ಸಾರಾಂಶ
ರಾಬರ್ಟ್‌ಸನ್ ಪೇಟೆಯಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 4,80,000 ರೂ. ಮೌಲ್ಯದ 6 ಕೆ.ಜಿ ಒಣ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಕೆಜಿಎಫ್: ರಾಬರ್ಟ್‌ಸನ್ ಪೇಟೆ ವೃತ್ತ ಪೊಲೀಸರು ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, 4,80 ,೦೦೦ ರು. ಮೌಲ್ಯದ 6 ಕೆಜಿ ಒಣ ಗಾಂಜಾ ವಶಪಡಿಸಿಕೊಂಡಿದ್ದಾರೆ.
ರಾಬರ್ಟ್‌ಸನ್‌ಪೇಟೆ ವ್ಯಾಪ್ತಿಯ ಪಾರಾಂಡಹಳ್ಳಿ ಕ್ರಿಕೆಟ್ ಮೈದಾನ ಸಮೀಪ ಗಾಂಜಾ ಮಾರಾಟವಾಗುತ್ತಿರುವ ಕುರಿತು ಮಾಹಿತಿ ಮೇರೆಗೆ ರಾಬರ್ಟ್‌ಸನ್‌ಪೇಟೆ ವೃತ್ತ ಸಿಪಿಐ ಪಿ.ಎಂ. ನವೀನ್ ಮತ್ತು ಸಿಬ್ಬಂದಿ ದಾಳಿ ನಡೆಸಿ, ಆಂಧ್ರಪ್ರದೇಶದ ಕುಪ್ಪಂ ತಾಲೂಕಿನ ಮನ್ಸೂರ್ (24), ಸದಾಶಿವರೆಡ್ಡಿ(22)ರನ್ನು ಬಂಧಿಸಿ, ಆರೋಪಿಗಳಿಂದ 4,80 ,೦೦೦ ರು. ಮೌಲ್ಯದ6 ಕೆ.ಜಿ ಒಣ ಗಾಂಜಾ ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಸಿಪಿಐ ಪಿ.ಎಂ.ನವೀನ್, ಸಿಬ್ಬಂದಿ ಗೋಪಿನಾಥ್, ಮುರಳಿ.ಸಿ, ರಘು.ಎಂ, ಬಸವರಾಜ ಕಾಂಬ್ಳೆ, ಗಜೇಂದ್ರ.ಎಸ್., ಚಾಲಕ ಸತ್ಯಪ್ರಕಾಶ್ ಇದ್ದರು.