ಸಾರಾಂಶ
ಉಚಿತವಾಗಿ ಕಣ್ಣಿನ ಆಸ್ಪತ್ರೆ ಪ್ರಾರಂಭಿಸಿರುವದು ಶ್ಲಾಘನೀಯವಾಗಿದೆ
ಗಂಗಾವತಿ: ನಗರದಲ್ಲಿ ಲಯನ್ಸ್ ಸಂಸ್ಥೆಯಿಂದ ಉಚಿತ ಕಣ್ಣಿನ ಆಸ್ಪತ್ರೆ ಪ್ರಾರಂಭಿಸಿರುವುದು ಬಡವರಿಗೆ ಆಶಾಕಿರಣವಾಗಿದೆ ಎಂದು ಮಾಜಿ ಸಚಿವ ಮಲ್ಲಿಕಾರ್ಜನ ನಾಗಪ್ಪ ಹೇಳಿದರು.
ಇಲ್ಲಿಯ ಲಯನ್ಲ್ ಕ್ಲಬ್ ಹಾಗೂ ಲಯನ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ಕಣ್ಣಿನ ಆಸ್ಪತ್ರೆ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಲಯನ್ಸ್ ಕ್ಲಬ್ ಹಲವಾರು ವರ್ಷಗಳಿಂದ ಸಮಾಜಮುಖಿಯಾಗಿ ಕೆಲಸ ಮಾಡುತ್ತಾ ಬಂದಿದ್ದು. ಜತೆಗೆ ಈಗ ಉಚಿತವಾಗಿ ಕಣ್ಣಿನ ಆಸ್ಪತ್ರೆ ಪ್ರಾರಂಭಿಸಿರುವದು ಶ್ಲಾಘನೀಯವಾಗಿದೆ. ಇಂತಹ ಕಾರ್ಯ ಮಾಡುತ್ತಾ ಬಂದಿರುವ ಈ ಸಂಸ್ಥೆಗೆ ತಾವು ಯಾವಾಗಲು ಸಹಕಾರ ನೀಡುವದಾಗಿ ಭರವಸೆ ನೀಡಿದರು.ಮಾಜಿ ಸಂಸದ ಶಿವರಾಮಗೌಡ ಮಾತನಾಡಿ, ಲಯನ್ಸ್ ಸಂಸ್ಥೆ ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಯಾಗಿದೆ, ಇದರಲ್ಲಿ ಕೆಲಸ ಮಾಡುವ ಪದಾಧಿಕಾರಿಗಳು ಉನ್ನತ ಹುದ್ದೆಯಲ್ಲಿ ಇದ್ದುಕೊಂಡು ಸಮಾಜ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾರೆ ಎಂದರು.
ಲಯನ್ಸ್ ಕಣ್ಣಿನ ಆಸ್ಪತ್ರೆ ಸಮಿತಿ ಅಧ್ಯಕ್ಷ ಟಿ. ರಾಮಕೃಷ್ಣ ಲಯನ್ಸ್ ಸಂಸ್ಥೆ ಬೆಳೆದು ಬಂದಿದ್ದು ಮತ್ತು ಕಣ್ಣಿನ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಸಹಕಾರ ನೀಡಿದವರನ್ನು ಶ್ಲಾಘಿಸಿದರು.ಈ ವೇಳೆ ಮಾಜಿ ಸಂಸದ ಎಚ್.ಜಿ. ರಾಮುಲು, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಸಂಸ್ಥೆಯ ಜಿಲ್ಲಾ ಗವರ್ನರ್ ಲಯನ್ಸ್ ಜೈಮೂಲ ನಾಯಕ, ಡಾ.ಜಿ. ಚಂದ್ರಪ್ಪ, ಡಾ. ಸೋಮರಾಜ್, ಗ್ರಾಪಂ ಅಧ್ಯಕ್ಷೆ ಸುನಿತಾ, ಲಯನ್ ಮೋಹನಕುಮಾರ, ಮನೋಜ್ ಮಾನಿಕ್, ಮಾಜಿ ಶಾಸಕ ಜಿ. ವೀರಪ್ಪ, ಭೂಧಾನಿ ಜಿ. ಹಂಪಣ್ಣ, ಗಂಗಾಧರ, ಡಾ.ಎಎಸ್ ಎನ್ ರಾಜು, ಲಯನ್ಸ್ ಕ್ಲಬ್ ಅಧ್ಯಕ್ಷ ಶಿವಕುಮಾರ ಮಾಲೀಪಾಟೀಲ್, ಡಾ. ಮಲ್ಲನಗೌಡ, ಅಭಿಷೇಕ ಡಿ.ಎಂ, ಶಿವಪ್ಪಗಾಳಿ, ಡಾ. ಚಿನಿವಾಲರ್, ಜಂಬುನಾಥಗೌಡ, ಬಿ.ರಾಮರಾವ್ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.