ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕು ಕೃಷಿಕ ಸಮಾಜದ ನೂತನ ಅಧ್ಯಕ್ಷರಾಗಿ ನಾಟನಹಳ್ಳಿ ಎನ್.ಎಸ್.ಗಂಗಾಧರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಪಟ್ಟಣದ ಕೃಷಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ನಾಟನಹಳ್ಳಿ ಗಂಗಾಧರ್, ಉಪಾಧ್ಯಕ್ಷರಾಗಿ ಎಸ್.ಎನ್.ಪ್ರಭಾಕರ್, ಪ್ರಧಾನ ಕಾರ್ಯದರ್ಶಿಯಾಗಿ ಆರ್.ಕೆ.ಜಗದೀಶ್, ಖಜಾಂಚಿಯಾಗಿ ಬಿ.ಸಿ.ಸ್ವಾಮೀಗೌಡ, ಜಿಲ್ಲಾ ಪ್ರತಿನಿಧಿಯಾಗಿ ಹೆತ್ತಗೋನಹಳ್ಳಿ ಎಚ್.ಜೆ.ನಾರಾಯಣಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ, ತಾಲೂಕು ಸಹಾಯಕ ಕೃಷಿ ನಿರ್ದೇಶಕರಾದ ಎಚ್.ಜೆ.ಸಂತೋಷ ಕುಮಾರ್ ಪ್ರಕಟಿಸಿದರು.
ನಿರ್ದೇಶಕರಾದ ಕೆ.ಬಿ.ಈಶ್ವರಪ್ರಸಾದ್, ಎನ್.ಮರಿಸ್ವಾಮೀಗೌಡ, ರಾಮಸ್ವಾಮಿ, ಮುಖಂಡರಾದ ಕೆ.ಎಸ್.ಬಸವೇಗೌಡ, ಎನ್.ಕೆ.ವಿಜಯಕುಮಾರ್, ಎನ್.ಜೆ.ಹೇಮಂತ್ ಕುಮಾರ್(ತಮ್ಮಣ್ಣ), ಬೋರೇಗೌಡ, ಜಿಲ್ಲಾ ಕರವೇ ಅಧ್ಯಕ್ಷ ಡಿ.ಎಸ್.ವೇಣು, ತಾಲೂಕು ಅಧ್ಯಕ್ಷ ಟೆಂಪೋ ಶ್ರೀನಿವಾಸಗೌಡ, ಪುರಸಭಾ ಸದಸ್ಯ ಪ್ರಮೋದ್, ಅಗ್ರಹಾರಬಾಚಹಳ್ಳಿ ಸ್ವಾಮಿ, ಅಮ್ಮು ಶ್ರೀಧರ್, ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸದಸ್ಯರಾದ ಎ.ಎನ್.ಜಾನಕೀರಾಂ, ಬಿ.ಎಲ್.ತೇಜಸ್ವಿಕಿರಣ್, ಎಸ್.ಆರ್.ನವೀನ್ ಕುಮಾರ್, ಎ.ಆರ್.ರಘು, ಎ.ಎಸ್.ರಮೇಶ್, ಸಿ.ಎಸ್.ರಾಮಕೃಷ್ಣೇಗೌಡ ಸೇರಿದಂತೆ ಹಲವು ಗಣ್ಯರು ಅಭಿನಂದಿಸಿದರು.ಬಿಜಿಎಸ್ ಎಂಜಿನಿಯರಿಂಗ್ ಕಾಲೇಜು ತಂಡಕ್ಕೆ ಪ್ರಥಮ ಸ್ಥಾನನಾಗಮಂಗಲ:
ತುಮಕೂರಿನಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಅಂತರ ಕಾಲೇಜು ಪುರುಷರ ವಿಭಾಗದ ವಾಲಿಬಾಲ್ ಪಂದ್ಯಾವಳಿಯಲ್ಲಿ ತಾಲೂಕಿನ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಬಿಜಿಎಸ್ ಎಂಜಿನಿಯರಿಂಗ್ ಕಾಲೇಜು ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ.ತುಮಕೂರಿನ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಡಿ.26ಮತ್ತು 27ರಂದು ಆಯೋಜಿಸಿದ್ದ ಪಂದ್ಯಾವಳಿಯಲ್ಲಿ ವಿವಿಧ ಎಂಜಿನಿಯರಿಂಗ್ ಕಾಲೇಜುಗಳ 22 ಪುರುಷ ತಂಡಗಳು ಭಾಗವಹಿಸಿದ್ದವು. ಈ ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಆದಿಚುಂಚನಗಿರಿ ವಿಶ್ವವಿದ್ಯಾಲಯಕ್ಕೆ ಕೀರ್ತಿ ತಂದಿರುವ ಕ್ರೀಡಾಪಟುಗಳನ್ನು ಕಾಲೇಜಿನ ಪ್ರಾಂಶುಪಾಲೆ ಡಾ.ಬಿ.ಎಸ್.ಶೋಭಾ, ದೈಹಿಕ ಶಿಕ್ಷಣ ನಿರ್ದೇಶಕರೂ ಸೇರಿದಂತೆ ಎಸ್‌ಎಸ್‌ಐಟಿ ಪ್ರಾಂಶುಪಾಲರು, ವಿಭಾಗೀಯ ಮುಖ್ಯಸ್ಥರು ಹಾಗೂ ಸಿಬ್ಬಂದಿವರ್ಗ ಅಭಿನಂದಿಸಿದ್ದಾರೆ.