ಶೃಂಗೇರಿ: ಪ್ರಸ್ತುತ ಉಂಟಾಗುತ್ತಿರುವ ಜಾಗತಿಕ ತಾಪಮಾನ ವೈಪರೀತ್ಯದಿಂದ ಕೃಷಿ ಮೇಲೆ ಪರಿಣಾಮ ಬೀರಿ ಬೆಳೆಗಳು ವಿವಿಧ ರೋಗಗಳಿಗೆ ತುತ್ತಾಗಿ ಬೆಳೆನಾಶದಿಂದ ಮಲೆನಾಡಿನ ರೈತರ ಬದುಕು ಅತಂತ್ರ ಸ್ಥಿಯಲ್ಲಿದೆ ಎಂದು ಶಿವಮೊಗ್ಗ ನವಿಲೆ ಕೃಷಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಗಂಗಾಧರ ನಾಯ್ಕ ಹೇಳಿದರು.

ಪಟ್ಟಣದ ಆನೆಗುಂದ ಅಡಕೆ ಸಂಶೋಧನಾ ಕೇಂದ್ರದ ಆವರಣದಲ್ಲಿ ಆಯೋಜಿಸಲಾಗಿದ್ದ ರೈತ ದಿನಾಚರಣೆಯಲ್ಲಿ ಅಡಕೆ ಎಲೆ ಚುಕ್ಕಿ ರೋಗ ಪರಿಹಾರ ಕ್ರಮಗಳ ಕುರಿತು ಉಪನ್ಯಾಸ ನೀಡಿದರು. 2025 ರಲ್ಲಿ ರಾಜ್ಯದಲ್ಲಿ ಏಳುಲಕ್ಷ ಎಪ್ಪತ್ತು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಎಲೆ ಚುಕ್ಕಿ ರೋಗ ಆವರಿಸಿದೆ. ನಮ್ಮ ರಾಜ್ಯದಲ್ಲಿ ಶೇ 62 ರಷ್ಟು ಅಡಕೆ ಉತ್ಪಾದನೆ ಆಗುತ್ತಿದೆ. ಬಯಲು ಸೀಮೆಯಲ್ಲಿ ಅಡಕೆ ಬೆಳೆ ಹೆಚ್ಚಾಗಿ ಬೆಳೆಯಲಾಗುತ್ತಿದ್ದು 2 ಲಕ್ಷ ಹೆಕ್ಟೆರ್ ಪ್ರದೇಶಗಳಿಗೆ ಜಾಸ್ತಿಯಾಗಿದೆ.

ಮಲೆನಾಡಿನಲ್ಲಿ ಈ ಭಾರಿ ಅತಿವೃಷ್ಠಿಯಿಂದ ವಾತಾವರಣದಲ್ಲಿ ತೇವಾಂಶ ಕಡಿಮೆಯಾಗಿ ಬೆಳೆ ಕುಂಠಿತಗೊಳ್ಳುತ್ತಿದೆ.10 ರಿಂದ 14 ಡಿಗ್ರಿ ಉಷ್ಣಾಂಶ ಹೆಚ್ಚಿದ್ದು ರೋಗ ಉಲ್ಬಣಗೊಳ್ಳಲು ಪ್ರಮುಖ ಕಾರಣವಾಗಿದೆ. ಇಲಾಖೆ ಶಿಪಾರಸ್ಸು ಮಾಡಿದ ಶಿಲೀಂದ್ರ ನಾಶಕವನ್ನು ಗಿಡಗಳ ಮೇಲೆ ಸಿಂಪಡಿಸಿದರೆ ರೋಗ ನಿಯಂತ್ರಣಕ್ಕೆ ತರಬಹುದಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಪ್ರಗತಿಪರ ಕೃಷಿಕರಾದ ಪ್ರೇಮ್ ಕುಮಾರ್, ಅನೂಪ್ ಶೆಟ್ಟಿಹಳ್ಳಿಯವರನ್ನು ಸನ್ಮಾನಿಸಲಾಯಿತು. ಕೃಷಿಕ ಸಮಾಜದ ಗೋಪಾಲ ಹೆಗ್ಡೆ, ರೈತಸಂಘದ ಕಾನೋಳ್ಳಿ ಚಂದ್ರಶೇಖರ್, ತೋಟಗಾರಿಕೆ ಇಲಾಖೆ ಶ್ರೀಕೃಷ್ಣ, ಅಡಕೆ ಸಂಶೋಧನಾ ಕೇಂದ್ರದ ಡಾ.ಸಂಜೀವ ಜಕಾತಿಮಠ, ಶ್ರೀಧರ್ ಎಂ.ಜಿ.ಮತ್ತಿತರರು ಉಪಸ್ಥಿತರಿದ್ದರು.

23 ಶ್ರೀ ಚಿತ್ರ 3-

ಶೃಂಗೇರಿ ಆನೆಗುಂದ ಅಡಕೆ ಸಂಶೋಧನಾ ಕೇಂದ್ರದಲ್ಲಿ ನಡೆದ ರೈತದಿನಾಚರಣೆಯಲ್ಲಿ ಪ್ರಗತಿಪರ ಕೃಷಿಕರಾದ ಪ್ರೇಮ್ ಕುಮಾರ್,ಅನೂಪ್ ಶೆಟ್ಟಿಹಳ್ಳಿಯವರನ್ನು ಸನ್ಮಾನಿಸಲಾಯಿತು.