ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರ ಕಸಿದು ಪರಾರಿ

| Published : Jan 02 2025, 12:30 AM IST

ಸಾರಾಂಶ

ನಿಮ್ಮ ಮೊಮ್ಮಗನಿಗೆ ಹೆಣ್ಣು ತೋರಿಸುತ್ತೇನೆ ಎಂದು ಮಾತನಾಡುತ್ತಲೇ ಆಕೆಯನ್ನು ನಂಬಿಸಿ ಹಿಂಬದಿಯಿಂದ ಹಲ್ಲೇ ನಡೆಸಿ ಕೊರಳಲ್ಲಿದ್ದ 60 ಗ್ರಾಂ ಚಿನ್ನದ ಸರವನ್ನು ಕಿತ್ತು ಕೊಂಡು ಓಡಿಹೋಗಿದ್ದಾನೆ.

ಮಧುಗಿರಿ: ಪರಿಚಿತ ವ್ಯಕ್ತಿಯೊಬ್ಬ ನಿಮ್ಮ ಮೊಮ್ಮಗನಿಗೆ ಹೆಣ್ಣು ತೋರಿಸುವುದಾಗಿ ಮಹಿಳೆಯೊಬ್ಬರನ್ನು ನಂಬಿಸಿ ತನ್ನ ಮನೆಗೆ ಕರೆದುಕೊಂಡು ಹೋಗಿ ಹೆಣ್ಣಿನ ವಿಚಾರವಾಗಿ ಮಾತನಾಡುತ್ತಾ ಆಕೆಯೆ ಮೇಲೆ ಹಲ್ಲೆ ಮಾಡಿ ಕೊರಳಲ್ಲಿದ್ದ ಚಿನ್ನದ ಸರವನ್ನು ಕಸಿದು ಪರಾರಿಯಾಗಿರುವ ಘಟನೆ ಬುಧವಾರ ಮಧ್ಯಾಹ್ನ ಮಧುಗಿರಿಯಲ್ಲಿ ನಡೆದಿದೆ.

ಪಟ್ಟಣದ ಮಾರುತಿ ನಗರದ ನಿವಾಸಿ ನಾಗಮ್ಮ (62) ಎಂಬಾಕೆಯೇ ವಂಚನೆಗೆ ಒಳಗಾದ ಮಹಿಳೆ. ಕಸಬಾ ಕೆರೆಗಳಪಾಳ್ಯದಲ್ಲಿ ಹೋಟೆಲ್‌ ನೆಡೆಸುತ್ತಿರುವ ಪರಿಚಿತ ಸ್ಥಳೀಯ ವ್ಯಕ್ತಿ ನಂಜಪ (70) ಎಂಬಾತನೇ ನಾಗಮ್ಮನನ್ನು ಆತನ ಮನೆಗೆ ಕರೆದುಕೊಂಡು ಹೋಗಿ ನಿಮ್ಮ ಮೊಮ್ಮಗನಿಗೆ ಹೆಣ್ಣು ತೋರಿಸುತ್ತೇನೆ ಎಂದು ಮಾತನಾಡುತ್ತಲೇ ಆಕೆಯನ್ನು ನಂಬಿಸಿ ಹಿಂಬದಿಯಿಂದ ಹಲ್ಲೇ ನಡೆಸಿ ಕೊರಳಲ್ಲಿದ್ದ 60 ಗ್ರಾಂ ಚಿನ್ನದ ಸರವನ್ನು ಕಿತ್ತು ಕೊಂಡು ನಂತರ ಆಕೆಯನ್ನು ನೇಣು ಬಿಗಿಯಲು ಯತ್ನಿಸುತ್ತಿದ್ದಾಗ ನಾಗಮ್ಮಳ ಚೀರಾಟ, ಕೂಗಾಟ ಕೇಳಿಸಿಕೊಂಡು ನಂಜಪ್ಪನ ಮನೆಯ ಅಕ್ಕಪಕ್ಕದವರು ಮನೆ ಬಳಿ ಬಂದು ಆಕೆಯನ್ನು ಕಾಪಾಡಿದ್ದಾರೆ. ಅಲ್ಲದೆ ಕುತ್ತಿಗೆಗೆ ಬಿಗಿದಿದ್ದ ಹಗ್ಗವನ್ನು ತೆಗೆದು ತಕ್ಷಣ ಪೋಲಿಸರಿಗೆ ಕರೆ ಮಾಡಿದ್ದಾರೆ. ಇದರಿಂದ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ. ಆರೋಪಿ ನಂಜಪ್ಪ ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆ. ಮಧುಗಿ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.