ಕೆಜಿಎಫ್:ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆಗಳ ಕಳ್ಳತನಕ್ಕೆ ಸಂಬಂಧಿಸಿದ ೫ ಪ್ರಕರಣಗಳಲ್ಲಿ ೧೭ ಜನರ ಆರೋಪಿಗಳನ್ನು ಬಂಧಿಸಿ ಅವರಿಂದ ೭೮.೬೮ ಲಕ್ಷ ರು.ಗಳ ಬೆಲೆ ಬಾಳುವ ೫೬೨ ಗ್ರಾಂ ಚಿನ್ನದ ಓಡವೆಗಳನ್ನು ವಶಪಡಿಸಿಕೊಳ್ಳಾಗಿದೆ ಎಂದು ಎಸ್ಪಿ ಶಿವಾಂಸು ರಜಪೂತ ತಿಳಿಸಿದ್ದಾರೆ.ರಾಬರ್ಟ್‌ಸನ್‌ಪೇಟೆಯ ನೀತೀಶ್‌ ಕುಮಾರ್ ಅವರ ಅಂಗಡಿಯಲ್ಲಿ ೧.೯೩ ಕೆಜಿ ಚಿನ್ನದ ಓಡವೆಗಳು ಕಳವು ಮಾಡಲಾಗಿದ್ದು, ಅದರಲ್ಲಿ ೪೦೦ ಗ್ರಾಂ ಚಿನ್ನದ ಓಡವೆಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಅರುಣ್‌ಕುಮಾರ್ ಎಂಬುವವರ ಮನೆಯಲ್ಲಿ ಬೀಗ ಮುರಿದು ೨೬ ಗ್ರಾಂ ಚಿನ್ನದ ಓಡವೆಗಳನ್ನು ಕಳವು ಮಾಡಿದ್ದು, ಇದರಲ್ಲಿ ೧೬ ಗ್ರಾಂ ಚಿನ್ನದ ಓಡವೆಗಳನ್ನು ಕಳ್ಳರಿಂದ ವಶಪಡಿಸಿಕೊಳ್ಳಲಾಗಿದೆ. ಸುಂದರಮ್ಮಾಳ್ ಎಂಬುವವರ ಮನೆಯಲ್ಲಿ ೧೨೦ ಗ್ರಾಂ ಚಿನ್ನ ಮತ್ತು ಬೆಳ್ಳಿ ಒಡೆವೆಗಳನ್ನು ದೋಚಿದ್ದ ಕಳ್ಳರು ಇದರಲ್ಲಿ ೮೦ ಗ್ರಾಂ ಚಿನ್ನದ ಓಡವೆಗಳು, ೪೦೦ ಗ್ರಾಂ ಬೆಳ್ಳಿಯನ್ನು ಕಳ್ಳರಿಂದ ವಶಪಡಿಕೊಳ್ಳಲಾಗಿದೆ. ನಂದು ಎಂಬುವವರ ಮನೆಯಲ್ಲಿ ೯೦ ಗ್ರಾಂ ಚಿನ್ನದ ಓಡವೆಗಳನ್ನು ಕಳವು ಮಾಡಿದ್ದು ಇದರಲ್ಲಿ ೧೨ ಗ್ರಾಂ ಚಿನ್ನದ ಓಡವೆಗಳನ್ನು ಕಳ್ಳರಿಂದ ವಶಪಡಿಕೊಂಡು ಮಾಲೀಕರಿಗೆ ನ್ಯಾಯಾಲಯದ ಮೂಲಕ ಹಿಂದಿರಿಗಿಸಲಾಗುವುದೆಂದು ಎಸ್ಪಿ ಶಿವಾಂಶು ರಜಪೂತ್ ತಿಳಿಸಿದರು.ಐದು ಪ್ರಕರಣಗಳಲ್ಲಿ ಡಿವೈಎಸ್ಪಿ ಲಕ್ಷ್ಮಯ್ಯನವರ ಮಾರ್ಗದರ್ಶನದಲ್ಲಿ ರಾಬರ್ಟ್ಸನ್ ವೃತ್ತನೀರಿಕ್ಷಕರಾದ ನವೀನ್, ಅನಿಲ್ ಠಾಣಾಧಿಕಾರಿ ಮಹೇಶ್‌ಮಾಳಿ ಅವರು ಹೊರರಾಜ್ಯದ ಕಳ್ಳರು ಹಾಗೂ ಸ್ಥಳೀಯ ೧೭ ಆರೋಪಿಗಳನ್ನು ಬಂಧಿಸಿ ಪೊಲೀಸ್ ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಎಸ್ಪಿ ಶಿವಾಂಶು ರಜಪೂತ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.೧೩ಕೆಜಿಎಫ್೩ಕಳವು ಮಾಡಿದ್ದ ಚಿನ್ನಾಭರಣಗಳೊಂದಿಗೆ ಎಸ್ಪಿ.ಶಿವಾಂಶುರಜಪೂತ, ಡಿವೈಎಸ್ಪಿ ಲಕ್ಷö್ಮಯ್ಯ ಹಾಗೂ ಸಿಬ್ಬಂದಿಗಳು.