸುಧೀರ್ಘವಾಗಿ ಚರ್ಚಿಸಿ ಸಭೆಯಲ್ಲಿ ತಮ್ಮ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗೆ ಬದ್ಧರಾಗಿರುವುದಾಗಿ ಹಾಗೂ ಈ ವಿಷಯಗಳನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.ರಾಜ್ಯ ಸರ್ಕಾರವು ಎನ್.ಪಿ.ಎಸ್ ಯೋಜನೆಯನ್ನು ರದ್ದುಗೊಳಿಸುವ ವಿಷಯವನ್ನು ಸಚಿವ ಸಂಪುಟದ ಮುಂದೆ ತಂದು ರದ್ದು ಪಡಿಸುತ್ತದೆ ಎಂದು ರಾಜ್ಯ ನೌಕರರು ನಿರೀಕ್ಷೆಯಲ್ಲಿದ್ದರು. ಸರ್ಕಾರ ಮೂರನೇ ಸಮಿತಿ ರಚಿಸಿ ಈ ಯೋಜನೆಯನ್ನು ರದ್ದು ಪಡಿಸಲು ವಿಳಂಬ ಮಾಡುತ್ತಿರುವುದರಿಂದ ನಿರಾಶೆ ಉಂಟುಮಾಡಿದೆ ಎಂದು ಬೇಸರ ಹೊರಹಾಕಿದರು.ಅಕ್ಕ-ಪಕ್ಕದ ರಾಜ್ಯಗಳಾದ ರಾಜಸ್ಥಾನ, ಛತ್ತಿಸಗಢ ಜಾರ್ಖಂಡ್ ಮತ್ತು ಹಿಮಾಚಲ ಪ್ರದೇಶದ ರಾಜ್ಯಗಳಲ್ಲಿ ಯಾವುದೇ ಸಮಿತಿಯನ್ನು ರಚಿಸದೆ ಸರ್ಕಾರವು ಈ ಎನ್.ಪಿ.ಎಸ್ ಯೋಜನೆಯನ್ನು ರದ್ದು ಪಡಿಸಿದೆ. ಕರ್ನಾಟಕ ಸರ್ಕಾರವು ಎನ್.ಪಿ.ಎಸ್ ನೌಕರರ ಬಗ್ಗೆ ಗಮನಹರಿಸಿ ರದ್ದು ಪಡಿಸುತ್ತಿಲ್ಲ. ಈ ಒಂದು ಕಾರಣಕ್ಕಾಗಿ ಮತ್ತೆ ಎನ್.ಪಿ.ಎಸ್ ನೌಕರರ ಸಂಘವು ನಿರ್ಣಾಯಕ ಹೋರಾಟ ಮಾಡಲು ಸಜ್ಜಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.3ನೇ ಸಮಿತಿ ರಚನೆ ನೌಕರರಿಗೆ ಆಘಾತ ತಂದಿದೆ: ಮಳ್ಳಿಕರ್
ಹೊಸ ಪಿಂಚಣಿ ಯೋಜನೆ (ಎನ್.ಪಿ.ಎಸ್) ಯೋಜನೆಯನ್ನು ರದ್ದು ಪಡಿಸುತ್ತಾರೆಂದು ನೌಕರರು ನಿರೀಕ್ಷೆಯಲ್ಲಿರುವ ಸಂದರ್ಭದಲ್ಲಿ ಸರ್ಕಾರ ಮೂರನೇ ಸಮಿತಿ ರಚಿಸಿ, ನೌಕರರಿಗೆ ಆಘಾತ ತಂದಿದೆ ಎಂದು ಸರ್ಕಾರಿ ಎನ್.ಪಿ.ಎಸ್ ನೌಕರರ ಸಂಘದ ತಾಲೂಕು ಅಧ್ಯಕ್ಷರಾದ ಮಹ್ಮದ್ ರಫಿ ಮಳ್ಳಿಕರ್ ದೂರಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.