ಸಾರಾಂಶ
ರಾಜ್ಯಪಾಲರು ಸಂವಿಧಾನ ವಿರೋಧಿಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಸಂದರ್ಭದಲ್ಲಿ ಸಂವಿಧಾನದ ಮೂಲ ತತ್ವಗಳನ್ನು ಹಾಗೂ ಪ್ರಜಾಪ್ರಭುತ್ವದ ಆಶಯಗಳನ್ನು ಗಾಳಿಗೆ ತೂರಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಡ್ಯ
ರಾಜ್ಯಪಾಲರು ಸಂವಿಧಾನ ವಿರೋಧಿಯಾಗಿದ್ದಾರೆ ಎಂದು ಆರೋಪಿಸಿ ನಗರದಲ್ಲಿ ಕರ್ನಾಟಕ ಶೋಷಿತರ ಮಹಾ ಒಕ್ಕೂಟ ಪದಾಧಿಕಾರಿಗಳು ಗೋಬ್ಯಾಕ್ ಚಳವಳಿ ನಡೆಸಿದರು.ನಗರದ ಜಯಚಾಮರಾಜ ಒಡೆಯರ್ ವೃತ್ತದಲ್ಲಿ ಸೇರಿದ ಒಕ್ಕೂಟ ಪದಾಧಿಕಾರಿಗಳು, ರಾಜ್ಯಪಾಲಪಾಲ ತಾವರ್ ಚಂದ್ ಗೆಲ್ಹೋಟ್ ರನ್ನು ರಾಷ್ಟ್ರಪತಿಗಳು ವಾಪಸ್ ಕರೆಸಿಕೊಳ್ಳಬೇಕು. ಗೋಬ್ಯಾಕ್ ರಾಜ್ಯಪಾಲರೇ ಎಂದು ಘೋಷಣೆ ಕೂಗಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಸಂದರ್ಭದಲ್ಲಿ ಸಂವಿಧಾನದ ಮೂಲ ತತ್ವಗಳನ್ನು ಹಾಗೂ ಪ್ರಜಾಪ್ರಭುತ್ವದ ಆಶಯಗಳನ್ನು ಗಾಳಿಗೆ ತೂರಿದ್ದಾರೆ ಎಂದು ಕಿಡಿಕಾರಿದರು.ರಾಜ್ಯಪಾಲರ ವಿರುದ್ಧ ಪ್ರತಿಭಟನೆ, ಕಪ್ಪುಬಾವುಟ ಪ್ರದರ್ಶನ ಹಮ್ಮಿಕೊಂಡಿದ್ದಾರೆ ಎಂಬ ಸುದ್ದಿ ತಿಳಿದು ಮಂಡ್ಯಕ್ಕೆ ಇಂದು ಬಾರದಿರುವುದು ನಾಚಿಕೆಗೇಡಿನ ವಿಚಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕುರುಬರ ಸಂಘದ ಮಾಜಿ ಅಧ್ಯಕ್ಷ ಕೆ.ಎಚ್.ನಾಗರಾಜು, ಡಿ.ದೇವರಾಜ ಅರಸು ಹಿಂದುಳಿದ ವೇದಿಕೆ ಅಧ್ಯಕ್ಷ ಎಲ್.ಸಂದೇಶ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಂಡಹಳ್ಳಿ ಮಂಜುನಾಥ್, ನಗರಸಭಾ ಸದಸ್ಯ ಶ್ರೀಧರ್, ಮಾಜಿ ಸದಸ್ಯ ಶಿವನಂಜು, ಶೋಷಿತ ಸಮಾಜಗಳ ಮುಖಂಡರಾದ ಎಂ.ಎಸ್.ರಾಜಣ್ಣ, ಮುಜಾಹಿದ್ , ಅಜಾಯಿದ್ ಪಾಷಾ, ನಾಗರತ್ನ, ಎನ್. ದೊಡ್ಡಯ್ಯ ,ಡಿ.ರಮೇಶ್ , ಬಿ ಲಿಂಗಯ್ಯ, ಸಿ.ಎಂ.ದ್ಯಾವಪ್ಪ, ಶಿವಳ್ಳಿ ದೇವರಾಜ್, ಪ್ರಕಾಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.ಗೀತಾ ಮತ್ತು ರವೀಂದ್ರ ಕಾಮತ್ ಗೆ ಅಭಿನಂದನೆಮಂಡ್ಯ:ಪತಂಜಲಿ ಯೋಗ ಶಿಕ್ಷಣ ಸಮಿತಿ ಹಾಗೂ ಪರಿಸರ ರೂರಲ್ ಡೆವಲಪ್ಮೆಂಟ್ ಸೊಸೈಟಿ ಮಮತೆಯ ಮಡಿಲು ಮಂಗಲ ಹಾಗೂ ಮಹಾಮಾಯ ಚೈಲ್ಡ್ ಕೇರ್‌ನಿಂದ ನಡೆಯುತ್ತಿರುವ ಮಹಿಳೆಯರಿಗಾಗಿ ಉಚಿತ ಯೋಗ ತರಬೇತಿ ಶಿಬಿರದಲ್ಲಿ ಗೀತಾ ಕಾಮತ್ ಹಾಗೂ ರವೀಂದ್ರ ಕಾಮತ್ ಅವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಪತಾಂಜಲಿ ಯೋಗ ಸಮಿತಿ ಶಂಕರನಾರಾಯಣ ಶಾಸ್ತ್ರಿ, ರವಿ, ಪದ್ಮ ಹಾಗೂ ಪರಿಸರ ಸಂಸ್ಥೆ ಕಾರ್ಯದರ್ಶಿ ಕೆ.ಪಿ.ಅರುಣಾಕುಮಾರಿ ಸೇರಿದಂತೆ ಹಲವರು ಇದ್ದರು.