ಸರ್ಕಾರದ ಯೋಜನೆ ರೈತರಿಗೆ ತಲುಪಿಸಿವ ಗುರಿ: ಹನುಮಂತ ಮಾವಿನಮರದ

| Published : Jun 13 2024, 12:48 AM IST

ಸರ್ಕಾರದ ಯೋಜನೆ ರೈತರಿಗೆ ತಲುಪಿಸಿವ ಗುರಿ: ಹನುಮಂತ ಮಾವಿನಮರದ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರ ನೀಡುವ ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ರೈತರಿಗೆ ಮತ್ತು ಗ್ರಾಹಕರಿಗೆ ತಲುಪಿಸುವ ಕಾರ್ಯವನ್ನು ಕೋಟೆಕಲ್ ಪಿಕೆಪಿಎಸ್ ಮಾಡುತ್ತಿದೆ. ರೈತರು ವಿವಿಧ ಸವಲತ್ತುಗಳನ್ನು ಪಿಕೆಪಿಎಸ್ ದಿಂದ ಪಡೆದುಕೊಳ್ಳಬೇಕೆಂದು ಕೋಟೆಕಲ್ ಪಿಕೆಪಿಎಸ್ ಅಧ್ಯಕ್ಷ ಹನುಮಂತ ಮಾವಿನಮರದ ಹೇಳಿದರು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಸರ್ಕಾರ ನೀಡುವ ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ರೈತರಿಗೆ ಮತ್ತು ಗ್ರಾಹಕರಿಗೆ ತಲುಪಿಸುವ ಕಾರ್ಯವನ್ನು ಕೋಟೆಕಲ್ ಪಿಕೆಪಿಎಸ್ ಮಾಡುತ್ತಿದೆ. ರೈತರು ವಿವಿಧ ಸವಲತ್ತುಗಳನ್ನು ಪಿಕೆಪಿಎಸ್ ದಿಂದ ಪಡೆದುಕೊಳ್ಳಬೇಕೆಂದು ಕೋಟೆಕಲ್ ಪಿಕೆಪಿಎಸ್ ಅಧ್ಯಕ್ಷ ಹನುಮಂತ ಮಾವಿನಮರದ ಹೇಳಿದರು.

ಸೋಮವಾರ ಪಟ್ಟಣದಲ್ಲಿ ನಬಾರ್ಡ್‌ ಹಾಗೂ ಬಿ.ಡಿ.ಸಿ.ಸಿ. ಬ್ಯಾಂಕಿನ ಪ್ಯಾಕ್ಸ್ ಆಜ್ ಎಂಎಸ್ಸಿ ಯೋಜನೆ ಅಡಿಯಲ್ಲಿ ₹97.17 ಲಕ್ಷ ವ್ಯಾಪಾರ ಮಳಿಗೆ ನಿವೇಶನದ ಭೂಮಿಪೂಜೆ ಬಳಿಕ ಮಾತನಾಡಿ, ಇಲ್ಲಿ ನಿರ್ಮಾಣವಾಗಲಿರುವ ಮಳಿಗೆಗಳನ್ನು ಬಾಡಿಗೆ ರೂಪದಲ್ಲಿ ಕೊಡುವ, ಗ್ರಾಹಕರಿಗೆ ಯೋಗ್ಯ ಬೆಲೆಗೆ ಆಹಾರೋತ್ಪನ್ನ, ಕೃಷಿ ಉಪಕರಣ, ಗೊಬ್ಬರ, ಕ್ರಿಮಿನಾಶಕ ಇತ್ಯಾದಿಗಳನ್ನು ಮಾರಾಟ ಮಾಡುವ ವ್ಯವಸ್ಥೆ ಮಾಡುವ ಉದ್ದೇಶ ಹೊಂದಲಾಗಿದೆ. ಈ ಅನುದಾನ ದೊರಕುವಲ್ಲಿ ಬಾಗಲಕೋಟೆ ಬಿಡಿಸಿಸಿ ಬ್ಯಾಂಕಿನ ನಿರ್ದೇಶಕ ಕುಮಾರಗೌಡ ಜನಾಲಿ ಅವರ ಪಾತ್ರ ಮಹತ್ವದ್ದಾಗಿದೆ. ಅವರಿಗೆ ನಾವು ಕೃತಜ್ಞರಾಗಿದ್ದೇವೆ ಎಂದರು.

ಇತ್ತೀಚೆಗೆ ಅಪಘಾತದಲ್ಲಿ ನಿಧನರಾದ ಸಂಘದ ಸದಸ್ಯ ನಾಗೇಶ ಆಲೂರ ಅವರ ಪತ್ನಿಗೆ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ ಅಡಿಯಲ್ಲಿ ಅಪಘಾತ ವಿಮೆಯ ₹ 2 ಲಕ್ಷ ಚೆಕ್ ನೀಡಲಾಯಿತು. ಭೂಮಿಪೂಜೆ ಸಂದರ್ಭದಲ್ಲಿ ಕೋಟೆಕಲ್-ಕಮತಗಿಯ ಹೊಳೆಹುಚ್ಚೇಶ್ವರ ಶ್ರೀಗಳು, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಮಾರಗೌಡ ಜನಾಲಿ, ಕೋಟೆಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಲಕ್ಷ್ಮಣ ಹಾಲನ್ನವರ, ನಿರ್ದೇಶಕರಾದ ಸಂಗಪ್ಪ ಹಡಪದ, ಯಲಗುರ್ದಪ್ಪ ತೊಗಲಂಗಿ, ಮಹಾಲಿಂಗ ಹಾವಡಿ, ವೈ.ಬಿ. ರಾಠೋಡ, ಮಾಗುಂಡಪ್ಪ ಸುಂಕದ, ಡಿ.ಆರ್. ಗದ್ದನಕೇರಿ, ಎಸ್.ವಿ. ತಿಪ್ಪಾ, ಎನ್.ಪಿ. ಕಳ್ಳಿಗುಡ್ಡ, ಎಸ್.ಡಿ. ಅಬಕಾರಿ, ಬಿಡಿಸಿಸಿ ಬ್ಯಾಂಕ್ ಸುಪ್ರವೈಜರ್ ಸವಿತಾ ಪಟ್ಟಣಶೆಟ್ಟಿ, ಪಿಕೆಪಿಎಸ್ ವ್ಯವಸ್ಥಾಪಕ ಚಂದ್ರಶೇಖರ ಕಲ್ಯಾಣಿ, ಶಾಂತವೀರಯ್ಯ ಹುಚ್ಚೇಶ್ವರಮಠ, ಗುತ್ತಿಗೆದಾರ ಎ.ಕೆ. ಮುಲ್ಲಾ ಡಿಸಿಸಿ ಬ್ಯಾಂಕ್ ಮ್ಯಾನೇಜರ್ ವೆಂಕನಗೌಡ ಪಾಟೀಲ ಸೇರಿದಂತೆ ಇನ್ನಿತರರು ಇದ್ದರು.