ಸಾರಾಂಶ
ಬಹುತೇಕ ಯುವಕರು ಭಾಗಿಯಾಗಿ ಸರಿಯಾದ ಮಾರ್ಗಕ್ಕೆ ಹೋಗದೆ ತಮ್ಮ ಭವಿಷ್ಯ ಕೆಡಿಸಿಕೊಳ್ಳುತ್ತಿದ್ದಾರೆ.
ಗಂಗಾವತಿ: ರಾಜ್ಯದಲ್ಲಿ ಕಲುಷಿತ ವಾತಾವರಣ ಸೃಷ್ಟಿಯಾಗಿದ್ದು, ಈ ನಿಟ್ಟಿನಲ್ಲಿ ಯುವಕರು ಸನ್ಮಾರ್ಗದಲ್ಲಿ ಮುನ್ನಡೆಯಬೇಕು ಎಂದು ಉಡುಪಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಹೇಳಿದರು.
ನಗರದ ಸತ್ಯನಾರಾಯಣ ಪೇಟೆಯಲ್ಲಿರುವ ವಿಜಯಧ್ವಜ ವಿದ್ಯಾಪೀಠದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು.ಇತ್ತೀಚಿನ ರಾಜ್ಯದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದು. ಇದರಲ್ಲಿ ಬಹುತೇಕ ಯುವಕರು ಭಾಗಿಯಾಗಿ ಸರಿಯಾದ ಮಾರ್ಗಕ್ಕೆ ಹೋಗದೆ ತಮ್ಮ ಭವಿಷ್ಯ ಕೆಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಮಕ್ಕಳ ಮೇಲೆ ಅವಲಂಭಿತರಾಗಿರುವ ಪಾಲಕರು ಬೀದಿ ಪಾಲಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತ ಪಡಿಸಿದರು.
ನಗರ ಸೇರಿದಂತೆ ರಾಜ್ಯದಲ್ಲಿ ಶಾಂತಿಯ ವಾತವರಣ ಸೃಷ್ಠಿಯಾಗಬೇಕು, ಕಾನೂನು ಸುವ್ಯವಸ್ಥೆ ಬಲ ಪಡಿಸಬೇಕಾಗಿದೆ, ಪಾಲಕರಿಗೆ ಭಯದ ವಾತಾವರಣ ಇಲ್ಲದಂತಾಗಬೇಕು ಎಂದರು.ಈ ಸಂದರ್ಭದಲ್ಲಿ ಮಾಜಿ ಶಾಸಕ ಪರಣ್ಣ ಮುನವಳ್ಳಿ, ನಗರಸಭಾ ಸದಸ್ಯ ವಾಸುದೇವ ನವಲಿ, ಮಹಾಲಿಂಗಪ್ಪ ಬನ್ನಿಕೊಪ್ಪ, ಹನುಮೇಶಚಾರ, ವೆಂಕಟೇಶಚಾರ, ದರೋಜಿ ರಂಗಣ್ಣ ಶ್ರೇಷ್ಟಿ, ವಾದಿರಾಜಚಾರ ಕಲ್ಮಂಗಿ, ಮೇಗೂರು ರಾಘವೇಂದ್ರ ಸೇರಿದಂತೆ ಪ್ರಮುಖರು ಇದ್ದರು.