ಸಾರಾಂಶ
ಹುಣಸಗಿ: ದಲಿತರು ಹಾಗೂ ಹಿಂದುಳಿದವರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಸಂಘಟನೆಯ ಎಲ್ಲ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಬೇಕು ಎಂದು ಡಿಎಸ್‌ಎಸ್ ರಾಜ್ಯ ಸಮಿತಿ ಸದಸ್ಯ ನಾಗಣ್ಣ ಬಡಿಗೇರ ಕರೆ ನೀಡಿದರು.
ಹುಣಸಗಿ ಪಟ್ಟಣದ ಶಾದಿ ಮಹಲ್‌ನಲ್ಲಿ ಹಮ್ಮಿಕೊಂಡಿದ್ದ ಡಿಎಸ್‌ಎಸ್ ಅಂಬೇಡ್ಕರ್ ವಾದ ಬಣದ ಸರ್ವ ಸದಸ್ಯರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕಾಗಿ ಸದಾ ಕಾರ್ಯನಿರ್ವಹಿಸವುದನ್ನು ಎಲ್ಲರೂ ರೂಢಿಸಿಕೊಳ್ಳುವಂತೆ ಕಿವಿ ಮಾತು ಹೇಳಿದರು.ರಾಜ್ಯ ಸಂಘಟನಾ ಸಂಚಾಲಕ ರಾಮಣ್ಣ ಕಲ್ಲದೇವನಹಳ್ಳಿ ಮಾತನಾಡಿ, ನಮ್ಮ ಸಂಘಟನೆಯಿಂದ ಹಲವಾರು ವರ್ಷಗಳ ಹೋರಾಟದ ಫಲವಾಗಿ ಇಂದು ದಲಿತರು ಸುಶಿಕ್ಷಿತರಾಗಿ ಸ್ವಾಭಿಮಾನಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ನಾಯಕರಾದ ಮಾವಳ್ಳಿ ಶಂಕರ್ ಅವರ ಕೊಡುಗೆ ಮರೆಯುವಂತಿಲ್ಲ ಎಂದರು.
ಡಾ.ಯೂಸುಫ್ ಡೆಕ್ಕನ್ ಮಾತನಾಡಿದರು. ಜಿಲ್ಲಾ ಸಂಚಾಲಕ ಮಾಳಪ್ಪ ಕಿರದಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ವೆಂಕೋಬ ದೊರೆ, ಪರಮಾನಂದ ಚಟ್ಟಿ, ಇಸ್ಮಾಯಿಲ್ ಬೆಣ್ಣಿ, ಬಸವರಾಜ ಮಾಸ್ತರ, ಪವಾಡೆಪ್ಪ ಕಕ್ಕೇರಿ, ಬಸವರಾಜ ಅಣಬಿ, ಅಶೋಕ ನಾಯ್ಕಲ್, ಪರಶುರಾಮ, ಭೀಮರಾಯ ಅಗ್ನಿ ಸೇರಿದಂತೆ ಇತರರು ಇದ್ದರು.
ಇದೇ ವೇಳೆ ತಾಲೂಕು ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ವೀರೇಶ ಗುಳಬಾಳ ( ತಾಲೂಕು ಸಂಚಾಲಕ), ಸಿದ್ದರಾಮ ಚನ್ನೂರ, ಪ್ರಭುಲಿಂಗ ದೊಡ್ಡಮನಿ, ರಾಮು ದೊಡ್ಡಮನಿ, ಹಣಮಂತ ಬಿಜ್ಜೂರ, ಬಲರಾಮ ಮಾಳಿ, ಸಂಗಮೇಶ ಕೊಡೇಕಲ್ಲ ಇವರುವನ್ನು ಸಂಘಟನಾ ಸಂಚಾಲಕರನ್ನಾಗಿ ಹಾಗೂ ಲಿಂಗರಾಜ ರಾಂಪುರ ಖಜಾಂಚಿಯನ್ನಾಗಿ ಆಯ್ಕೆ ಮಾಡಲಾಯಿತು.
;Resize=(128,128))
;Resize=(128,128))
;Resize=(128,128))