ಮಾನ್ಯಾ ಪಾಟೀಲ ಹತ್ಯೆ ನಾಗರಿಕ ಜಗತ್ತಿಗೆ ದಿಗ್ಭ್ರಮೆ ತಂದಿದೆ. ಭಾರತದ ಸ್ತ್ರೀ-ಪುರುಷರೆಲ್ಲರಿಗೂ ಆಯ್ಕೆಯ ಸ್ವಾತಂತ್ರ‍್ಯ, ಸಮಾನತೆ, ಘನತೆಯ ಬದುಕು ನೀಡಿರುವ ಸಂವಿಧಾನಕ್ಕೆ ಬೆಲೆ ಎಲ್ಲಿದೆ? ಹೆಣ್ಣು ಸ್ವತಂತ್ರವಾಗಿ ಯೋಚಿಸಕೂಡದು, ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಕೂಡದು ಎಂಬ ಧೋರಣೆ ಇನ್ನೂ ನಮ್ಮ ನಡುವೆ ಎದ್ದು ಕುಣಿಯುತ್ತಿರುವುದೇಕೆ?.

ಧಾರವಾಡ:

ಇನಾಂ ವೀರಾಪುರದಲ್ಲಿ ನಡೆದ ಮಾನ್ಯಾ ಪಾಟೀಲ ಮರ್ಯಾದಾ ಹತ್ಯೆ ಹಾಗೂ ದಲಿತ ಕುಟುಂಬದ ಮೇಲಿನ ಮಾರಣಾಂತಿಕ ಹಲ್ಯೆ ಖಂಡಿಸಿ ಬುಧವಾರ ವಿವಿಧ ಜನಪರ ಸಂಘಟನೆಗಳಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಈ ಹತ್ಯೆ ನಾಗರಿಕ ಜಗತ್ತಿಗೆ ದಿಗ್ಭ್ರಮೆ ತಂದಿದೆ. ಭಾರತದ ಸ್ತ್ರೀ-ಪುರುಷರೆಲ್ಲರಿಗೂ ಆಯ್ಕೆಯ ಸ್ವಾತಂತ್ರ‍್ಯ, ಸಮಾನತೆ, ಘನತೆಯ ಬದುಕು ನೀಡಿರುವ ಸಂವಿಧಾನಕ್ಕೆ ಬೆಲೆ ಎಲ್ಲಿದೆ? ಹೆಣ್ಣು ಸ್ವತಂತ್ರವಾಗಿ ಯೋಚಿಸಕೂಡದು, ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಕೂಡದು ಎಂಬ ಧೋರಣೆ ಇನ್ನೂ ನಮ್ಮ ನಡುವೆ ಎದ್ದು ಕುಣಿಯುತ್ತಿರುವುದೇಕೆ? ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ, ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯ ಪ್ರಭಾವತಿ ದೇಸಾಯಿ, ಸಾಧನಾ ಮಾನವ ಹಕ್ಕುಗಳ ವೇದಿಕೆ ಮುಖ್ಯಸ್ಥರಾದ ಡಾ. ಇಸಾಬೆಲ್ಲಾ ಝೇವಿಯರ್, ಕಲಾವಿದೆ ವಿಶ್ವೇಶ್ವರಿ ಹಿರೇಮಠ, ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ನಾಗರಾಜ ಚಲವಾದಿ, ರೈತ ಮುಖಂಡ ರವಿರಾಜ ಕಂಬಳಿ ಮರ್ಯಾದಾಗೇಡು ಹತ್ಯೆ ಖಂಡಿಸಿ ಮಾತನಾಡಿದರು.

ಒಂಟಿ ಮಹಿಳೆಯರ ಸಂಘದ ಜಿಲ್ಲಾಧ್ಯಕ್ಷರಾದ ಮಂಜುಳಾ ಪವಾರ, ಪ್ರಮಿಳಾ ಜಕ್ಕಣ್ಣವರ, ಬಿ.ಎನ್. ಪೂಜಾರಿ, ಲಿನೆಟ್ ಡಿಸೇಲ್ವ, ಸುಹಾಸಿನಿ, ಎ.ಎಂ. ಖಾನ್, ಎಚ್.ಜಿ. ದೇಸಾಯಿ, ಸಂಗೀತಾ ಗೌಡ, ಗುರುಸಿದ್ದಪ್ಪ ಅಂಬಿಗೇರ, ರಾಘವೇಂದ್ರ ಪಾಟೀಲ, ಪರಶುರಾಮ ಮಂದಾರ, ಶ್ರೀನಿವಾಸ ನಾಯಕ, ಸರ್ವೇಶ ಕಂಬದಾಳ ಇದ್ದರು.