ಸಾರಾಂಶ
- ಜೀನಹಳ್ಳಿ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ
- - -ನ್ಯಾಮತಿ: ಆರೋಗ್ಯವೇ ಭಾಗ್ಯ ಎಂಬಂತೆ ಗ್ರಾಮೀಣ ಜನರ ಬಾಗಿಲಿಗೆ ಉಚಿತ ಆರೋಗ್ಯ ಸೇವೆ ನೀಡುತ್ತಿರುವುದು ಉತ್ತಮ ಸಂಗತಿಯಾಗಿದೆ. ಉಚಿತ ಆರೋಗ್ಯ ತಪಾಸಣೆ ಶಿಬಿರಗಳು ಗ್ರಾಮೀಣರಿಗೆ ವರದಾನವಾಗಿವೆ ಎಂದು ಗ್ರಾಮದ ಹಿರಿಯ ಮುಖಂಡ ಆರ್.ಎಸ್.ಪಾಟೀಲ್ ಹೇಳಿದರು.
ತಾಲೂಕಿನ ಜೀನಹಳ್ಳಿಯಲ್ಲಿ ಭಾನುವಾರ ದಾವಣಗೆರೆ ಜಿಲ್ಲಾ ನೊಳಂಬ ವೀರಶೈವ ಲಿಂಗಾಯತ ಸಂಘ ಹಾಗೂ ಶ್ರೀ ನಂದಿಗುಡಿ ಸಂಸ್ಥಾನ ಕೃಪಾ ಘೋಷಿತ ವೀರಶೈವ ವಿದ್ಯಾವರ್ಧಕ ಸಂಘ, ಜೀನಹಳ್ಳಿ ಗ್ರಾಮಸ್ಥರ ಸಹಯೋಗದಲ್ಲಿ ದಾವಣಗೆರೆ ಲತಾ ನರ್ಸಿಂಗ್ ಹೋಮ್ ಸಿಬ್ಬಂದಿ ಸಹಕಾರದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.ಗ್ರಾಮೀಣ ಭಾಗದಲ್ಲಿ ನುರಿತ ವೈದ್ಯರ ತಂಡದೊಂದಿಗೆ ಜನರಿರುವ ಸ್ಥಳಗಳಲ್ಲಿಯೇ ಉಚಿತ ಆರೋಗ್ಯ ತಪಾಸಣೆ ಶಿಬಿರಗಳ ಆಯೋಜಿಸಿ, ಜನಸೇವೆ ನೀಡುತ್ತಿರುವುದು ಶ್ಲಾಘನೀಯ ಸೇವೆ. ಇಂತಹ ಶಿಬಿರದ ಸೇವೆಯ ಲಾಭಗಳನ್ನು ಸಾರ್ವಜನಿಕರು ಪಡೆಯಬೇಕು ಎಂದು ಹೇಳಿದರು.
ಸಣ್ಣಕ್ಕಿ ಬಸವನಗೌಡ ಮಾತನಾಡಿ, ಖ್ಯಾತ ವೈದ್ಯರಿಂದ ನಡೆಯುವಂತಹ ಉಚಿತ ಆರೋಗ್ಯ ತಪಾಸಣೆ ಶಿಬಿರಗಳು ಗ್ರಾಮೀಣ ಜನಸಮುದಾಯಕ್ಕೆ ಪೂರಕವಾಗಿವೆ. ಇದರ ಸದುಪಯೋಗ ಪಡೆಯಲು ಎಲ್ಲರೂ ಮುಂದಾಗಬೇಕು ಎಂದರು.ದಾವಣಗೆರೆ ಲತಾ ನರ್ಸಿಂಗ್ ಹೋಮ್ ವೈದ್ಯ ಹಾಗೂ ಜಿಲ್ಲಾ ಸಂಘದ ಕಾರ್ಯದರ್ಶಿ ಡಾ. ಈ.ವಿರೂಪಾಕ್ಷಪ್ಪ ಮಾತನಾಡಿ. ಜಿಲ್ಲಾ ನೊಳಂಬ ವೀರಶೈವ ಲಿಂಗಾಯತ ಸಂಘವು ಖ್ಯಾತ ವೈದ್ಯರ ತಂಡದೊಂದಿಗೆ ಗ್ರಾಮೀಣ ಭಾಗಗಳಲ್ಲಿ ಬಡವರಿಗೆ ದುರ್ಬಲರಿಗೆ ಶಿಬಿರಗಳ ಮೂಲಕ ಉಚಿತ ಔಷಧಿ ನೀಡಿ, ಆರೋಗ್ಯ ಸೇವೆ ಮಾಡಲಾಗುವುದು ಎಂದರು.
ಅಧ್ಯಕ್ಷತೆಯನ್ನು ದಾವಣಗೆರೆ ವಕೀಲ ಶಾಂತರಾಜ್ ಕೆ.ಜಿ. ವಹಿಸಿದ್ದರು. ಜಿಲ್ಲಾ ನೊಳಂಬ ವೀರಶೈವ ಲಿಂಗಾಯತ ಸಂಘ ಅಧ್ಯಕ್ಷ ಡಾ.ಅಶೋಕ್‌ಕುಮಾರ್ ಪಾಲೇದ್, ಕುಕ್ಕುವಾಡದ ರುದ್ರಗೌಡ, ಜೀನಹಳ್ಳಿ ನಿವೃತ್ತ ಶಿಕ್ಷಕ ನಾಗೇಂದ್ರಪ್ಪ, ಜಿ.ಷಣ್ಮುಖಪ್ಪ, ಚನ್ನೇಶ್, ಯೋಗೇಶಪ್ಪ ಮಾಸ್ತರ್, ಪಧಾದಿಕಾರಿಗಳಾದ ಭುವನೇಶ್ವರ, ಡಾ.ದಿನೇಶ್‌ಕುಮಾರ್ ಜಿಗಳಿ, ಮೌನೇಶಪ್ಪ, ಡಾ.ಚನ್ನಪ್ಪಗೌಡ, ಡಾ. ರಾಕೇಶ್ ಬಿ.ಸಿ., ಡಾ.ಮಂಜುನಾಥ ಪಾಟೀಲ್, ಶ್ರೀರಾಮನಗೌಡ ಬಿ.ಕೆ., ಶಿಕ್ಷಕಿ ಜ್ಯೋತಿ ದೇವರಮನೆ, ಮಲ್ಲಿಕಾರ್ಜುನ ಹೆಗ್ಗೋಳಿ, ದಾವಣಗೆರೆಯ 10ಕ್ಕೂ ಹೆಚ್ಚು ವೈದ್ಯರು, ಲತಾ ನರ್ಸಿಂಗ್ ಹೋಂ ಸಿಬ್ಬಂದಿ ಇದ್ದರು.ಶಿಬಿರದಲ್ಲಿ 250ಕ್ಕೂ ಹೆಚ್ಚು ಜನರಿಗೆ ಬಿ.ಪಿ., ಶುಗರ್ ಮುಂತಾದ ಪರೀಕ್ಷೆಗಳನ್ನು ಮಾಡಿ ಸ್ಥಳದಲ್ಲಿಯೇ ಉಚಿತ ಮಾತ್ರೆಗಳನ್ನು ನೀಡಲಾಯಿತು.
- - -(-ಫೋಟೊ):