ವಿವಿಧ ಧರ್ಮಗಳ ಮುಖಂಡರ ಸೌಹಾರ್ದ ಸಭೆ

| Published : Jun 17 2024, 01:40 AM IST

ಸಾರಾಂಶ

ಕಡೂರು, ಜುಲೈ 1 ರಿಂದ ದಂಡ ಮತ್ತು ಶಿಕ್ಷೆ ದುಪ್ಪಟ್ಟಾಗುವ ಸಾಧ್ಯತೆಯಿದ್ದು ಜನರು ವಾಹನಗಳ ದಾಖಲಾತಿಯನ್ನು ಸರಿಯಾಗಿ ಇಟ್ಟುಕೊಳ್ಳಬೇಕು ಎಂದು ಬೀರೂರು ವೃತ್ತ ನಿರೀಕ್ಷಕ ಶ್ರೀಕಾಂತ್ ಹೇಳಿದರು.

ಕನ್ನಡಪ್ರಭ ವಾರ್ತೆ, ಕಡೂರು

ಜುಲೈ 1 ರಿಂದ ದಂಡ ಮತ್ತು ಶಿಕ್ಷೆ ದುಪ್ಪಟ್ಟಾಗುವ ಸಾಧ್ಯತೆಯಿದ್ದು ಜನರು ವಾಹನಗಳ ದಾಖಲಾತಿಯನ್ನು ಸರಿಯಾಗಿ ಇಟ್ಟುಕೊಳ್ಳಬೇಕು ಎಂದು ಬೀರೂರು ವೃತ್ತ ನಿರೀಕ್ಷಕ ಶ್ರೀಕಾಂತ್ ಹೇಳಿದರು.ಯಗಟಿ ಪೊಲೀಸ್ ಠಾಣೆಯಲ್ಲಿ ಕಾನೂನು ಅರಿವು ಮತ್ತು ವಿವಿಧ ಧರ್ಮಗಳ ಮುಖಂಡರ ಸೌಹಾರ್ದ ಸಭೆ ನಡೆಸಿ ಮಾತನಾಡಿದರು. ಜುಲೈ 1ರಿಂದ ಐಪಿಸಿ ಬದಲಾಗಿ ಭಾರತೀಯ ನ್ಯಾಯ ಸಂಹಿತ ಜಾರಿಗೆ ಬರಲಿದೆ.ಇದರಲ್ಲಿ ಹೊಸದಾಗಿ ಕೆಲವು ಕಾನೂನುಗಳನ್ನು ಜಾರಿಗೆ ತರಲಾಗಿದೆ. ಇದರ ಪ್ರಕಾರ ದಂಡ ಮತ್ತು ಶಿಕ್ಷೆ ಪ್ರಮಾಣ ದುಪ್ಪಟ್ಟಾಗಲಿದೆ. ಆದುದರಿಂದ ವಾಹನ ಚಾಲಕರು ದ್ವಿಚಕ್ರ ವಾಹನ ಚಾಲನೆ ಸಂದರ್ಭ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಆರ್.ಸಿ, ಚಾಲನಾ ಪರವಾನಗಿ, ವಿಮೆ ಮುಂತಾದ ದಾಖಲೆಗಳನ್ನು ಅವಧಿ ಮುಗಿಯುವ ಮುನ್ನ ನವೀಕರಿಸಿಗೊಳ್ಳಬೇಕು. ಅಪ್ರಾಪ್ತರಿಗೆ ವಾಹನ ನೀಡಬಾರದು ಎಂದರು. ದೇವಾಲಯಗಳಲ್ಲಿನ ಕಳವು ಪ್ರಕರಣ ನಿಯಂತ್ರಿಸಲು ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಮಹಿಳೆಯರು ಹೆಚ್ಚು ಆಭರಣಗಳನ್ನು ಧರಿಸಿ ಸಾರ್ವಜನಿಕವಾಗಿ ಒಂಟಿಯಾಗಿ ಓಡಾಡುವುದು ಸುರಕ್ಷಿತವಲ್ಲ. ಊರಿನಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಎಲ್ಲರೂ ಸಹರಿಸಬೇಕು. ಬಕ್ರೀದ್ ಹಬ್ಬವನ್ನು ಮುಸಲ್ಮಾನ ಬಾಂಧವರು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಬೇಕು. ಇತರೆ ಧರ್ಮ ದವರು ವಿನಾ ಕಾರಣ ತಂಟೆ ತಕರಾರು ತೆಗೆಯುವುದು ಕಾನೂನು ರೀತಿ ಅಪರಾಧ ಎಂದು ತಿಳಿಸಿದರು.

ಸಬ್ ಇನ್ಸ್ ಪೆಕ್ಟರ್ ಮೋಹನ್,ಎಎಸ್ಐ.ಕುಮಾರ ನಾಯ್ಕ,ಮುಖಂಡರಾದ ಕೆ.ವಿ.ಜಯಣ್ಣ,ಯಗಟಿಪುರ ಪ್ರಸನ್ನ, ಪಿ.ಎಂ.ರವಿಪ್ರಕಾಶ್, ಗರ್ಜೆ ನಟರಾಜ್,ಸುರೇಶ್,ರಂಗಪ್ಪ ಮುಂತಾದವರು ಇದ್ದರು.14ಕೆಕೆಡಿಯು1. ಯಗಟಿ ಪೊಲೀಸ್ ಠಾಣೆಯಲ್ಲಿ ನಡೆದ ಕಾನೂನು ಅರಿವು ಮತ್ತು ಸೌಹಾರ್ದ ಸಭೆಯಲ್ಲಿ ಬೀರೂರು ವೃತ್ತ ನಿರೀಕ್ಷಕ ಶ್ರೀಕಾಂತ್ ಮಾತನಾಡಿದರು.